Chitradurga news|nammajana.com|18-11-2024
ನಮ್ಮಜನ.ಕಾಂ, ಸಿರಿಗೆರೆ: ಸಮೀಪದ ಕಡ್ಲೆಗುದ್ದು ಗ್ರಾಮದಲ್ಲಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಭಾನುವಾರ ಬೋನಿಗೆ (Capture the leopard) ಬಿದ್ದಿದೆ.ಎಡಗೈ a ಈ ಮೂಲಕ ಚಿರತೆ ದಾಳಿಯ ಆತಂಕದಲ್ಲೇ ದಿನ ದೂಡುತ್ತಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಕಡ್ಲೆಗುದ್ದು ಗ್ರಾಮದಲ್ಲಿ ಕೆಲ ದಿನಗಳಿಂದ ಚಿರತೆ ಓಡಾಟ ಸಂಚಲನ ಮೂಡಿಸಿತ್ತು. ಆಗಾಗ್ಗೆ ಗ್ರಾಮಸ್ಥರ ಮೇಲೆ ಹಾಗೂ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಭಯದ (Capture the leopard) ವಾತಾವರಣ ಸೃಷ್ಟಿಸಿತ್ತು. ಪರಿಣಾಮ ಗ್ರಾಮಸ್ಥರು ಮನೆಯಿಂದ ಹೊರ ಬರಲು ಸಹ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು
ಗ್ರಾಮ ಹಾಗೂ ಸುತ್ತಮುತ್ತ ಚಿರತೆ ಸಂಚರಿಸುತ್ತಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು. ಗ್ರಾಮಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಚಿರತೆ ಸೆರೆಗೆ ಬೋನು ಇರಿಸಿ ಬಂದಿದ್ದರು.
ಇದನ್ನೂ ಓದಿ: ಕೆರೆಗೆ ಕಾರು: ಇಬ್ಬರ ಸಾವು | Car accident
ಹಲವು ದಿನಗಳಿಂದ ಕಾಟ ನೀಡಿ ತಪ್ಪಿಸಿಕೊಳ್ಳುತ್ತಿದ್ದ ಚಿರತೆ, ಭಾನುವಾರ ಮಧ್ಯಾಹ್ನ ಬೋನಿಗೆ ಬಿದ್ದಿದೆ. ಅರಣ್ಯ ಇಲಾಖೆ (Capture the leopard) ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಸೆರೆಯಾದ ಚಿರತೆಯನ್ನು ಆಡುಮಲ್ಲೇಶ್ವರ ಮೃಗಾಲಯಕ್ಕೆ ಕರೆದೊಯ್ದರು.
ಇದನ್ನೂ ಓದಿ: ಇಂದಿನ ರಾಶಿ ಭವಿಷ್ಯ, ಯಾವ್ಯಾವ ರಾಶಿಗೆ ಶುಭ, ಆಶುಭ ? |Kannada Dina Bhavishya