Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಜನನ-ಮರಣ ನೊಂದಣಿ | ನಿರ್ಲಕ್ಷ್ಯ ತೋರಿ ವಿಳಂಬ ಮಾಡುವ ಅಧಿಕಾರಿಗಳು ಅಮಾನತು : ADC ಎಚ್ಚರಿಕೆ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಜನನ-ಮರಣ ನೊಂದಣಿ | ನಿರ್ಲಕ್ಷ್ಯ ತೋರಿ ವಿಳಂಬ ಮಾಡುವ ಅಧಿಕಾರಿಗಳು ಅಮಾನತು : ADC ಎಚ್ಚರಿಕೆ
ಇಂದಿನ ಸುದ್ದಿ

ಜನನ-ಮರಣ ನೊಂದಣಿ | ನಿರ್ಲಕ್ಷ್ಯ ತೋರಿ ವಿಳಂಬ ಮಾಡುವ ಅಧಿಕಾರಿಗಳು ಅಮಾನತು : ADC ಎಚ್ಚರಿಕೆ

Nammajana Sub Editor
Last updated: 29 August 2025 8:40 PM
By Nammajana Sub Editor 3 Min Read
Share
SHARE
Telegram Group Join Now
WhatsApp Group Join Now

Chitradurga News | Nammajana.com | 29-08-2025

ನಮ್ಮಜನ ನ್ಯೂಸ್ ಕಾಂ, ಚಿತ್ರದುರ್ಗ: ಜನನ ಹಾಗೂ ಮರಣ(Birth and death registration) ದಿನದಿಂದ 21 ದಿನದ ಒಳಗಾಗಿ ನೊಂದಣಿ ಮಾಡುವುದು ಸಂಬಂಧಪಟ್ಟ ಅಧಿಕಾರಿ ಕರ್ತವ್ಯವಾಗಿದೆ. ನಿಗದಿತ ಅವಧಿಯೊಳಗೆ ನೊಂದಣಿ ಮಾಡದೆ, ನಿರ್ಲಕ್ಷ್ಯ ತೋರಿ ವಿಳಂಬ ಮಾಡುವ ಅಧಿಕಾರಿಗಳನ್ನು ಅಮಾನುತುಗೊಳಿಸಿ, ಅವರ ವಿರುದ್ದ ಇಲಾಖೆ ವಿಚಾರಣೆಗೆ ಶಿಫಾರಸ್ಸು ಮಾಡುವುದಾಗಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಎಚ್ಚರಿಸಿದರು.

ahobala tvs ದಸರಾ ಹಾಗು ದೀಪಾವಳಿ ಹಬ್ಬದ ವಿಶೇಷ ಕೊಡುಗೆಗಳು 2

ಇದನ್ನೂ ಓದಿ: ಚಿತ್ರದುರ್ಗ ನಗರದಲ್ಲಿ ಸರಣಿ ಕಳ್ಳತನ

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಾಗರೀಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜನನ-ಮರಣ ನೋಂದಣಿಗೆ ಕ್ರಮ ವಹಿಸಬೇಕು. ಯಾರೂ ಸಹ ನೋಂದಣಿಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಿಗೆ ಜನನ-ಮರಣ ಪ್ರಮಾಣ ಪತ್ರಗಳು ಬಹಳ ಅವಶ್ಯಕವಾಗಿವೆ. ಬಹಳಷ್ಟು ಜನರು ಪ್ರಮಾಣ ಪತ್ರಗಳನ್ನು ದೊರಕಿಸಿಕೊಡುವಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಮನವಿ ಸಲ್ಲಿಸುತ್ತಾರೆ.

ಅಧಿಕಾರಿಗಳು ಸಕಾಲದಲ್ಲಿ ನೊಂದಣಿ ಮಾಡದಿದ್ದರೆ, ಸಾರ್ವಜನಿಕರು ತಹಶೀಲ್ದಾರ್ ಕಚೇರಿ ಅಥವಾ ನ್ಯಾಯಾಲಯಗಳಿಗೆ ಅಲೆದಾಡುವಂತಾಗುತ್ತದೆ. ಇದರಿಂದ ಸಮಯ ಹಾಗೂ ಹಣ ವ್ಯಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಗೆ ಸಂಕಷ್ಟ, ಮತ್ತೆ ಎಷ್ಟು ದಿನ ಇಡಿ ವಶಕ್ಕೆ ಗೊತ್ತೆ?

