Chitradurga news|Nammajana.com|12-7-2025
ನಮ್ಮಜನ.ಕಾಂ, ಚಿತ್ರದುರ್ಗ: ಹಲವಾರು ಜಿಲ್ಲೆಗಳ ಬದುಕಿನ ಜೀವನಾಡಿ ಭದ್ರಾ ಡ್ಯಾಂ ಇತಿಹಾದಲ್ಲಿಯೇ ಇದೇ ಮೊದಲ ಬಾರಿ ಜುಲೈ ಎರಡನೇ ವಾರದಲ್ಲಿ ಗೇಟ್ ತೆರೆದು ನದಿಗೆ ನೀರು (Bhadra Reservoir) ಹರಿಸಲಾಗಿದೆ. ಜಲಾಶಯ ತುಂಬಲು ಇನ್ನೂ 11 ಅಡಿ ಬಾಕಿಯಿದ್ದು 174.4 ಆಡಿ ನೀರಿನಮಟ್ಟ ಇರುವಾಗಲೇ ಕ್ರಸ್ಟ್‌ಗೇಟ್ ತೆರೆಯಲಾಗಿದೆ.
ಮುಂಗಾರು ಹಂಗಾಮಿನ ಭತ್ತದ ಬೆಳೆಗೆ ನೀರು ಹರಿಸುವ ಮುನ್ನವೇ ಇದೇ ಮೊದಲ. ನದಿಗೆ ನೀರು ಹರಿಸಲಾಗಿದೆ. ಶುಕ್ರವಾರ ಸಂಜೆ ನಾಲ್ಕು ಸುಮಾರಿಗೆ ಕ್ರಸ್ಟ್‌ಗೇಟ್ ತೆರೆದು ಸುಮಾರು 3,300 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ.

ಕಳೆದ ನಾಲ್ಕು ದಿನದಿಂದ ಭದ್ರಾ, ಜಲಾನಯನ ಪ್ರದೇಶದಲ್ಲಿ ಮಳೆ ಕ್ಷೀಣಿಸಿ, ಒಳ ಹರಿವು 11,991 ಕ್ಯೂಸೆಕ್ ಗೆ ಕುಸಿದಿತ್ತು. ಆದರೆ, ಶುಕ್ರವಾರದಿಂದ ಮಲೆನಾಡಿನಲ್ಲಿ ಮಳೆ ಬಿರುಸು ಪಡೆದುಕೊಂಡಿದ್ದು, ಒಳಹರಿವು ಹೆಚ್ಚಬಹುದು ಎಂದು (Bhadra Reservoir) ಅಂದಾಜಿಸಲಾಗಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಕ್ಲಸ್ಟ್ ಗೇಟ್ ತೆರೆದು ನದಿಗೆ ನೀರು ಹರಿಸಲಾಗಿದೆ ಎಂದು ಭದ್ರಾ ಎಂಜಿನಿಯರ್ ತಿಳಿಸಿದ್ದಾರೆ.
