Chitradurga news | nammajana.com|16-12-2024
ನಮ್ಮಜನ ವಿಶೇಷ : ಹೊಸ ವರ್ಷಕ್ಕೆ ಇನ್ನು ಅರ್ಧ ತಿಂಗಳಷ್ಟೇ ಬಾಕಿ ಉಳಿದಿದೆ. ಆದರೆ, 2025ನೇ ವರ್ಷವು ಕಾರು ಮೇಲಿನ ದರ ಎರಿಕೆಯಾಗಲಿದ್ದು ಜನರ ಮೇಲಿನ (Car price increase) ದರ ಏರಿಕೆಯ ಹೊರೆಯನ್ನು ಇನ್ನಷ್ಟು ಹೆಚ್ಚಿಸುವ ಲಕ್ಷಣಗಳು ಕಂಡು ಬಂದಿವೆ.
ಈಗಾಗಲೇ ತ್ವರಿತ ಮಾರಾಟದ ಗ್ರಾಹಕ ಸರಕುಗಳ(ಎಫ್ ಎಂಸಿಜಿ) ಕಂಪನಿಗಳು ತಮ್ಮ ಉತ್ಪನ್ನಗಳ ದರಗಳನ್ನು ಶೇ.3-7ರಷ್ಟು ಏರಿಕೆ ಮಾಡಲು ಮುಂದಾಗಿವೆ. ಈ ಪರಿಣಾಮ, (Car price increase) ಎಫ್ಎಂಸಿಜಿ ಉತ್ಪನ್ನಗಳು ತುಟ್ಟಿಯಾಗಲಿವೆ. ಮತ್ತೊಂದು ಕಡೆ ಕಾರುಗಳ ದರವೂ ಏರಿಕೆಯಾಗಲಿದೆ.

ಎಫ್‌ಎಂಸಿಜಿ ಕಂಪನಿಗಳ ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಳವಾಗಿದೆ. ಆದರೆ, ಅದೆಲ್ಲವನ್ನೂ ಗ್ರಾಹಕರಿಗೆ ವರ್ಗಾಯಿಸುತ್ತಿಲ್ಲ. ಏಕೆಂದರೆ, ಸ್ಥಿರವಾಗಿರುವ గ్రామిణ ಮಾರುಕಟ್ಟೆಗಳ ಪುನರುಜ್ಜಿವನವನ್ನು ಈ ಕಂಪನಿಗಳು ಬಯಸುತ್ತಿವೆ.
ಹಣದುಬ್ಬರ ಮತ್ತು ಉದ್ಯೋಗ ನಷ್ಟದಿಂದಾಗಿ ದೇಶದ ನಗರ ಪ್ರದೇಶಗಳ ಮಧ್ಯಮ ವರ್ಗದ ಜನರು ತಮ್ಮ ವೆಚ್ಚಗಳನ್ನು ತಗ್ಗಿಸಿದ್ದಾರೆ. ಇದರಿಂದಾಗಿ ಎಫ್‌ಎಂಸಿಜಿ ಉತ್ಪನ್ನಗಳ ಖರೀದಿಗೆ ಪೆಟ್ಟು ಬಿದ್ದಿದೆ. ಈ ಮಧ್ಯೆಯೂ, ದರ ಏರಿಕೆಯ ಅನಿವಾರ್ಯತೆಯಲ್ಲಿ ಈ ಕಂಪನಿಗಳು ಸಿಲುಕಿವೆ.
ಖಾದ್ಯ ತೈಲ ಕಂಪನಿಗಳು ಸಾಮಾನ್ಯವಾಗಿ ಸಂಪೂರ್ಣ ಬೆಲೆ ಏರಿಕೆ/ಇಳಿಕೆಯನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆ. ಪೂರೈಕೆ ದಾಸ್ತಾನುಗಳನ್ನು ಅವಲಂಬಿಸಿ 5-15 ದಿನಗಳ (Car price increase) ವಿಳಂಬವಾಗಬಹುದು. ಪ್ಯಾಕೇಜ್ ಮಾಡಿದ ಆಹಾರ ಕಂಪನಿಗಳು ಬೇಡಿಕೆಗೆ ಹಾನಿಯಾಗದಂತೆ ಮಧ್ಯಮ ಒಂದಂಕಿಯ ದರ ಏರಿಕೆಗೆ ಮುಂದಾಗಿವೆ.
‘ನಾವು ಈಗಾಗಲೇ ಕೆಲವು ಉತ್ಪನ್ನಗಳ ಬೆಲೆ ಏರಿಕೆಯನ್ನು ಮಾಡಿದ್ದೇವೆ. ಮುಂದಿನ 3ನೇ ನಾಲ್ಕನೇ ತ್ರೈಮಾಸಿಕಗಳ ನಡುವೆ ನಾವು ಶೇ.3-5ರಷ್ಟು ಏರಿಕೆ ಮಾಡಲು ಚಿಂತನೆ ನಡೆಸಿದ್ದೇವೆ,” ಎಂದು ಕೆಲವು ಕಂಪನಿಗಳ ವಕ್ತಾರರು ತಿಳಿಸಿದ್ದಾರೆ.