21 ದಿನಗಳ ಬಳಿಕ ವಿಳಂಬವಾಗಿ ಜನನ ಹಾಗೂ ಮರಣ ನೊಂದಣಿಯನ್ನು ಮಾಡಿದ ಎಲ್ಲಾ ಅಧಿಕಾರಿಗಳಿಗೂ ಕಾರಣ ಕೇಳಿ ನೋಟಿಸ್ ನೀಡಬೇಕು. ಅಧಿಕಾರಿಗಳ ತಪ್ಪಿನಿಂದ ನ್ಯಾಯಾಲಯಗಳಿಗೆ ಹೋಗಿ ಪ್ರಮಾಣ ಪತ್ರ ಪಡೆದ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಯಿಂದಲೇ ವೆಚ್ಚವನ್ನು ಭರಿಸುವಂತಾಗಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿರುವುದು ಸಾಬೀತು ಆದರೆ ಅಮಾನತುಗೊಳಿಸಲು ಶಿಫಾರಸ್ಸು ಮಾಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.

ಸಭೆ ನಡೆಸದ ಅಧಿಕಾರಿಗಳಿಗೆ ನೋಟಿಸ್:

ತಾಲ್ಲೂಕು ಮಟ್ಟದ ನಾಗರೀಕ ನೊಂದಣಿ(Birth and death registration) ಪದ್ದತಿಯ ಸಮನ್ವಯ ಸಮಿತಿ ಸಭೆಯನ್ನು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ನಡೆಸಬೇಕು. ಆದರೆ ಪ್ರಸಕ್ತ ವರ್ಷದಲ್ಲಿ ಜುಲೈ ಅಂತ್ಯದ ವೇಳೆಗೆ 6 ತಾಲ್ಲೂಕಿನಿಂದ ಕೇವಲ 10 ಸಮನ್ವಯ ಸಭೆ ನಡೆಸಲಾಗಿದೆ.

ಈ ಪೈಕಿ ಹೊಸದುರ್ಗ ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಯಾವುದೇ ಸಭೆಯನ್ನು ನಡೆಸಿಲ್ಲ. ಈ ಹಿನ್ನಲೆಯಲ್ಲಿ ಸಮನ್ವಯ ಸಮಿತಿ ಸಭೆಗಳನ್ನು ಸಮರ್ಪಕವಾಗಿ ನಡೆಸದ ಸಂಬಂಧಪಟ್ಟ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಶಿಸ್ತು ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗೆ ನಿರ್ದೇಶಿಸಿದರು. ಇದೇ ವೇಳೆ ತಾಲ್ಲೂಕು ಮಟ್ಟದಲ್ಲಿ ಕಡ್ಡಾಯವಾಗಿ ನಾಗರೀಕ ನೊಂದಣಿ ಪದ್ಧತಿಯ ಸಮಿತಿ ಸಭೆ ನಡೆಸಿ ಅನುಪಾಲನಾ ವರದಿಯನ್ನು ಕಳುಹಿಸಕೊಡುವಂತೆ ಸೂಚಿಸಿದರು.

ಇದನ್ನೂ ಓದಿ: ಎಂಜಿನಿಯ‌ರ್ ಅಂತ ಹೇಳಿಕೊಂಡು ಚಿನ್ನ ಆಭರಣ ಕಳ್ಳತನ

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ(Birth and death registration) ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 2025ನೇ ಸಾಲಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ 1,347 ಹಾಗೂ ನಗರ ಪ್ರದೇಶದಲ್ಲಿ 14 ನೋಂದಣಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ವರೆಗೆ 11,096 ಜನನ ಹಾಗೂ 9,770 ಮರಣ ನೊಂದಣಿಯಾಗಿವೆ. 1,599 ಜನನ ಹಾಗೂ 3,186 ಮರಣ ಸೇರಿ 4,785 ನೊಂದಣಿ ಪ್ರಕರಣಗಳು 22 ದಿನದಿಂದ 365 ದಿನಕ್ಕೂ ಮೇಲ್ಪಟ್ಟು ನೊಂದಣಿಯಾಗಿವೆ ಎಂದು ಸಭೆಯಲ್ಲಿ ತಿಳಿಸಿದರು.

