Chitradurga news|Nammajana.com|15-8-2025
ನಮ್ಮಜನ.ಕಾಂ, ಚಿತ್ರದುರ್ಗ: ಸ್ವಾತಂತ್ರ್ಯ ಪಡೆಯುವಡೆ (Bhovi Gurupeeth) ರಾಷ್ಟ್ರಭಕ್ತಿಯೇ ಮೊದಲು. ಇಂದಿನ ಪೀಳಿಗೆಗೆ ಗುರು-ಹಿರಿಯರು, ತಂದೆ-ತಾಯಿಗಳ ಬಗ್ಗೆ ಭಕ್ತಿಯೇ ಕಣ್ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರಭಕ್ತಿ ಎಂಬುದೇನು ಅನ್ನುವ ಅರ್ಥವೇ ಮರೆಯುತಿರುವುದು ವಿಷಾಧನೀಯ ಪರಿಸ್ಥಿತಿ. ಸ್ವಾರ್ಥ ರಹಿತ ಬದುಕು ಮಾತ್ರ ಸಮಷ್ಠಿ ಬಗ್ಗೆ ಹಾಗೂ ರಾಷ್ಟ್ರ ಬಗ್ಗೆ ಚಿಂತಿಸಲು ಸಾಧ್ಯವೆಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ವಿವಿಧಡೆಯಿರುವ ಸಿದ್ಧರಾಮೇಶ್ವರ ಪ್ರೌಢಶಾಲೆ, ಶಾರದ ಬಾಲಕಿಯರ ಪ್ರೌಢಶಾಲೆ, ರಾಮಕೃಷ್ಣ ಪ್ರೌಢಶಾಲೆ ಹಾಗೂ ಎಸ್ ಜೆ ಎಸ್ ಆಂಗ್ಲ ಮಾದ್ಯಮ ಶಾಲೆಗಳ (Bhovi Gurupeeth) ರಾಷ್ಟ್ರಧ್ವಜಾರೋಹಣ ಮಾಡಿ ಮಾತನಾಡಿದ ಶ್ರೀಗಳು ಸ್ವಾತಂತ್ರ್ಯಕ್ಕೆ ರಾಷ್ಟ್ರಭಕ್ತಿ ಹಾದಿಯಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಹಿಂದೆ ರಾಷ್ಟ್ರಭಕ್ತಿ ಎಂಬ ಬಲವಾದ ಶಕ್ತಿ ಕಾರ್ಯನಿರ್ವಹಿಸಿ, ದೇಶವನ್ನು ಆಳಿದ ಬ್ರಿಟಿಷ್ ರಿಂದ ವಿಮುಕ್ತಗೊಳಿಸುವಲ್ಲಿ ಜನತೆಗೆ ಪ್ರೇರಣೆ ನೀಡಿತು.

ಸ್ವಾತಂತ್ರ್ಯದ ನಿಜ ಅರ್ಥವೆಂದರೆ ಗುಲಾಮಗಿರಿಯಿಂದ ಮುಕ್ತಿ ಪಡೆಯುವುದು ಮಾತ್ರವಲ್ಲ, ನಮ್ಮ ಆಲೋಚನೆಗಳು, ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದಾಗಿದೆ.
ಒಬ್ಬರ ಜೀವನದ ತ್ಯಾಗ ಮಾತ್ರವಲ್ಲ, ಒಬ್ಬರ ಅಹಂಕಾರ ಸೇರಿದಂತೆ ಪ್ರೀತಿಪಾತ್ರವಾಗಿರುವ ಎಲ್ಲದರ ತ್ಯಾಗಗಳ ಪರಿಣಾಮವಾಗಿ, ಇತಿಹಾಸದ ಸಂಪೂರ್ಣ ಹಾದಿಯೇ ಬದಲಾಗಿದೆ.
ದೇಶಭಕ್ತಿಯು ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದ ನಿರಂತರ ಶಕ್ತಿಯಾಗಿತ್ತು. ಅನೇಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ಲೆಕ್ಕಿಸದೆ, ವೈಯಕ್ತಿಕ ಆಸೆ ಆಕಾಂಕ್ಷಗಳನ್ನು ಮತ್ತು (Bhovi Gurupeeth) ಕುಟುಂಬವನ್ನು ತ್ಯಾಗ ಮಾಡಿ ದೇಶಕ್ಕಾಗಿ ಹೋರಾಡಿದರು.
