

Chitradurga news |nammajana.com|31-03-2025
ನಮ್ಮಜನ.ಕಾಂ, ಚಿತ್ರದುರ್ಗ: ಇತ್ತೀಚೆಗೆ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಅದರಲ್ಲೂ ಹಳ್ಳಿಗಳು ನಿಧಾನವಾಗಿ ಆಧುನಿಕರಣದತ್ತ ಮುಖ ಮಾಡುತ್ತಿದ್ದಂತೆ ರೈತರು (Bullock cart race) ಪಾಲ್ಗೊಳ್ಳುತ್ತಿದ್ದ ಅದೆಷ್ಟೋ ಹಳ್ಳಿ ಸೊಗಡಿನ ಕ್ರೀಡೆಗಳು ಮಾಯವಾಗಿವೆ. ಗ್ರಾಮೀಣ ಕ್ರೀಡೆಯನ್ನ ಉತ್ತೇಜಿಸುವ ನಿಟ್ಟಿನಲ್ಲಿ ವರ್ಷಪೂರ್ತಿ ಹೊಲೆ ಗದ್ದೆಗಳಲ್ಲಿನ ಉಳುಮೆ ಕಾರ್ಯಗಳೆಲ್ಲ ಮುಗಿದ ಈ ಸಂದರ್ಭದಲ್ಲಿ
ಯುಗಾದಿ ಹಬ್ಬಕ್ಕೆ ಎತ್ತಿನಗಾಡಿ ಸ್ವರ್ಧೆ ಸಂತಸವನ್ನು ಹಿಮ್ಮಡಿಗೊಳಿಸಿದೆ ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ ಹುಣಸೇಕಟ್ಟೆ ಗ್ರಾಮದಲ್ಲಿ ತಾಲೂಕು ಮಟ್ಟದ ಎತ್ತಿನಗಾಡಿ (Bullock cart race) ಓಟದ ಸ್ಪರ್ಧೆಯನ್ನು ಶಾಸಕರು ಎತ್ತಿನ ಗಾಡಿನ ಓಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನನ್ನ ಕ್ಷೇತ್ರವೇ ಒಂದು ರೀತಿಯ ಬುಡಕಟ್ಟು ಸಂಸ್ಕೃತಿಯ ತವರೂರು ಇದ್ದಂತೆ. ಬುಡಕಟ್ಟು ಸಂಸ್ಕೃತಿಯ ಆಚರಣೆಗಳು ಅಚ್ಚುಕಟ್ಟಾಗಿ ನಡೆಯುತ್ತಾ ಬಂದಿವೆ. ರೈತರಿಗೆ ಎತ್ತುಗಾಡಿ ದೇವರಿದ್ದಂತೆ. ಅವುಗಳು ಮನೆಯಲ್ಲಿ ಇದ್ದರೆ ಲಕ್ಷ್ಮಿ ಎಂಬ ನಂಬಿಕೆ ಸಹ ಇದೆ ಎಂದರು.
ಹುಣಸೇಕಟ್ಟೆ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ನಾಡಿದರು ಒಗ್ಗಟ್ಟಿನಿಂದ ಅಚ್ಚುಕಟ್ಟಾಗಿ ಮಾಡುತ್ತಾರೆ. ಅದೇ ರೀತಿಯಲ್ಲಿ ಇಂದು ತಮ್ಮೊಂದಿಗೆ ಕೃಷಿ ಚಟುವಟಿಕೆಯಲ್ಲಿ ಹೆಗಲಿಗೆ ಹೆಗಲುಕೊಟ್ಟು ದುಡಿದ ಎತ್ತುಗಳು ಜೊತೆ ಯುಗಾದಿ (Bullock cart race) ಸಂಭ್ರಮದ ದಿನ ಎತ್ತಿನಗಾಡಿ ಓಟದ ಸ್ವರ್ಧೆ ಏರ್ಪಡಿಸಿರುವುದು ರೈತರ ಜೊತೆಗೆ ನನಗೂ ಸಾಕಷ್ಟು ಖುಷಿ ತಂದಿದೆ.
ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಪಡೆಯುವುದು ಸುಲಭವಲ್ಲ. ಎತ್ತಿನಗಾಡಿಯನ್ನು ಓಡಿಸುವುದು ಒಂದು ರೀತಿಯ ಸಾಹಸವೇ. ಇದಕ್ಕೆ ಪರಿಣತಿ ಬೇಕಾಗುತ್ತದೆ. ತಮ್ಮದೇ ಎತ್ತುಗಳ ಬಂಡಿಯ ಮೂಲಕ ಸ್ಪರ್ಧಾ ಸ್ಥಳಕ್ಕೆ ತೆರಳಿ ಅಲ್ಲಿ ಓಡಿ ಗೆಲುವು ಪಡೆಯುವ ಮೂಲಕ ಹತ್ತೂರುಗಳಲ್ಲಿ ಹೆಸರು ಪಡೆಯುತ್ತಿದ್ದ ಕಾಲವಿತ್ತು. ಇವತ್ತಿಗೂ ಬಹಳಷ್ಟು ರೈತರು ಬರೀ ಕೃಷಿ ಚಟುವಟಿಕೆ ಮಾತ್ರವಲ್ಲದೆ, ಎತ್ತಿನಗಾಡಿ ಓಡಿಸಿ (Bullock cart race) ಗೆಲುವು ಸಾಧಿಸುವ ಮೂಲಕ ಸಾಧನೆ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿ ಈಗ ಮೊದಲಿಗೆ ಹೋಲಿಸಿದರೆ ಒಂದಷ್ಟು ಬದಲಾವಣೆಗಳೊಂದಿಗೆ ಎತ್ತುಗಳನ್ನು ಕಟ್ಟುವುದು ವಿರಳವಾಗಿದೆ. ಆದರು ಸಹ ಇಷ್ಟೊಂದು ಸುಮಾರು 30 ಜೊತೆ ಎತ್ತುಗಾಡಿಗಳು ಆಗಮಿಸಿದ್ದು ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ ಎಲ್ಲಾರೂ ಹಬ್ಬದ ಸಂಭ್ರಮದಲ್ಲಿ ಮನೆಗೆ ತೆರಳಿ ಎಂದರು.