ಜಿ.ಪಂ. ಉಪಕಾಯದರ್ಶಿ ಡಾ. ರಂಗಸ್ವಾಮಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಜಿಲ್ಲಾಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ.ಆನಂದ ಪ್ರಕಾಶ್, ಸಹಾಯಕ ಅಂಕಿ-ಸಂಖ್ಯೆ ಸಂಗ್ರಹಣಾಧಿಕಾರಿ ಅಶ್ವತ್ಥಾಮ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಅಂಕಿ-ಸಂಖ್ಯೆ ಇಲಾಖೆ ಅಧಿಕಾರಿಗಳು ಇದ್ದರು.

Telegram Group Join Now
WhatsApp Group Join Now

You Might Also Like

Gold price | ಬಂಗಾರದ ಬೆಲೆಯಲ್ಲಿ ಇಳಿಕೆ

ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ | ED Raid challakere

Challakere Rain | ಹಸ್ತ ಮಳೆಗೆ ಮುಳುಗಿದ ಲಾರಿ, ಕಾರು, ಮನೆಗಳು

Astrology | ಇಂದಿನ‌ ರಾಶಿ ಭವಿಷ್ಯ, ಯಾರಿಗೆಲ್ಲ ಶುಭ, ಅಶುಭ

ದಿನ ಭವಿಷ್ಯ | 09-10-2025 | Dina Bhavishya

TAGGED:Additional Deputy Commissioner KumaraswamyBirth and deathChitradurgaChitradurga NewsdelayKannada NewsNammajana.comnegligenceofficialsregistrationSuspensionಅಧಿಕಾರಿಗಳುಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿಅಮಾನತುಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಜನನ ಮರಣನಮ್ಮಜನ.ಕಾಂನಿರ್ಲಕ್ಷ್ಯನೋಂದಣಿವಿಳಂಬ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Challakere Road widening | ಬಹು ದಿನದ ಕನಸು | ಬಳ್ಳಾರಿ ರಸ್ತೆ ಅಗಲೀಕರಣಕ್ಕೆ ಶಾಸಕ ಟಿ.ರಘುಮೂರ್ತಿ ಚಾಲನೆ
Next Article Today Dina Bhavishya | ದಿನ ಭವಿಷ್ಯ | 30 ಆಗಸ್ಟ್ 2025 | ಇಂದಿನ ರಾಶಿ ಭವಿಷ್ಯ, ಯಾರಿಗೆ ಶುಭ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold price rise | ಬಂಗಾರದ ಓಟಕ್ಕೆ ಬ್ರೇಕ್ ಹಾಕೋರಿಲ್ಲ, ಎಷ್ಟಿದೆ ಇಂದಿನ ಬೆಲೆ
ಇಂದಿನ ಸುದ್ದಿ
V V Sagara Dam | ವಾಣಿ ವಿಲಾಸ ಸಾಗರ ಡ್ಯಾಂ ಲೇವೆಲ್ ಎಷ್ಟು | ಇಲ್ಲಿದೆ ಮಾಹಿತಿ
ಇಂದಿನ ಸುದ್ದಿ
Astrology | ದಿನ ಭವಿಷ್ಯ, ಇವತ್ತು ಹೇಗಿದೆ ರಾಶಿ ಭವಿಷ್ಯ
ದಿನ ಭವಿಷ್ಯ
ವಾಲ್ಮೀಕಿ ಜಯಂತಿ ಅದ್ದೂರಿ ಮೆರವಣಿಗೆಗೆ ಶಾಸಕ ಟಿ.ರಘುಮೂರ್ತಿ ಚಾಲನೆ | Valmiki Jayanti
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

More

  • About Us!
  • Blog
  • Contact Us
  • Customize Interests
  • Disclaimer
  • Kannada News- NammaJana
  • My Bookmarks
  • ಶ್ರೀ ಅಹೋಬಲ ಟಿವಿಎಸ್

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?