ತುಂಬಿದ ಜುಲೈ ತಿಂಗಳ
5.31,1967
ಏ.27, 2013
ಏ.30, 2024
ಕ್ರಸ್ಟ್ ತೆರೆದ ವರ್ಷ
ಏ. 26, 2013
0.23, 2018
ಏ. 15,2022
ಏ. 30, 2024
ಸರಕಾರದ ಸೂಚನೆ: ಸಾಮನ್ಯವಾಗಿ ಭದ್ರಾ ಡ್ಯಾಂಗೆ ಜೂನ್ಎರಡನೇ ವಾರದ ನಂತರವೇ ಒಳ ಹರಿವು (Bhadra Reservoir) ಶುರುವಾಗುತ್ತಿತ್ತು. ಆದರೆ ಈ ಬಾರಿ ಅವಧಿಗೂ ಒಂದು ವಾರ ಮುನ್ನವೇ ಮುಂಗಾರು ಮಳೆ ಆರಂಭವಾಗಿ ಮೇ 26 ರಿಂದಲೇ ಡ್ಯಾಂಗೆ ಒಳ ಹರಿವು ಶುರುವಾಯಿತು. ಈವರೆಗೂ ಡ್ಯಾಂಗೆ 37 ಅಡಿ ನೀರು ಹರಿದು ಬಂದಿದ್ದು, ಶುಕ್ರವಾರದ ಮುಂಜಾನೆ ವೇಳೆಗೆ ಡ್ಯಾಂ ನೀರಿನ ಮಟ್ಟ 174.4 ಅಡಿ ತಲುಪಿತ್ತು. ಇನ್ನು ಮಳೆಗಾಲ ಹೆಚ್ಚಿದ್ದು ಮುಂಜಾಗ್ರತಾ ಕ್ರಮವಾಗಿ ಡ್ಯಾಂ ತುಂಬಲು ಇನ್ನೂ 11 ಆಡಿ ಬಾಕಿಯಿರುವಾಗಲೇ ನದಿಗೆ ನೀರು ಹರಿಸಲಾಗಿದೆ ಎಂದು ಎಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ನೀರು ಹರಿಸಿಲ್ಲ, ಕೇವಲ 3,300 ಕ್ಯೂಸೆಕ್ ಮಾತ್ರ ಬಿಡಲಾಗಿದೆ. ಈಗಿರುವ ಒಳ ಹರಿವಿಗೆ ದಿನಕ್ಕೆ ಒಂದು ಅಡಿ ನೀರು ಶೇಖರಣೆ ಆಗುತ್ತಿದ್ದು ಇನ್ನೂ ನಾಲೈದು ದಿನದಲ್ಲಿ ಡ್ಯಾಂ ನೀರಿನ ಮಟ್ಟ 180 ಆಡಿ ಮುಟ್ಟಲಿದೆ. ಮಳೆ ಚುರುಕಾದರೆ ಭದ್ರಾ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ ಗಳ ಮೂಲಕ ಶುಕ್ರವಾರ ನದಿಗೆ ನೀರು ಹರಿಸಲಾಯಿತು.
ಇನ್ನೂ ಬೇಗ ಡ್ಯಾಂ ತುಂಬಲಿದೆ ಎಂದು ಎಂಜಿನಿಯರ್‌ಗಳು ಹೇಳುತ್ತಿದ್ದಾರೆ.
2018ರಲ್ಲಿ ಇದೇ ರೀತಿ ಜುಲೈ 23ರಂದು ಡ್ಯಾಂ ತುಂಬುವ ಮುನ್ನವೇ ಕ್ರಸ್ಟ್‌ಗೇಟ್ ತೆರೆಯಲಾಗಿತ್ತು. 2022 ರಲ್ಲೂ ಜು.15ರಂದು ನೀರು ಬಿಡಲಾಗಿತ್ತು. ಈ ವರ್ಷ ಜು.11 ರಂದೇ ಗೇಟ್ ತೆರೆಯಲಾಗಿದೆ.
ಇದನ್ನೂ ಓದಿ: ಕಣಿವೆ ಆಂಜನೇಯ ಸ್ವಾಮಿ ಭಕ್ತರಿಗೆ ಇಂದು ರಾಗಿ ಮುದ್ದೆ, ಸೊಪ್ಪಿನ ಸಾರು ಪ್ರಸಾದ | Anjaneyaswamy
ಅವಧಿಗೂ ಮುನ್ನ ಮುಂಗಾರು ಪ್ರವೇಶ
ಅವಧಿಗೂ ಮುನ್ನವೇ ಮುಂಗಾರುಪ್ರವೇಶದ ಹಿನ್ನೆಲೆ ಸರಕಾರದ ಸೂಚನೆಯಂತೆ ಡ್ಯಾಂ ಭರ್ತಿಗೆ 11 ಅಡಿ ಬಾಕಿಯಿರುವಾಗಲೇ ಕ್ರಸ್ಟ್ ಗೇಟ್ ತೆರೆದು ನದಿಗೆ 3,300 ಕ್ಯೂಸೆಕ್ ನೀರು ಹರಿಸಲಾಗಿದೆ.
– ಸತೀಶ್ ಎಇಇ, ಭದ್ರಾ ಎಂಜಿನಿಯರಿಂಗ್ ವಿಭಾಗ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252