Chitradurga News | Nammajana.com | 3-5-2024
ನಮ್ಮಜನ.ಕಾಂ.ಚಳ್ಳಕೆರೆ: ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನಗಳ ಸವಾರರು ವೇಗವನ್ನು ನಿಯಂತ್ರಿಸದೆ ರಸ್ತೆಯ ಮೇಲೆ ಚಲಿಸುತ್ತಿದ್ದು, ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಕೆಲವೊಂದು ಸಂದರ್ಭಗಳಲ್ಲಿ ಪ್ರಾಣಾಪಾಯವೂ ಆಗಿದೆ.
ಚಳ್ಳಕೆರೆ ನಗರದಿಂದ ಕ್ಯಾತಗೊಂಡನಹಳ್ಳಿ ಕಡೆಗೆ ಚಲಿಸುತ್ತಿದ್ದ ರಾಜ್ಯ ರಸ್ತೆಸಾರಿಗೆ ಸಂಸ್ಥೆ ಬಸ್ ಮೀರಸಾಬಿಹಳ್ಳಿ ಗ್ರಾಮದ ಬಳಿಯ ತಿರುವಿನ ಎದುರಿಗೆ ಬಂದ ಮೋಟಾರ್ ಬೈಕೊಂದು ಬಸ್‌ಗೆ ಅಪ್ಪಳಿಸುವ ಸಂದರ್ಭದಲ್ಲಿ ಅಪಾಯವನ್ನು ಅರಿತ ಬಸ್ ಚಾಲಕ ಓಬಳೇಶ್ ಕೂಡಲೇ ತನ್ನ ವಾಹನವನ್ನು ಬಲಗಡೆ ರಸ್ತೆಯ ಗುಂಡಿಗೆ ಇಳಿಸಿ ಬೈಕ್ ಸವಾರರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಲ್ಲದೆ, ಬಸ್‌ನಲ್ಲಿದ್ದ ಸುಮಾರು 60 ಕ್ಕೂ ಹೆಚ್ಚು ಪ್ರಾಯಾಣಿಕ ಪ್ರಾಣ ರಕ್ಷಿಸಿದ್ದಾನೆ.

ಸಾರಿಗೆ ಬಸ್ ರಸ್ತೆಯ ಬದಿಯ ಗುಂಡಿಗೆ ಇಳಿದು ನಿಂತಿದ್ದು, ಇನ್ನೂ ಕೆಲವೇ ಅಡಿ ಚಲಿಸಿದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಭಾರಿ ಅನಾಹುತ ಸಂಭವಿಸುತ್ತಿತ್ತು. ಚಾಲಕನ ಸಮಯಪ್ರಜ್ಞೆಗೆ ಸಂತಸ ವ್ಯಕ್ತಪಡಿಸಿದ್ಧಾರೆ.
ಇದನ್ನೂ ಓದಿ: ಆಕಸ್ಮಿಕ ಬೆಂಕಿ: ತೋಟದಲ್ಲಿದ್ದ ಅಡಿಕೆ, ತೆಂಗು, ಹುಣಸೆ ಮರ ಬೆಂಕಿಗೆ ಆಹುತಿ
ದೊಡ್ಡ ಉಳ್ಳಾರ್ತಿ ಗೋಶಾಲೆ ಬಳಿ ಬಸ್-ಬೈಕ್ ಡಿಕ್ಕಿ
ಚಳ್ಳಕೆರೆ ಚಿಕ್ಕ ಉಳ್ಳಾರ್ತಿ, ದೊಡ್ಡ ಉಳ್ಳಾರ್ತಿಗೆ ಪ್ರತಿನಿತ್ಯ ಸಾರಿಗೆ ಸಂಸ್ಥೆ ಬಸ್ ಚಲಿಸುತ್ತಿದ್ದು ಮಧ್ಯಾಹ್ನ ವೇಳೆ ಉಳ್ಳಾರ್ತಿಯಿಂದ ಚಳ್ಳಕೆರೆ ಕಡೆಗೆ ಬರುವಾಗ ಗೋಶಾಲೆ ತಿರುವಿನಲ್ಲಿ ಬೈಕ್‌ಗೆ ಡಿಕ್ಕಿ ಪಡಿಸಿದ ಪರಿಣಾಮವಾಗಿ ಬೈಕ್ ಸವಾರರಾದ ಚಿತ್ರನಾಯಕನಹಳ್ಳಿ ಗ್ರಾಮದ ಈರಣ್ಣ(೪೨), ವಿರೂಪಾಕ್ಷ(೩೨) ಇಬ್ಬರೂ ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಳಕು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252