Chitradurga news|nammajana.com|14-10-2024
ನಮ್ಮಜನ.ಕಾಂ, ಸಿರಿಗೆರೆ: ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ತುಂಗಾಭದ್ರೆಯಿಂದ ಹರಿದು ಬರುತ್ತಿರುವ ನೀರಿನಿಂದ ತುಂಬಿ ಕೋಡಿ ಹರಿದಿರುವ (Bharamasagara) ಭರಮಸಾಗರದ ಜೋಡಿ ಕೆರೆಗಳಿಗೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ಶಾಸಕ ಡಾ.ಎಂ.ಚಂದ್ರಪ್ಪ ಒಟ್ಟುಗೂಡಿ ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡದ ಶ್ರೀಗಳು, ಏತ ನೀರಾವರಿ ಯೋಜನೆ ಯು ಅಮೆರಿಕಕ್ಕೂ ಸುದ್ದಿಯಾಗಿದ್ದು, ಅಮೆರಿಕಾದ ಕ್ಯಾಲಿಫೋ ರ್ನಿಯ ವಿಶ್ವವಿದ್ಯಾಲಯ ಅಧ್ಯಯನದ ಪೋಸ್ಟ್ ಡಾಕ್ಟರಲ್ ಸ್ಟಡೀಸ್ ವಿಷಯವನ್ನಾಗಿ ಈ ಯೋಜನೆ ಯನ್ನು ಯನ್ನು ಆಯ್ಕೆ ಮಾಡಿ ಕೊಳ್ಳಲಾಗಿದೆ. ಏತ ನೀರಾವರಿ ಯೋಜನೆ ಬೆಳೆದು (Bharamasagara) ಬಂದ ದಾರಿ ಹಾಗೂ ಇದರ ಉಪ ಯೋಗ ಬಗ್ಗೆ ಅಧ್ಯಯನ ಯನ ನಡೆಯಲಿದೆ.ಕೆರೆದಂಡೆಗೆ ಅಡಿಕೆ ಸಿಪ್ಪೆ ಹಾಕುವುದು ಕಾನೂನು ಬಾಹಿರ. ಆದರೆ ಇವತ್ತು ಕಾನೂನಿಗೆ ಹೆದರುವುದಿಲ್ಲ.
ಕಾನೂನು ಕ್ರಮ ಕೈಗೊಂಡರೂ ಸಹ ಯಾರು ಬುದ್ದಿ ಕಲಿಯುವುದಿಲ್ಲ. ಇದಕ್ಕೆ ಇದೊಂದೇ ಪರಿಹಾರ ಅಲ್ಲ. ಎಲ್ಲರಿಗೂ ಧರ್ಮದ ಬಗ್ಗೆ ಅಪಾರ ಗೌರವ, ನಿಷ್ಠೆ ಇದೆ. ಹಾಗಾಗಿ (Bharamasagara) ಅಂತವರಿಗೆ ಧರ್ಮದ ಹಾದಿಯಲ್ಲಿ ತಿಳಿ ಹೇಳಬೇಕು ಎಂದು ಹೇಳಿದರು.
ಶಾಂತಿವನದಲ್ಲಿ ಅಡಿಕೆ ಸಿಪ್ಪೆಯನ್ನು ಗೊಬ್ಬರವಾಗಿ ಪರಿವರ್ತನೆ ಮಾಡುವ ಕೆಲಸ ನಡೆಯುತ್ತದೆ. ಕೆರೆಯ ಸುತ್ತಮುತ್ತ ಹಾಕಿರುವ ಎಲ್ಲಾ ಅಡಿಕೆ ಸಿಪ್ಪೆಯನ್ನು ಪೂರ್ಣ ಪ್ರಮಾಣದಲ್ಲಿ ತೆಗೆದು (Bharamasagara) ಸಿರಿಗೆರೆ ಶಾಂತಿವನಕ್ಕೆ ರವಾನಿಸಲು ತಿಳಿಸಿದ್ದೇವೆ ಎಂದು ಶ್ರೀಗಳು ತಿಳಿಸಿದರು.
ನೀರಾವರಿ ನಿಗಮದ ಮಾಜಿ ಎಂ.ಡಿ.ಮಲ್ಲಿಕಾರ್ಜುನ ಗುಂಗೆ, ಕೆರೆಸಮಿತಿ ಅಧ್ಯಕ್ಷಶಶಿಪಾಟೀಲ್ ಮುಖಂಡರಾದ ಎಸ್.ಎಂ.ಎಲ್ ತಿಪ್ಪೇಸ್ವಾಮಿ, ಶೈಲೇಶ್‌ಪಾಟೀಲ್, ಸಾ ಮಿಲ್ ಶಿವಣ್ಣ, ಕೋಗುಂಡೆಮಂಜುನಾಥ್, ಡಿ.ವಿ.ಎಸ್. ಪ್ರದೀಪ್, ಸಿ.ಆರ್.ನಾಗರಾಜ್, ಕೊಳಹಾಳಂ ರಾಜಣ್ಣ, ಚಿಕ್ಕಬೆನ್ನೂರು ತೀರ್ಥಪ್ಪ, ಹನುಮಂತಪ್ಪ ಹಾಗೂ ಸಾವಿರಾರು ಭಕ್ತರು ಇದ್ದರು.
