Chitradurga news | nammajana.com | 05-08-2025
ನಮ್ಮಜನ.ಕಾಂ,ಚಳ್ಳಕೆರೆ: ಇಲ್ಲಿನ(Bus) ಅಂಬೇಡ್ಕರ್ ಭವನದ ಜನತಾ ಕಾಲೋನಿಯಲ್ಲಿ ಖಾಸಗಿ ಒಂದು ಹಿಮ್ಮುಖ ವಾಗಿ ಚಾಲಕನ ಮೇಲೆ ಚಲಿಸಿದ ಪರಿಣಾಮ ಗಾಯಗೊಂಡ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಶಿರಾ ತಾಲೂಕಿನ ಕಾರ್ಪೆಹಳ್ಳಿ ಗ್ರಾಮದ ಈ.ಪ್ರಕಾಶ್ (37) ಮೃತ ಚಾಲಕ. ಚಳ್ಳಕೆರೆ ಯಿಂದ ಧರ್ಮಸ್ಥಳಕ್ಕೆ ಮದುವೆ ಸಮಾರಂಭಕ್ಕೆ ಹೋಗಿ ವಾಪಸ್ ಬಂದು ಅಂಬೇಡ್ಕರ್‌ಭವನ ಮುಂಭಾಗ ಬಸ್ ನಿಲ್ಲಿಸಿ ಚಾಲಕ ಪ್ರಕಾಶ್ ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗ ಹ್ಯಾಂಡ್‌ಬ್ರೇಕ್ ಹಾಕದ ಪರಿಣಾಮ ಬಸ್ ಹಿಮ್ಮುಖವಾಗಿ ಚಾಲಕ ಪ್ರಕಾಶ್ ಮೇಲೆ ಚಲಿಸಿದೆ.
ಇದನ್ನೂ ಓದಿ: ಚಿತ್ರದುರ್ಗ Ksrtc ನೌಕರ ಮುಷ್ಕರ, ರಸ್ತೆ ಬಂದಿಲ್ಲ ಬಸ್, ಜನರಿಗೆ ಪರದಾಟ ಗ್ಯಾರೆಂಟಿ | KSRTC bus shutdown
ತೀವ್ರವಾಗಿ ಗಾಯಗೊಂಡ ಅವರನ್ನು(Bus) ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯುವ ಸಂದರ್ಭ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. .ಪಿಎಸ್‌ಐ ಈರೇಶ್ ಪ್ರಕರಣ ದಾಖಲಿಸಿದ್ದಾರೆ.
