Chitradurga news | nammajana.com | 30-07-2025
ನಮ್ಮಜನ.ಕಾಂ, ಚಳ್ಳಕೆರೆ: ನಗರದ(Accident) ಚಿತ್ರದುರ್ಗ ರಸ್ತೆಯ ವೀರದಿಮ್ಮನಹಳ್ಳಿ ರಾಷ್ಟೀಯ ಹೆದ್ದಾರಿ(150ಎ) ಬೈಪಾಸ್‌ನಲ್ಲಿ ಮಂಗಳವಾರ ಮಧ್ಯಾಹ್ನ ಮೋಟಾರ್ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಕಾರು ಚಾಲಕ ಸಹ ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾನೆ.
ಇದನ್ನೂ ಓದಿ: ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ

ತಾಲ್ಲೂಕಿನ ತಳಕು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಟಿ.ರವಿಚಂದ್ರರವರ ಪತ್ನಿ ಕೆ.ಮಂಜುಳಾ(32), ಮಂಜುಳಾ ಸಹೋದರ ಅಭಿಷೇಕ್(28) ತಮ್ಮ ಬೈಕ್‌ನಲ್ಲಿ ತಳುಕಿನಿಂದ ಹಿರಿಯೂರು ತಾಲ್ಲೂಕಿನ ದೇವರಕೊಟ್ಟ ಗ್ರಾಮದ ಮೊರಾರ್ಜಿಶಾಲೆಗೆ ತೆರಳುತ್ತಿದ್ದು, ಮಂಜುಳಾ, ರವಿಚಂದ್ರರವರ ಪುತ್ರ ದೇವರಕೊಟ್ಟದ ಮೊರಾರ್ಜಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು ಪುತ್ರನನ್ನು ನೋಡಲು ಮಂಜುಳಾ ಸಹೋದರ ಅಭಿಷೇಕ್‌ನೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಳು.
ಹಿರಿಯೂರು ಕಡೆಯಿಂದ(Accident) ಬಳ್ಳಾರಿ ಕಡೆಗೆ ಹೋಗುತ್ತಿದ್ದ ಕಾರು ವಿರುದ್ದ ದಿಕ್ಕಿನಲ್ಲಿ ಆಗಮಿಸಿ ಮೋಟಾರ್‌ಬೈಕ್‌ಗೆ ಅಪ್ಪಳಿಸಿದೆ. ಕಾರಿನ ಅತಿವೇಗ ಈ ಅಪಘಾತಕ್ಕೆ ಕಾರಣವಾಗಿದ್ದು ಅಪಘಾತದ ನಂತರ ಸುಮಾರು ೩೦ ಮೀಟರ್ ದೂರದಲ್ಲಿ ಬೈಕ್ ಬಿದಿದ್ದು, ಅಭಿಷೇಕ್ ಮತ್ತು ಮಂಜುಳಾರವರ ಶವಗಳು ಅಲ್ಲಲ್ಲಿ ಬಿದ್ದಿದ್ದವು.
ಕಾರುಚಾಲಕ ರಾಯಚೂರು ಜಿಲ್ಲೆ ಸಂಕನಹಾಳ್ ಗ್ರಾಮದ ನಾಗರಡ್ಡೆಪ್ಪ(35) ಬೈಕ್‌ಗೆ ಡಿಕ್ಕಿಪಡಿಸಿದ್ದು, ಅರೆಪ್ರಜ್ಞ ವ್ಯವಸ್ಥೆಯಲ್ಲಿ ಬಿದಿದ್ದ ನಾಗರಡೆಪ್ಪನನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ಧಾರೆ.
ಇದನ್ನೂ ಓದಿ: HIRIYUR THO ಮನೆ ಮೇಲೆ ಲೋಕಾಯುಕ್ತ ದಾಳಿ, ಏನೆಲ್ಲ ಸಿಕ್ಕಿತ್ತು ನೋಡಿ!
ಡಿಕ್ಕಿ ರಭಸಕ್ಕೆ ಕಾರು ಹಾಗೂ ಬೈಕ್ ಎರಡು(Accident) ಜಖಂಗೊಂಡಿವೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಎಸ್‌ಐ ಈರೇಶ್ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ಧಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252