Chitradurga news|nammajana.com|26-9-2024
ನಮ್ಮಜನ.ಕಾಂ, ಚಿತ್ರದುರ್ಗ: ಹಿಂದೂ ಮಹಾ ಗಣಪತಿ ಮೂರ್ತಿಯ ವಿಸರ್ಜನೆ ಅಂಗವಾಗಿ ಸೆ.26 ರಂದು ಸೆ.28ರಂದು ಬೈಕ್ ರ್ಯಾಲಿ, ಶೋಭಾಯಾತ್ರೆ (Bike rally) ನಡೆಸಲಾಗುವುದು ಎಂದು 2024ರ ಹಿಂದೂ ಮಹಾ ಗಣಪತಿ ಮಹೋತ್ಸವ ಸಮಿತಿ ಅಧ್ಯಕ್ಷ ಬಿ.ನಯನ್ ತಿಳಿಸಿದರು.
ನಗರದ ಜೈನ್ ಧಾಮದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ.26ರ ಬೆಳಗ್ಗೆ 10ರಿಂದ ನಗರದ ಕನಕ ವೃತ್ತದಿಂದ ಆರಂಭವಾಗುವ ರ್ಯಾಲಿಗೆ ವಿಶ್ವ ಹಿಂದೂ ಪರಿಷತ್‌ನ ಜಗನ್ನಾಥಶಾಸ್ತ್ರಿ ಚಾಲನೆ ನೀಡುವರು, (Bike rally) ನಾನಾ ಮಠಾಧೀಶರು, ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ಮಾತನಾಡಿ, ಸೆ.28ರಂದು ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಬಜರಂಗದಳ ರಾಷ್ಟ್ರೀಯ ಸಂಯೋಜಕ ದೆಹಲಿಯ ನೀರಜ್ ದೊರೇನಿಯಾ ಯಾತ್ರೆಗೆ ಚಾಲನೆ ನೀಡುವರು. ನಾನಾ ರೀತಿಯ ಜಾನಪದ ಕಲಾತಂಡಗಳು
ಭಾಗವಹಿಸಲಿದ್ದು ಸುಮಾರು 5ರಿಂದ 6 ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಹಿಂದೂ ಮಹಾ ಗಣಪತಿ ಭೇಟಿ ವರ್ಷದಿಂದ ವರ್ಷಕ್ಕೆ ಹೆಚ್ಚು ಮೆರುಗು ಪಡೆದು ಭಾಗವಹಿಸುವವರ ಕೊಳ್ಳುತ್ತಿದ್ದು ಸಂಖ್ಯೆ ಹೆಚ್ಚಾಗುತ್ತಿದೆ. ಚಿತ್ರದುರ್ಗದ ನಾನಾ ವೃತ್ತಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಎಂದರು.(Bike rally) ಮಾರ್ಗದರ್ಶಕ ಟಿ.ಬದರಿನಾಥ್ ಮಾತನಾಡಿ, ಶೋಭಾಯಾತ್ರೆ ಉದ್ಘಾಟನೆ ಸಮಯದಲ್ಲಿ ಜಗನ್ನಾಥ ಪುರಿ ದೇವಸ್ಥಾನ ಮಾದರಿ ಸ್ಮರಣಿಕೆ, ಧ್ವಜ, ಲಡ್ಡು, ನೋಟಿನ ಮೂರು ದೊಡ್ಡದಾದ ಬಹಿರಂಗವಾಗಿ ಹಾರಗಳನ್ನು ಹರಾಜು ಹಾಕಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಹಿರಿಯೂರು ಡಾ. ಆರ್.ನವೀನ್ ಕುಮಾರ್ ಗೆ ಸ್ಥಾನ | great scientist
ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಷಡಾಕ್ಷರಪ್ಪ, ಉಮೇಶ್ ಕಾರಜೋಳ, ಉತ್ಸವ ಕಾರ್ಯದರ್ಶಿ ನ್ಯಾಯವಾದಿ ಸಮಿತಿ ಪ್ರಧಾನ ವಿಶ್ವನಾಥಯ್ಯ, ಚೇತನಬಾಬು, ಭಾನುಮೂರ್ತಿ, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಚನ್ನಕೇಶವ್, ಮತ್ತಿತರರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252