Chitradurga news |nammajana.com|30-5-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಸೋಮವಾರದಿಂದ ಶ್ರೀ ಮರುಡಾಂಬಿಕಾ ದೇವಿ ಜಾತ್ರಾ (Bhimasamudra Festival) ಮಹೋತ್ಸವ ಆರಂಭಗೊಂಡಿದ್ದು ಮಂಗಳವಾರ ದೇವಿಯ ಮೊದ್ಲಗ್ಗಿತ್ತಿ ಉತ್ಸವ ನಡೆಯಿತು.

ಅಂದು ಗ್ರಾಮದ ಬೀದಿಗಳಲ್ಲಿ ದೇವಿಯ ಮೆರವಣಿಗೆ ಕಾರ್ಯಕ್ರಮ ನಡೆಯಿತು. ಬುಧವಾರ ಸಂಜೆ ಹೂವಿನ ಪಲ್ಲಕ್ಕಿ ಉತ್ಸವ, ಇಂದು ಉಚ್ಚಯ್ಯನ (Bhimasamudra Festival) ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಇದನ್ನೂ ಓದಿ: Minister B Nagendra: ಸಚಿವ ನಾಗೇಂದ್ರ ರಾಜೀನಾಮೆ ಕೊಡಲ್ಲ, ಇದು ಬಿಜೆಪಿ ಷಡ್ಯಂತ್ರ: ಡಾ.ಬಿ.ಯೋಗೇಶ್ ಬಾಬು
ಹುಚ್ಚಯ್ಯನ ಮೆರವಣಿಗೆಯಲ್ಲಿ ಸುಮಾರು 70 ಜನರ ಕಲಾ ತಂಡ ಮೆರವಣಿಗೆ ಕಾರ್ಯಕ್ರಮ ಜರುಗಿತು. ಇದರಲ್ಲಿ ಭಟ್ಕಳದ ಕಲಾ ತಂಡದವರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಸುಮಾರು 8 ಗಂಟೆಯಿಂದ ಮೆರವಣಿಗೆ ಪ್ರಾರಂಭಗೊಂಡು ಮಧ್ಯಾಹ್ನ 3 ಗಂಟೆವರೆಗೆ ನಡೆಯಿತು. ಗ್ರಾಮದ ಜನರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹುಚ್ಚಯ್ಯನ ಉತ್ಸವದಲ್ಲಿ ಸಾವಿರಾರು ಪಾಲ್ಗೊಂಡಿದ್ದರು.
ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ತೇರು (Bhimasamudra Festival)
ನಾಳೆ ಶುಕ್ರವಾರದ ಸಂಜೆ 4 ಗಂಟೆಗೆ ತೇರು ಹಾಗೂ ಶನಿವಾರ ಸಂಜೆ 6 ಗಂಟೆಗೆ ಸಿಡಿ, ಭಾನುವಾರ ಗಾವು ಮೂಲಕ ಜಾತ್ರಾ (Bhimasamudra Festival) ಮಹೋತ್ಸವ ಮುಕ್ತಾಯಗೊಳ್ಳುತ್ತದೆ.