ಬ್ರಿಟಾನಿಯಾ ಬಿಸ್ಕತ್ತುಗಳು, ರಸ್‌ಗಳು ಮತ್ತು ಕೇಕ್ ಗಳಂತಹ ವರ್ಗಗಳಲ್ಲಿ ಈಗಾಗಲೇ ಬೆಲೆಗಳನ್ನು ಹೆಚ್ಚಿಸಲಾಗಿದೆ. ಜನವರಿ-ಮಾರ್ಚ್ ಮಾಸಿಕದಲ್ಲಿ ಮತ್ತಷ್ಟು ಏರಿಕೆಗಳು ಆಗಲಿವೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಕಾರುಗಳ ದರ 2-4% ಏರಿಕೆ
ಜನವರಿ 2025ರಿಂದ ಭಾರತದಲ್ಲಿ ಕಾರುಗಳ ಬೆಲೆ ಶೇ.2ರಿಂದ 4% ಏರಿಕೆಯಾಗಲಿವೆ. ಮಾರುತಿ ಸುಜುಕಿ, ಹುಂಡೈ ಮತ್ತು ಬಿಎಂಡಬ್ಲ್ಯುನಂತಹ ಐಷಾರಾಮಿ ಬ್ರಾಂಡ್‌ಗಳೂ ಸೇರಿದಂತೆ ಪ್ರಮುಖ ಕಂಪನಿಗಳು ಹೆಚ್ಚುತ್ತಿರುವ ಇನ್‌ಪುಟ್ ಮತ್ತು (Car price increase) ಕಾರ್ಯಾಚರಣೆಯ ವೆಚ್ಚಗಳನ್ನು ಪ್ರಸ್ತಾಪಿಸಿ, ದರ ಏರಿಕೆಯ ಅನಿವಾರ್ಯತೆಯನ್ನು ಹೇಳಿವೆ.
ಲಕ್ಷುರಿ ಕಾರು ಕಂಪನಿಗಳಾದ ಮಿನಿ, ಆಡಿ, ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್-ಬೆನ್‌ನಂತಹ ಐಷಾರಾಮಿ ಕಾರು ತಯಾರಕರು ಹೊಸ ವರ್ಷಕ್ಕೆ ಬೆಲೆ ಏರಿಕೆಯನ್ನು ದೃಢಪಡಿಸಿದ್ದಾರೆ.
ಮಾರುತಿ ಸುಜುಕಿ 4% : (Car price increase)
ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ತನ್ನ ಉತ್ಪನ್ನ ಶ್ರೇಣಿಯಾದ್ಯಂತ 4% ವರೆಗೆ ಬೆಲೆಗಳನ್ನು ಹೆಚ್ಚಿಸಲಿದೆ. 40% ಮಾರುಕಟ್ಟೆ ಪಾಲನ್ನು ಹೊಂದಿರುವ ಈ ಕಂಪನಿಯು 3.99 ಲಕ್ಷ ರೂ. ಬೆಲೆಯ ಆಲೊದಿಂದ 30 ಲಕ್ಷಕ್ಕಿಂತ ಹೆಚ್ಚು ಬೆಲೆಯ (Car price increase) ಇನ್ನಿಕೊವರೆಗೆ ವಾಹನಗಳನ್ನು ನೀಡುತ್ತಿದೆ.
ಹ್ಯುಂಡೈ 25,000 ರೂ.: ಹುಂಡೈ ಮೋಟಾರ್
ಇಂಡಿಯಾ ಜನವರಿ 1, 2025ರಿಂದ ಎಲ್ಲಾ ಮಾದರಿಯ ಕಾರುಗಳ ಬೆಲೆಗಳನ್ನು 25,000 ರೂ. ಹೆಚ್ಚಿಸಲಿದೆ. ಇದರಲ್ಲಿ ವೆನ್ಯೂ, ಕ್ರೆಟಾ ಮತ್ತು ಅಯೋನಿಕ್ 5 ಇವಿಯಂತಹ ಜನಪ್ರಿಯ ಮಾದರಿಗಳು ಸೇರಿವೆ.
ಇದನ್ನೂ ಓದಿ: ಒಳ ಮೀಸಲಾತಿ ಕುರಿತು ಸ್ಪಷ್ಟ ಸಂದೇಶ ನೀಡಿ | ಸರ್ಕಾರಕ್ಕೆ ಎಚ್ಚರಿಸಿದ ಮಾದಾರ ಚನ್ನಯ್ಯ ಶ್ರೀ | Inner reservation
ಟಾಟಾ ಮೋರ್ಟಾರ್ಸ್ 3%: ಜನವರಿಯಿಂದ
ತನ್ನ ವಿದ್ಯುತ್ ವಾಹನಗಳೂ ಸೇರಿದಂತೆ ತನ್ನ ಎಲ್ಲ ಕಾರುಗಳ ಬೆಲೆಗಳನ್ನು 3% ವರೆಗೆ ಹೆಚ್ಚಿಸುವುದಾಗಿ ಟಾಟಾ ಮೋಟಾಸ್‌ರ್ ಘೋಷಿಸಿದೆ. ನೆಕ್ಸಾನ್ ಮತ್ತು ಪಂಚ್ ಎಸ್‌ಯುವಿಗಳಂತಹ (Car price increase) ಮಾದರಿಗಳನ್ನು ಉತ್ಪಾದಿಸುವ ಕಂಪನಿಯು, ದರ ಹೆಚ್ಚಳ ಅನಿವಾರ್ಯ ಎಂದಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252