
Chitradurga news|nammajana.com|15-05-2025

ನಮ್ಮಜನ.ಕಾಂ, ಚಿತ್ರದುರ್ಗ: ನಗರದ ಹೊರವಲಯದ (CBSE) ಎಂ.ಕೆ.ಹಟ್ಟಿ ಎಸ್‌ಜೆಎಂ ಆಂಗ್ಲಮಾಧ್ಯಮ ಶಾಲೆಗೆ ಸಿಬಿಎಸ್‌ಇ ಪರೀಕ್ಷೆಯಲ್ಲಿ ಸತತ 23 ವರ್ಷಗಳಿಂದ ಉತ್ತಮ ಫಲಿತಾಂಶ ಲಭಿಸಿದೆ.
ಅತ್ಯುತ್ತಮ ಶ್ರೇಣಿಯಲ್ಲಿ 7, ಉತ್ತಮ ಶ್ರೇಣಿಯಲ್ಲಿ 19, ದ್ವಿತೀಯ ಶ್ರೇಣಿಯಲ್ಲಿ 11 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕೆ.ಶಾಂಭವಿ ಶೇ.96ರಷ್ಟು ಅಂಕ ಪಡೆದು ಪ್ರಥಮ, ಆರ್.ಧ್ರುವ ಶೇ.91 ರಷ್ಟು ಪಡೆದು ದ್ವಿತೀಯ, ಎಸ್.ಪ್ರೀತಮ್ ಮತ್ತು ಆರ್ ಅನುಷಾ ಶೇ.89.44ರಷ್ಟು ಅಂಕ ಪಡೆದು ತೃತೀಯ ಸ್ಥಾನ (CBSE) ಪಡೆದಿದ್ದಾರೆ.
ಇದನ್ನೂ ಓದಿ: Adike rate | ಇಂದಿನ ಅಡಿಕೆ ರೇಟ್
ಎಸ್ ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ್, ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ಡಾ.ಪಿ.ಎಸ್. ಶಂಕರ, ಎಸ್.ಎನ್.ಚಂದ್ರಶೇಖರ್ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ (CBSE) ವ್ಯಕ್ತಪಡಿಸಿ ದ್ದಾರೆ.