ಇದನ್ನೂ ಓದಿ: ಶಾಲೆ, ದೇವಸ್ಥಾನದ ಬಳಿಯ ಬಾರ್ : ಗ್ರಾಮಸ್ಥರಿಂದ ಬಾರ್‌ಮುಚ್ಚುವಂತೆ ಪ್ರತಿಭಟನೆ | Protest
ತರಳಬಾಳು ಹುಣ್ಣಿಮೆ ಮಂಟಪದ ಸ್ಥಳ ವೀಕ್ಷಣೆ ಮಾಡಿದ ಸ್ವಾಮೀಜಿ
ಭರಮಸಾಗರದಲ್ಲಿ ಫೆಬ್ರವರಿ ತಿಂಗಳಿ ನಲ್ಲಿ 9 ದಿನಗಳ ಕಾಲ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ಮಹಾಮಂಟಪ ನಿರ್ಮಾಣಕ್ಕೆ ಅಗತ್ಯವಾದ ಸ್ಥಳ ವೀಕ್ಷಣೆಯನ್ನು ಭಾನುವಾರ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ (Bharamasagara) ಶಿವಾಚಾರ್ಯ ಮಹಾಸ್ವಾಮೀಜಿ ಮಾಡಿದರು. ಭರಮಸಾಗರ ಹೊರವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಸುಮಾರು 200 ಎಕರೆ ಪ್ರದೇಶವು ಹುಣ್ಣಿಮೆ ಆಚರಣೆಗೆ ಸೂಕ್ತವೆಂದು ನಿರ್ಣಯಿಸಲಾಯಿತು.
ಪೂರ್ವನಿಗದಿಯಂತೆ 2024 ರ ಫೆಬ್ರವರಿಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಭರಮಸಾಗರದಲ್ಲಿ ನಡೆಯಬೇಕಿತ್ತು. ಅದರೆ ಆಗ ರಾಜ್ಯದೆಲ್ಲೆಡೆ ಬರ ಬಂದು ರೈತರು ಸಂಕಷ್ಟದಲ್ಲಿ ದ್ದರಿಂದ ಆಚರಣೆಯನ್ನು ಮುಂದೂಡಿ ಸಿರಿಗೆರೆಯಲ್ಲಿ (Bharamasagara) ಆಚರಿಸಲಾಗಿತ್ತು. ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಮಾರ್ಗದರ್ಶನ ದಲ್ಲಿ ಭರಮಸಾಗರಮತ್ತು ಜಗಳೂರುಏತನೀರಾವರಿಯೋಜನೆಗಳು ಜಾರಿಯಾಗಿ ಸುಮಾರು 100 ಕೆರೆಗಳು ಭರ್ತಿಯಾಗಿರುವು ದರಿಂದ ಈ ಬಾರಿಯ ಹುಣ್ಣಿಮೆ ಆಚರಣೆಗೆ ವಿಶೇಷ ಮಹತ್ವ ಬಂದಿದೆ.
ಇದನ್ನೂ ಓದಿ: ದಿನ ಭವಿಷ್ಯ | ಯಾವ್ಯವ ರಾಶಿಗೆ ಪ್ರೇಮಿಗಳಿಗೆ ಅಡ್ಡಿ, ಆರ್ಥಿಕ ಸಂಕಷ್ಟ, ದಾಂಪತ್ಯದಲ್ಲಿ ವಿರಸ? | Kannada Dina Bhavishya
ಈ ಸಂದರ್ಭದಲ್ಲಿ ಶಾಸಕ ಡಾ.ಎಂ.ಚಂದ್ರಪ್ಪ, ಕಾಂಗ್ರೆಸ್ ಮುಖಂಡ ತಿಪ್ಪೇಸ್ವಾಮಿ, ಕರ್ನಾಟಕ ನೀರಾವರಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಕೋಗುಂಡೆ ಮಂಜುನಾಥ್, ಜಿ.ಬಿ.ತೀರ್ಥಪ್ಪ, ಸಾಮಿಲ್ ಶಿವಣ್ಣ, ಚೌಲಿಹಳ್ಳಿ ಶಶಿ ಪಾಟೀಲ್, ಶೈಲೇಶ್ ಕುಮಾರ್, ಶಾಂತಾ ಆಶೋಕ್, ಕೊಳಹಾಳ್ ರಾಜಣ್ಣ ಇದ್ದರು.