Chitradurga News | Nammajana.com | 15-08-2025
ನಮ್ಮಜನ.ಕಾಂ, ವಿಧಾನ ಪರಿಷತ್ : ವಿಧಾನ(Vanivilasa sagara) ಪರಿಷತ್ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಾಣಿವಿಲಾಸ ಸಾಗರದಲ್ಲಿ ನವೆಂಬರ್ 1ರಿಂದ ಪ್ರವಾಸಿಗರಿಗೆ ಬೋಟಿಂಗ್ ಸೌಲಭ್ಯ ಕಲ್ಪಿಸಲಾಗುವುದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರನ್ನು ನೇಮಿಸುವಂತೆ ಮಹಿಳೆಯರ ಪ್ರತಿಭಟನೆ

ಕಾಂಗ್ರೆಸ್ಸಿನ ಡಿ.ಟಿ. ಶ್ರೀನಿವಾಸ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿವಿ ಸಾಗರ ಬಳಿ ಪ್ರವಾಸೋದ್ಯಮ ಇಲಾಖೆಯ ಜಾಗ ವಿದ್ದು, ಅಲ್ಲಿ ಕೆಎಸ್‌ಟಿಡಿಸಿಯಿಂದ ಹೋಟೆಲ್ ಆರಂಭಿಸಲಾಗುವುದು. ಜೊತೆಗೆ
ಕಯಾಕಿಂಗ್, ಜೆಟ್ ಸ್ತ್ರೀ, ಬನಾನ ರೈಡ್ ಮುಂತಾದ ಚಟುವಟಿಕೆ ನಡೆಸಲು ಜಲಸಂಪನ್ಮೂಲ ಇಲಾಖೆಯಿಂದ ನಿರಾಕ್ಷೆ ಪಣ ಪತ್ರ ನಿರೀಕ್ಷಿಸಲಾಗುತ್ತಿದ್ದು, ಪತ್ರ ಬಂದ ನಂತರ ಸೂಕ್ತ ಹೂಡಿಕೆದಾರರನ್ನು ಆಯ್ಕೆ ಮಾಡಿ ಜಲಸಾಹಸ ಚಟುವಟಿಕೆ ಪ್ರಾರಂಭಿಸಲಾಗುವುದು ಹೇಳಿದರು.
ಮಧುಗಿರಿ ಬೆಟ್ಟಕ್ಕೆ ರೋಪ್ ವೇ:
ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್‌ವೆ ಸೌಲಭ್ಯ ಕಲ್ಪಿಸುವ ಸಂಬಂಧ ಸಮೀಕ್ಷೆಮಾಡಲಾಗಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಅಡಿ ಯೋಜನೆ ಜಾರಿಗೊಳಿಸ ಲಾಗುವುದು. ಈ ಸಂಬಂಧ ಟೆಂಡರ್ ಕರೆಯಲಾಗಿದೆ.
ಇದನ್ನೂ ಓದಿ: ಅಧಿವೇಶನ | ಬೆಳೆ ನಷ್ಟ ಪರಿಹಾರದಲ್ಲಿ 49 ಕೋಟಿ ಹಣ ದುರುಪಯೋಗ: ಟಿ.ರಘುಮೂರ್ತಿ
ಇದಲ್ಲದೇ 11 ಪ್ರವಾಸಿ ತಾಣಗಳಲ್ಲಿ(Vanivilasa sagara) ರೋಪ್ ವೇ ಸೌಲಭ್ಯ ಕಲ್ಪಿಸಲು ಕಾರ್ಯಾಸಾಧ್ಯತಾ ವರದಿಯನ್ನು ಪಡೆದಿದ್ದು, ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ ಮುಂದೆ ಸಲ್ಲಿಸಿ ಅನುಮೋದನೆ ಪಡೆದು ಮುಂದಿನ ಕ್ರಮವಹಿಸಲಾಗುವುದು ಎಂದರು. ಮಧುಗಿರಿ ಬೆಟ್ಟಕ್ಕೆ ರೋಪ್ ವೇ: ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್‌ವೆ ಸೌಲಭ್ಯ ಕಲ್ಪಿಸುವ ಸಂಬಂಧ ಸಮೀಕ್ಷೆ ಮಾಡಲಾಗಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಅಡಿ ಯೋಜನೆ ಜಾರಿಗೊಳಿ ಸಲಾಗುವುದು.
ವಾಣಿವಿಲಾಸ ಸಾಗರದಲ್ಲಿ ನವೆಂಬರ್ 1ರಿಂದ ಪ್ರವಾಸಿಗರಿಗೆ ಬೋಟಿಂಗ್ ಸೌಲಭ್ಯ
ಈ ಸಂಬಂಧ ಟೆಂಡರ್ ಕರೆಯಲಾಗಿದೆ. ಇದಲ್ಲದೇ 11 ಪ್ರವಾಸಿ ತಾಣಗಳಲ್ಲಿ ರೋಪ್ ವೇ ಸೌಲಭ್ಯ ಕಲ್ಪಿಸಲು ಕಾರ್ಯಾ ಸಾಧ್ಯತಾ ವರದಿಯನ್ನು ಪಡೆದಿದ್ದು, ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ ಮುಂದೆ ಸಲ್ಲಿಸಿ ಅನುಮೋದನೆ ಪಡೆದು ಮುಂದಿನ ಕ್ರಮ ವಹಿಸಲಾಗುವುದು ಎಂದರು.
