Chitradurga news|nammajana.com|18-11-2024
ನಮ್ಮಜನ.ಕಾಂ, ಚಿತ್ರದುರ್ಗ: ನಾವು ಕೋಟೆ ಜಾಗವನ್ನು ಒತ್ತುವರಿ ಮಾಡಿಲ್ಲ, ನಮ್ಮ ಜಮೀನಿಗೆ ನಾವು ಸಿಮೆಂಟ್ (Fort encroachment case) ಕಾಂಪೌಂಡ್ ಹಾಕಿಕೊಂಡಿದ್ದೇನೆ. ಕೋಟೆ ಜಾಗ ಒತ್ತುವರಿ ಮಾಡಿಲ್ಲ ಎಂದು ನಗರಸಭೆ ಸದಸ್ಯ ದೀಪು ಆರೋಪಕ್ಕೆ ನಿವೃತ್ತ ಅರಣ್ಯ ಅಧಿಕಾರಿ ರಾಮಮೂರ್ತಿ ಸ್ಪಷ್ಟನೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಭಾನುವಾರ ನಗರಸಭೆ ಸದಸ್ಯ ದೀಪು ಅವರು ನಮ್ಮ ಜಮೀನಿನ ಬಳಿ ಕೋಟೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು (Fort encroachment case) ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದರು ಆದರೆ ಆ ಜಮೀನು ನಮ್ಮ ಹೆಸರಿಗೆ ಪಹಣಿ ಮತ್ತು ಮೂಲ ದಾಖಲೆಗಳಿದ್ದು ದೀಪು ಅವರ ಆರೋಒದಲ್ಲಿ ಉರುಳಿಲ್ಲ ಎಂದು ದೂರಿದರು.
ನಾವು ಸುಮಾರು 1.15 ಎಕರೆ ಜಾಗವನ್ನು ಖರೀದಿ ಮಾಡಿದ್ದೇನೆ. ಮುಸ್ಲಿಂ ಅವರಿಗೆ ಸರ್ಕಾರದಿಂದ ಮಂಜೂರಾಗಿದ್ದ ಭೂಮಿಯನ್ನು 50 ವರ್ಷಗಳ ನಂತರ ನಾವು ಖರೀದಿಯನ್ನು ನಮ್ಮ ತಾಯಿ ರಾಮಕ್ಕ ಹೆಸರಿಗೆ ಮಾಡಿದ್ದೇವು. ಅದಕ್ಕೆ ಎಲ್ಲಾ (Fort encroachment case) ದಾಖಲೆಗಳು ನಮ್ಮ ಬಳಿ ಇದ್ದು ನಗರಸಭೆ ಸದಸ್ಯರ ಜಗಳದಲ್ಲಿ ನಮ್ಮನ್ನ ತರಬೇಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ.
ನಗರಸಭೆ ಸದಸ್ಯ ಶ್ರೀನಿವಾಸ್ ಮತ್ತು ಬಾಸ್ಕರ್ ಗೂ ನಮಗೂ ಸಂಬಂಧವಿಲ್ಲ. ನಾವು ಎಲ್ಲಾವನ್ನು ತುಂಬಾ ವರ್ಷಗಳ ಹಿಂದೆ ಭಾಗ ಮಾಡಿಕೊಂಡಿದ್ದೇವೆ. ಅಣ್ಣ ತಮ್ಮ , ಮಗನ ಸಂಬಂಧ ಅಷ್ಟೆ ಆಸ್ತಿ ಸೇರಿ ಯಾವುದು ಹಣಕಾಸು ಸಂಬಂಧ ನಮ್ಮ ಅವರ ಮಧ್ಯೆ ಇಲ್ಲ ಎಂದರು. .
ಕಂದಾಯ ಕಟ್ಟಿಲ್ಲ ಅಂದರೆ ಕೇಸ್ ದಾಖಲಿಸಿ
ದೀಪು ಅವರು ಶ್ರೀನಿವಾಸ್ ಮತ್ತು ಬಾಸ್ಕರ್ ಅವರು ಕಾಲೇಜಿನ ಕಂದಾಯ ಕಟ್ಟದೇ ವಂಚನೆ ಮಾಡಿದ್ದಾರೆ ಎಂದು (Fort encroachment case) ಆರೋಪಿಸಿದ್ದು ಅವರ ಆ ವಿಚಾರಕ್ಕೆ ತಕ್ಕಂತೆ ತನಿಖೆ ಮಾಡಿಸಿ ಹಣ ಸಂದಾಯ ಮಾಡಿಸಿಕೊಳ್ಳಲಿ ನನಗೇನು ಸಂಬಂಧವಿಲ್ಲ. ಅವರ ಮಧ್ಯೆ ನನ್ನನ್ನು ಮಾತ್ರ ಎಳೆದು ತರಬೇಡಿ, ನಿಮ್ಮ ಜಗಳ ನೀವು ಮಾಡಿಕೊಳ್ಳಬೇಡಿ ಎಂದು ದೀಪು ಅವರಿಗೆ ಮನವಿ ಮಾಡಿದರು.
ಒಂದು ವೇಳೆ ತನಿಖೆ ಮೂಲಕ ನಾನು ಕಾಪೌಂಡ್ ಹಾಕಿಕೊಂಡಿರುವ ಜಮೀನು ವ್ಯತ್ಯಸವಾಗಿದ್ದರೆ ಕೂಡಲೇ ತೆರವುಗೊಳಿಸುತ್ತೇವೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಇದನ್ನೂ ಓದಿ: ವಾಣಿ ವಿಲಾಸ ಸಾಗರ ಇಂದಿನ ನೀರಿನ ಮಟ್ಟ | Vani Vilasa Sagara Dam
ನಾವು ಯಾವ ಆಸ್ತಿಯನ್ನು ಮೂಲ ದಾಖಲೆ ಇಲ್ಲದೇ ಖರೀದಿ ಮಾಡಿಲ್ಲ, ಎಲ್ಲಾವದಕ್ಕೂ ಪತ್ರ ವ್ಯವಹಾರ ಸರಿಯಾಗಿ (Fort encroachment case) ಮಾಡಿದ್ದೇನೆ. ನಮ್ಮ ತಂದೆ ಅದೇ ಇಲಾಖೆಯಲ್ಲಿ ಕೆಲಸ ಮಾಡಿದ್ದು ಪತ್ರ ಇಲ್ಲದೇ ಖರೀದಿ ಮಾಡುವಷ್ಟು ದಡ್ಡರು ನಾವಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆ ಸೆರೆ | Capture the leopard