Chitradurga News | Nammajana.com | 30-07-2025
ನಮ್ಮಜನ.ಕಾಂ, 75 ವರ್ಷಗಳಿಂದ ಬಸ್(Bus) ಕಾಣದೆ ಇರುವ ಗ್ರಾಮಕ್ಕೆ ನ್ಯಾಯಾಧೀಶರಿಂದ ಇಂದು ಮೊದಲ ಬಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಸೇವೆ ಆರಂಭವಾಗಿದೆ.
ಇದನ್ನೂ ಓದಿ: ಜಿಲ್ಲೆಯಲ್ಲಿ 1485 ಮೆಟ್ರಿಕ್ ಟನ್ ಯೂರಿಯಾ ದಾಸ್ತಾನು

ಹೌದು ಇದು ಜೋಡಿಚಿಕ್ಕೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಸುಮಾರು 75 ವರ್ಷಗಳಿಂದ ಬಸ್ ಸಂಚಾರವಿಲ್ಲದೆ ಗ್ರಾಮಸ್ಥರು, ವಿದ್ಯಾರ್ಥಿಗಳು ತಮ್ಮ ಗ್ರಾಮದಿಂದ ಬೇರೆ ಕಡೆ ಹೋಗಲು ಬಸ್ ಸಂಚಾರ ಇಲ್ಲದೇ ಪರದಾಡುತ್ತಿದ್ದರು.
75 ವರ್ಷಗಳಿಂದ ಬಸ್ ಕಾಣದೆ ಇರುವ ಗ್ರಾಮಕ್ಕೆ ನ್ಯಾಯಾಧೀಶರಿಂದ ಇಂದು ಮೊದಲ ಬಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಸೇವೆ ಆರಂಭ
ಈ ಗ್ರಾಮಕ್ಕೆ ಕಳೆದ 75 ವರ್ಷಗಳಿಂದ ಸಾರ್ವಜನಿಕ ಸಾರಿಗೆ ಸೇವೆ ಲಭ್ಯವಿಲ್ಲದೆ ಇದ್ದರೂ, ಇಂದು ಮೊದಲ ಬಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಸೇವೆ ಆರಂಭವಾಗಿದೆ. ಇದು ಗ್ರಾಮಸ್ಥರಲ್ಲಿ ಅಪಾರ ಖುಷಿಯನ್ನುಂಟುಮಾಡಿದ್ದು, ಈ ಸಂತಸದ ಹಿಂದಿನ ಕಾರಣ, ಹಳ್ಳಿ ಜನರ ನಂಬಿಕೆಗೆ ಸ್ಪಂದಿಸಿದ ನ್ಯಾಯಾಧೀಶರ ವರ ಎನ್ನುತ್ತಿದ್ದಾರೆ.
ಇದನ್ನೂ ಓದಿ: ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ
ಈ ಸೇವೆ ಆರಂಭಕ್ಕೆ ಪೂರಕವಾದದ್ದು(Bus) ಸರಸ್ವತಿ ಕಾನೂನು ಕಾಲೇಜಿನಲ್ಲಿ ನಡೆದ NSS ಶಿಬಿರ. ಈ ಶಿಬಿರದ ವೇಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ನ್ಯಾಯಾಧೀಶರಾದ ವಿಜಯ್ ಸರ್ ಅವರಿಗೆ ತಮ್ಮ ದೈನಂದಿನ ಸಮಸ್ಯೆ ಮತ್ತು ಬಸ್ ಸೌಲಭ್ಯವಿಲ್ಲದ ವಾಸ್ತವಿಕತೆ ಬಗ್ಗೆ ಮನವಿ ಸಲ್ಲಿಸಿದ್ದರು.
ಕೇವಲ ಶಾಸಕರು, ಅಧಿಕಾರಿಗಳಿಂದಲೇ ಅಲ್ಲದೆ, ನ್ಯಾಯಮೂರ್ತಿಯ ಹೃದಯವಂತಿಕೆಯಿಂದ ಈ ಬಸ್ ಸೇವೆಗೆ ರೂಪವಾಯಿತು. ನ್ಯಾಯಮೂರ್ತಿಗಳು ತಕ್ಷಣ ಸ್ಪಂದಿಸಿ ಸಂಬಂಧಪಟ್ಟ ಇಲಾಖೆಗೆ ಶಿಫಾರಸು ಮಾಡಿದರು.
ಇಂದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರ್ಕಾರಿ ಬಸ್‌ನ್ನು ಚಾಲನೆ ಮಾಡಲಾಯಿತು. ಈ ಸಂದರ್ಭ ಚಾಲಕ ರಾಮಕೃಷ್ಣಪ್ಪ, ಕಂಡಕ್ಟರ್ ಮಂಜುನಾಥ, ಪಂಚಾಯತ್ ಸದಸ್ಯರಾದ ವಿಜಯಮ್ಮ, ಬಿ. ವೀರಣ್ಣ, ಹಿರಿಯ ಮುಖಂಡರು ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿದಂತೆ ಎಲ್ಲರ ಉಪಸ್ಥಿತಿಯಿಂದ ಕಾರ್ಯಕ್ರಮ ಅದಕ್ಕಿಂತಲೂ ಹೆಚ್ಚಿನದಾಗಿ, ಇದು ಜನಮನದಲ್ಲಿ ಆಶೆಯ ಬೆಳಕು ಹೊಳೆಯುವಂತಹ ಕ್ಷಣವಾಯಿತು.
ಇದನ್ನೂ ಓದಿ: HIRIYUR THO ಮನೆ ಮೇಲೆ ಲೋಕಾಯುಕ್ತ ದಾಳಿ, ಏನೆಲ್ಲ ಸಿಕ್ಕಿತ್ತು ನೋಡಿ!
ಈ ಬಸ್ ಸೇವೆ ಇನ್ನು ಮುಂದೆ(Bus) ಜನರ ಜೀವನದಲ್ಲಿ ಬೆಳವಣಿಗೆಗೆ ಕಾರಣವಾಗಲಿದೆ. ಶಿಕ್ಷಣ, ಉದ್ಯೋಗ, ಆರೋಗ್ಯ ಸೇವೆಗಳತ್ತ ಈ ಬಸ್ ಒಂದು ಹಸಿರು ದಾರಿ ತೆರೆದಿದೆ. ನ್ಯಾಯದೀಪದ ಬೆಳಕು ಇಂದು ಈ ಹಳ್ಳಿಗೆ ಹೊಸ ದಿಕ್ಕು ತೋರಿಸಿದಂತಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252