Chitradurga news | nammajana.com | 14-5-2024
ನಮ್ಮಜನ.ಕಾಂ, ಚಳ್ಳಕೆರೆ: ಚಳ್ಳಕೆರೆ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳು ನಿಯಂತ್ರಣವಾಗದೆ ಇಲ್ಲಿನ ನಾಗರೀಕರು ಭಯಭೀತರಾಗಿದ್ಧಾರೆ. ಕೆಲವೆಡೆ ಗ್ರಾಮಾಂತರ ಪ್ರದೇಶಗಳಲ್ಲಿ ಹಾಡುಹಗಲೇ ದೇವಸ್ಥಾನದಲ್ಲಿ ಕಳ್ಳತನ ನಡೆಯುತ್ತಿವೆ. ಅದೇ ರೀತಿ ಚಳ್ಳಕೆರೆ ನಗರದಲ್ಲೂ ಕಳ್ಳತನ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಸಾಕಷ್ಟು ಪರಿಶ್ರಮವಹಿಸುತ್ತಿಲ್ಲವೆಂಬುವುದು ಸಾರ್ವಜನಿಕರ ಆರೋಪವಾಗಿದೆ.
ನಗರದ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿಯಲ್ಲಿ ಜಗನ್ನಾಥಚಾರಿ ಎಂಬುವವರು ಮನೆಗೆ ಬೀಗಹಾಕಿಕೊಂಡು ಹೋಗಿದ್ದನ್ನು ಗಮನಿಸಿದ ಯಾರೋ ಕಳ್ಳರು ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿ ಗಾಡ್ರೇಜ್ ಬೀರುವಿನ ಬೀಗವನ್ನು ಒಡೆದು ಸುಮಾರು 138 ಗ್ರಾಂ ತೂಕದ 4.43 ಲಕ್ಷ ಮೌಲ್ಯದ ವಿವಿಧ ಬಂಗಾರದ ಆಭರಣಗಳನ್ನು ದೋಚಿ ಪರಾರಿಯಾಗಿದ್ಧಾರೆ.
ಜಗನ್ನಾಥಚಾರಿ ಎಂಬುವವರ ಪತ್ನಿ ಎನ್.ಭಾಗ್ಯ ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ನನ್ನ ಗಂಡ ಜಗನ್ನಾಥಚಾರಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಹೋದ ಸಂದರ್ಭದಲ್ಲಿ ಮನೆಯಲ್ಲಿ ಮಗ ವರುಣಾಚಾರಿಯನ್ನು ಬಿಟ್ಟುಹೋಗಿದ್ದೇವು. ವರುಣಾಚಾರಿ ತಮ್ಮ ಚಿಕ್ಕಮ್ಮಳ ಮನೆಗೆ ಹೋಗಿ ಮಲಗಿದ್ದ ಮೇ. 13 ರ ಬೆಳಗ್ಗೆ ಮನೆಗೆ ಬಂದು ನೋಡಿದಾಗ ಶಾಕ್ ಆಗಿದ್ಧಾನೆ. ಕಾರಣ ಬೀರುವಿನಲ್ಲಿದ್ದ ಎಲ್ಲಾ ಬಂಗಾರದ ಆಭರಣಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ಧಾರೆ.
ಇದನ್ನೂ ಓದಿ: Hostel : ವಿದ್ಯಾರ್ಥಿನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಪಿಎಸ್‌ಐ ಜೆ.ಶಿವರಾಜ್ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ಧಾರೆ.