ಹುಣಸೇಕಟ್ಟೆಗೆ ಕೈನಾಡಿನ 25 ಕ್ಕೂ ಹೆಚ್ಚು ಹಸು
ಸರ್ಕಾರದಿಂದ ಹುಣಸೇಕಟ್ಟೆ ಗ್ರಾಮಕ್ಕೆ 25 ಕ್ಕೂ ಹೆಚ್ಚು ಹಸುಗಳು ಕೊಡಿಸಿದ್ದೆ ಎಲ್ಲಾ ಹಸುಗಳು ಕರು ಹಾಕಿದ್ದು ಉತ್ತಮ ಹಾಲು ನೀಡುತ್ತಿವೆ ಎಂದು ರೈತರು ತಿಳಿಸಿದ್ದು ಕೇಳಿ (Bullock cart race) ಸಂತಸವಾಗಯಿತು. ಮುಂದಿನ ದಿನಗಳಲ್ಲಿ ಹೈನುಗಾರಿಕೆಗೂ ಹಂತ ಹಂತವಾಗಿ ಪ್ರೋತ್ಸಾಹ ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೂನಬೇವು ಗ್ರಾಮ ಪಂಚಾಯತಿ ಅಧ್ಯಕ್ಷೆ ಪದ್ಮಾವತಿ, ಜಿಲ್ಲಾ ಗ್ಯಾರೆಂಟಿ ಸಮಿತಿ ಉಪಾಧ್ಯಕ್ಷ ಬಾಬುರೆಡ್ಡಿ, ಗ್ರಾಮ ಪಂಚಾಯತಿ ಸದಸ್ಯರಾದ ಕೆ.ನಿಂಗಮ್ಮ, ಎಸ್.ಪಾಲಯ್ಯ, ಕೆ.ಟಿ.ಯಶೋಧ, ಆರ್ಚನಾ, ಶ್ರೀ ಅಹೋಬಲ ಟಿವಿಎಸ್ ಮಾಲೀಕರಾದ ಪಿ.ವಿ.ಅರುಣ್ ಕುಮಾರ್, ಮುಖಂಡರಾದ ಗುರುಮೂರ್ತಿ, ಹೆಚ್.ಕಾಂತರಾಜ್ , ಮಾರುತಿ, ಮಹಂತೇಶ್, ಏಕಾಂತ ಇತರರಿದ್ದರು.
ಬಾಕ್ಸ್
ಶೀಘ್ರವಾಗಿ ತುಂಗಾಭದ್ರಾ ಹಿನ್ನೀರು
ಚಳ್ಳಕೆರೆ, ಕೂಡ್ಲಿಗಿ, ಮೊಳಕಾಲ್ಮೂರು, ಪಾವಗಡ ಕ್ಷೇತ್ರಕ್ಕೆ ತುಂಬಾ ಭದ್ರ ಹಿನ್ನೀರು ಮೂಲಕ ಕುಡಿಯುವ ನೀರು ಒದಗಿಸುವ ಯೋಜನೆ ಪೂರ್ಣಗೊಂಡಿದ್ದು ಟ್ರಯಲ್ ಮಾಡಲಾಗುತ್ತಿದೆ. ಈ ಯೋಜನೆಯಲ್ಲಿ ತುರುವನೂರು ಹೋಬಳಿಗೂ ಪ್ರತಿ ಮನೆಗೆ ಕುಡಿಯುವ ನೀರು ಬರಲಿದೆ.
ಬಾಕ್ಸ್
ಭದ್ರಾ ಮೇಲ್ದಂಡೆ ಯೋಜನೆಯಿಂದ 51 ಕೆರೆ ಭರ್ತಿ
ಭದ್ರಾ ಮೇಲ್ದಂಡೆ ಯೋಜನೆಯಿಂದ ತುರುವನೂರು ಹೋಬಳಿಯ ಒಂಬತ್ತು ಕೆರೆಗಳು ಸೇರಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 51 ಕೆರೆಗಳು ಭರ್ತಿಯಾಗಲಿದೆ. ರೈತರು ಆತ್ಮವಿಶ್ವಾಸ ಕಳೆದುಕೊಳ್ಳುವುದು ಬೇಡ, ಭದ್ರಾ ನೀರು ನೂರಕ್ಕೆ ನೂರರಷ್ಟು ಬರುತ್ತದೆ ಎಂದು ತಿಳಿಸಿದರು.

