
Chitradurga news|nammajana.com|03-03-2025
ನಮ್ಮಜನ.ಕಾಂ,ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಭೀಮಸಮುದ್ರ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಸ್ಥಾನಕ್ಕೆ ಉಮೇಶ್ ವಿರುದ್ದ 14 ಸದಸ್ಯರು ಉಪ ವಿಭಾಗಧಿಕಾರಿಗಳಿಗೆ (Bhimasamudra) ಅವಿಶ್ವಾಸ ಮಂಡನೆ ಮಾಡಿದ್ದರು ಆದರೆ ಅವಿಶ್ವಾಸ ಸಾಬೀತು ಮಾಡದಿದ್ದ ಕಾರಣದಿಂದ ಉಮೇಶ್ ಅವರು ಉಪಾಧ್ಯಕ್ಷ ಸ್ಥಾನ ಗಟ್ಟಿಯಾಗಿದೆ.
ಇದನ್ನೂ ಓದಿ: job fair | ಉದ್ಯೋಗ ಮೇಳದಲ್ಲಿ 829 ಜನಕ್ಕೆ ಉದ್ಯೋಗ ಭಾಗ್ಯ

ಭೀಮಸಮುದ್ರ ಗ್ರಾಮ ಪಂಚಾಯತಿಯಲ್ಲಿ 20 ಗ್ರಾಮ ಪಂಚಾಯತಿ ಸದಸ್ಯರಲ್ಲಿ 14 ಜನರು ಉಮೇಶ್ ವಿರುದ್ಧ ಅವಿಶ್ವಾಸ ಪತ್ರವನ್ನು ಉಪ ವಿಭಾಗಧಿಕಾರಿಗೆ ನೀಡಿದ್ದರು (Bhimasamudra) ಆದ್ದರಿಂದ 3-3-2025 ರಂದು ಅವಿಶ್ವಾಸ ಮಂಡನೆಗೆ ಸಮಯ ನಿಗದಿಯಾಗಿತ್ತು. ಆದ್ದರಿಂದ ಇಂದು ಬೆಳಗ್ಗೆಯಿಂದ ಕೇವಲ ಒಬ್ಬರು ಸದಸ್ಯರು ಮಾತ್ರ ಆಗಮಿಸಿದ್ದರಿಂದ ಅವಿಶ್ವಾಸ ಮಂಡನೆ ವಿಫಲವಾಗಿದೆ.
