Chitradurga news |nammajana.com|26-9-2024
ನಮ್ಮಜನ.ಕಾಂ, ಚಿತ್ರದುರ್ಗ: ನಗರದ ಹಿಂದೂ ಮಹಾ ಗಣಪತಿಯ ಮಹೋತ್ಸವದ ಅಂಗವಾಗಿ ಇಂದು ನಗರದ ಸೆ. 28 ರ ಶೋಭಾಯಾತ್ರೆಯ ಅಂಗವಾಗಿ ಇಂದು ಕೋಟೆ (Bike Rally) ನಾಡಿನಲ್ಲಿ ಬೃಹತ್ ಬೈಕ್ ರ್ಯಾಲಿಯನ್ನು ನಡೆಸಲಾಯಿತು.
ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಕನಕ ವೃತ್ತದಿಂದ (Bike Rally) ಆರಂಭವಾದ ಬೈಕ್ ರ್ಯಾಲಿಗೆ ಶಾಸಕ ಕೆ.ಸಿ.ವಿರೇಂದ್ರ, ವಿಶ್ವ ಹಿಂದೂ ಪರಿಷತ್‍ನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ್ ಶಾಸ್ತ್ರಿ ಉದ್ಘಾಟಿಸಿದರು.
ಬೈಕ್ ರ್ಯಾಲಿಯಲ್ಲಿ ದಾರಿಯುದ್ದಕ್ಕೂ ಬೈಕ್ ರ್ಯಾಲಿಯಲ್ಲಿ ಕುಳಿತ್ತಿದ್ದ ಭಕ್ತಾಧಿಗಳು ಜೈ ಶ್ರೀರಾಮ್, ಜೈ ಜೈ ಶ್ರೀರಾಮ ಹಿಂದೂ ಮಹಾ ಗಣಪತಿಕ್ಕಿ ಜೈ ಎಂದು ಕೂಗುತ್ತಾ, ಕೈಯಲ್ಲಿ ಕೇಸರಿ ಧ್ವಜವನ್ನು ಹಿಡಿದು ತೆಲೆಗೆ ಕೇಸರಿ ಪಟ್ಟಿ, ಪೇಟ ಕಟ್ಟಿಕೊಂಡು ಕೊರಳಿಗೆ ಕೇಸರಿ ಶಾಲನ್ನು ಹಾಕಿಕೊಂಡು ದಾರಿಯಲ್ಲಿ (Bike Rally) ಸಾಗುತ್ತಿದ್ದ ದೃಶ್ಯ ಕಣ್ಮನ ಸೆಳೆಯಿತು.
ಇದರೊಂದಿಗೆ ಹಲವಾರು ಭಕ್ತಾಧಿಗಳು ತೆಲೆ ಕೇಸರಿಯ ಪೇಟವನ್ನು ಧರಿಸಿದ್ದು, ಮತ್ತೇ ಕೆಲವರು ಕೇಸರಿಯ ಜುಬ್ಬವನ್ನು ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ಕಂಡು ಬಂದಿತು.
ಬೈಕ್ ರ್ಯಾಲಿಯೂ ನಗರದ ಕನಕ ವೃತ್ತದಿಂದ ಪ್ರಾರಂಭವಾಗಿ ಸಂಗೋಳ್ಳಿ ರಾಯಣ್ಣ ವೃತ್ತ, ಬುರುಜನಹಟ್ಟಿ ವೃತ್ತ, ಆನೆ ಬಾಗಿಲು, ಚಿಕ್ಕಪೇಟೆ, ಏಕನಾಥೇಶ್ವರಿ ಪಾದಗುಡಿ, ಕರುವಿನ ಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆ, ಜಟ್ ಪಟ್ ನಗರ ಸ್ಟೇಡಿಯಂ ರಸ್ತೆ, ಬಿ,ಡಿ,ರಸ್ತೆ, ಮದಕರಿನಾಯಕ ವೃತ್ತ, ಅಂಬೇಡ್ಕರ್ ವೃತ್ತ, ಒನಕೆ ಓಬವ್ವ ವೃತ್ತದ ಮೂಲಕ ಹಳೇ ಮಾಧ್ಯಮಿಕ ಶಾಲಾ (Bike Rally) ಆವರಣದಲ್ಲಿ ಅಂತ್ಯ ಗೂಳಿಸಲಾಯಿತು.
ಬೈಕ್ ರ್ಯಾಲಿ ಸಾಗಿದ ದಾರಿಯುದ್ದಕ್ಕೂ ಕ್ಕಿಕ್ಕಿರಿದು ನಿಂತಿದ್ದಂತಹ ಜನರು ಬೈಕ್ ರ್ಯಾಲಿ ದೃಶ್ಯವನ್ನು ಕಣ್ಣು ತುಂಬಿಕೊಂಡರು.
ಇದನ್ನೂ ಓದಿ: ಸರ್ಕಾರಕ್ಕೆ ಗ್ರಾಮ ಆಡಳಿತಧಿಕಾರಿಗಳ ಬೇಡಿಕೆಗಳ ಬಿಸಿ | ಏನೆಲ್ಲ ಬೇಡಿಕೆಗಳು ಇಲ್ಲಿದೆ ಲಿಸ್ಟ್ | Village Administrator
ಬೈಕ್ ರ್ಯಾಲಿ ಮಧ್ಯದಲ್ಲಿ ಹಲವಾರು ಬೈಕ್‍ಗಳು ವಿವಿಧ ರೀತಿಯ ಶಬ್ದವನ್ನು ಮಾಡುತ್ತಾ ಜನರನ್ನು ತಮ್ಮತ್ತ ಸೆಳೆಯುವ ಕಾರ್ಯವನ್ನು ಮಾಡಿದರು. ಬೈಕ್ ರ್ಯಾಲಿಯ ಜೊತೆಗೆ (Bike Rally) ಹಲವಾರು ಜೀಪುಗಳು ಕಾರುಗಳು ಸಹಾ ಭಾಗವಹಿಸಿದ್ದು ದೃಶ್ಯಗಳು ಕಂಡು ಬಂದವು.