ಸ್ವಾತಂತ್ರ್ಯವು ಭಾರತಕ್ಕೆ ಸಾಮಾಜಿಕ ಸಮಾನತೆ, ವೈಯಕ್ತಿಕ ಏಳಿಗೆ, ಧೈರ್ಯ, ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆ ನೀಡಿದೆ. ಇದು ಒಟ್ಟಾಗಿ ಸಮಾಜವನ್ನು ಪ್ರಗತಿಪಥದಲ್ಲಿ ಮುಂದುವರೆಯುವಂತೆ ಪ್ರೇರೇಣೆ ಪಡೆದಿದೆ. ಸದೃಢ ರಾಷ್ಟ್ರೀಯತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಲಪಡಿಸುವುದು, ಸಾಮಾಜಿಕ ಒಕ್ಕಳಿಕೆ ಮತ್ತು ರಾಷ್ಟ್ರದ ಸಕ್ರಿಯ ಪ್ರಗತಿಯತ್ತ ಇಂದಿನ ಯುವಜನರು ಸಾಗಬೇಕು.
ಸ್ವದೇಶಿ ಚಳವಳಿ ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಹಂತವಾಗಿತ್ತು. ಇಂದಿನ ಜಾಗತಿಕ ಪ್ರಸಂಗಗಳು ಗಮನಿಸಿದರೆ ಜನರು ಭಾರತದ ವಸ್ತುಗಳನ್ನು ಬಳಸಿ, ವಿದೇಶಿ ವಸ್ತುಗಳ ಬಹಿಷ್ಕಾರ ಮಾಡುವ ಮೂಲಕ ದೇಶಭಕ್ತಿಯನ್ನು ವ್ಯಕ್ತಪಡಿಸಬೇಕು . ಇದರಿಂದ ಭಾರತದ ಸ್ವಾವಲಂಬನೆ, ಉದ್ಯಮ ಅಭಿವೃದ್ಧಿ ಮತ್ತು ರಾಷ್ಟ್ರೀಯ ಆತ್ಮಸ್ಥೈರ್ಯವನ್ನು ಶಕ್ತಿಮೂಡುತ್ತದೆ ಎಂದು ತಿಳಿಸಿದರು.
ಎಸ್ ಜೆ ಎಸ್ ಸಮೂಹ ಸಂಸ್ಥೆಗಳ ವಿದ್ಷಾರ್ಥಿಗಳು ದೇಶಭಕ್ತಿ ಮೂಡಿಸುವ ಗೀತೆಗಳು, ರೂಪಕಗಳು, ನಾಟಕಗಳು, ನೃತ್ಯ ಪ್ರದರ್ಶನ ಮಾಡಿದರು.
ಇದನ್ನೂ ಓದಿ: ಶ್ರೀ ಅಹೋಬಲ ಟಿವಿಎಸ್ ನಲ್ಲಿ 79ನೇ ಸ್ವಾತಂತ್ರ್ಯೋತ್ಸವ ಧ್ವಜರೋಹಣ ನೇರವೇರಿಸಿದ TVS ಸಿಇಒ ಪಿ.ವಿ.ಅರುಣ್
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾಭೋವಿ ಸಂಘದ ಅಧ್ಯಕ್ಷ ಓಂಕಾರ, ರವಿಕಿರಣ, ಸಿದ್ಧರಾಮೇಶ್ವರ ಪ್ರೌಢಶಾಲೆಯ ಮುಖ್ಯೋಪಧ್ಯಾಯ ಟಿ ಆನಂದ, ಶಾರದ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಧ್ಯಾಯ ಹನುಮಂತಪ್ಪ, ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಧ್ಯಾಯ ಶ್ರೀಧರ, ಎಸ್ ಜೆ ಎಸ್ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಧ್ಯಾಯ ದಿನೇಶ ಹಾಗೂ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿ, ಪೋಷಕರು (Bhovi Gurupeeth) ಉಪಸ್ಥಿತಿಯಿದ್ದರು.
