Chitradurga news |nammajana.com|17-9-2024
ನಮ್ಮಜನ.ಕಾಂ, ಚಳ್ಳಕೆರೆ: ಚಳ್ಳಕೆರೆ ನಗರದಿಂದ ತಿಪ್ಪಾರೆಡ್ಡಿಹಳ್ಳಿ ಗ್ರಾಮಕ್ಕೆ ತೆರಳಿ ವಾಪಾಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ (Bus Accident) ಮುಂಭಾಗದ ಟಯರ್ ಸಿಡಿದ ಪರಿಣಾಮವಾಗಿ ಚಾಲಕ ನಿಯಂತ್ರಣ ತಪ್ಪಿದ ಬಸ್ ಪಕ್ಕದ ಜಮೀನಿಗೆ ನುಗ್ಗಿದೆ.
ಬಸ್‌ನಲ್ಲಿದ್ದ ಇಬ್ಬರು ಮಹಿಳಾ ಪ್ರಯಾಣಿಕರು ಹಾಗೂ ಚಾಲಕ, ಕಂಡಕ್ಟರ್ ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ.
ಚಳ್ಳಕೆರೆ ಘಟಕಕ್ಕೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ ಪ್ರತಿನಿತ್ಯ ಚಳ್ಳಕೆರೆ ತಿಪ್ಪಾರೆಡ್ಡಿಹಳ್ಳಿಗೆ ಸುಮಾರು ಎಂಟು ಟ್ರಿಪ್ ಹೋಗಿ ಬರುತ್ತಿತ್ತು. ಮಧ್ಯಾಹ್ನ ೩ರ ಸಮಯದಲ್ಲಿ ತಿಪ್ಪಾರೆಡ್ಡಿಹಳ್ಳಿ (Bus Accident) ಕಡೆಯಿಂದ ಚಳ್ಳಕೆರೆಗೆ ಬರುವ ಸಂದರ್ಭದಲ್ಲಿ ಕಾಮಸಮುದ್ರ ಗ್ರಾಮದ ಬಳಿ ಬಸ್‌ನ ಮುಂಭಾಗದ ಟಯರ್ ಸಿಡಿದ ಪರಿಣಾಮ ಈ ಘಟನೆ ಸಂಭವಿಸಿದೆ.
ಬಸ್ ರಸ್ತೆಯಿಂದ ಜಮೀನಿಗೆ ನುಗ್ಗಿದ ಸಂದರ್ಭದಲ್ಲಿ ಸುಮಾರು ೩೦ಕ್ಕೂ ಹೆಚ್ಚು ಪ್ರಯಾಣಿಕರಿದ್ದು ಎಲ್ಲರೂ ಬಸ್‌ನಿಂದ ನಿಧಾನವಾಗಿ ಕೆಳಗೆ ಇಳಿದಿದ್ದು,
ಇಬ್ಬರು ಮಹಿಳಾ ಪ್ರಯಾಣಿಕರಾದ ಜಯಮ್ಮ(೪೫), ದುರುಗಮ್ಮ(೬೫) ಇವರಿಗೆ ಸಣ್ಣಪ್ರಮಾಣದ ಪೆಟ್ಟುಬಿದ್ದಿರುತ್ತವೆ. ಚಾಲಕ ಶಿವರಾಜ್(೩೮), ಕಂಡಕ್ಟರ್ ಮಂಜಪ್ಪ(೩೪) (Bus Accident) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ.
ಇದನ್ನೂ ಓದಿ: ರೈತನಿಂದ ಲಂಚ ಸ್ವೀಕಾರ ವೇಳೆ ಗ್ರಾಮ ಲೆಕ್ಕಧಿಕಾರಿ ಲೋಕಯುಕ್ತ ಬಲೆಗೆ | Lokyukta attack
ಗಾಯಾಳು ಮಹಿಳಾ ಪ್ರಯಾಣಿಕರನ್ನು ಜಾಜೂರಿನ ಸರ್ಕಾರಿ ಆಸ್ಪತ್ರೆ ಅಂಬುಲೆನ್ಸ್ ಮೂಲಕ ಚಳ್ಳಕೆರೆ ಆಸ್ಪತ್ರೆಗೆ (Bus Accident) ಕರೆತರಲಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ಪರಶುರಾಮಪುರ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದಾರೆ.