
Chitradurga news|nammajana.com|16-12-2024
ನಮ್ಮಜನ.ಕಾಂ, ವಿಶೇಷ: ಕೇಂದ್ರ ಸರಕಾರಿ ನೌಕರರ ವೇತನ (Central Government) ಹೆಚ್ಚಳಕ್ಕೆ ಸಂಬಂಧಿಸಿದಂತೆ 8ನೇ ವೇತನ ಆಯೋಗ ರಚಿಸುವ ಪ್ರಸ್ತಾಪ ಇಲ್ಲ ಎಂದು ಇತ್ತೀಚೆಗಷ್ಟೇ ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್ ಚೌಧರಿ ಸ್ಪಷ್ಟಪಡಿಸಿದ್ದಾರೆ.
ಇದರ ಬೆನ್ನಲ್ಲೇ, ”ನೌಕರರ ಸಂಬಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರಕಾರವು ಹೊಸ ವ್ಯವಸ್ಥೆಯನ್ನು ಜಾರಿಗೆ ತರುವ ಸಾಧ್ಯತೆ ಇದೆ. ಆದರೆ, ವೇತನ ಹೆಚ್ಚಳಕ್ಕೆ ನೂತನ ಆಯೋಗ ರಚನೆಯೇ ಉತ್ತಮವಾದುದು,”ಎಂದು ಸರಕಾರಿ ನೌಕರರ ಒಕ್ಕೂಟ ತಿಳಿಸಿದೆ.

”ಸರಕಾರವೇನಾದರೂ ಹೊಸ ಮೆಕ್ಯಾನಿಸಂ ರಚನೆಗೆ ಮುಂದಾದರೆ, ನಮ್ಮನ್ನು ಸಂಪರ್ಕಿಸಬೇಕು,” ಎಂದು ನೌಕರರ ಸಂಘಟನೆಗಳು ಒತ್ತಾಯಿಸಿವೆ. 2025-26ನೇ ಸಾಲಿನಲ್ಲಿ (Central Government) ಕೇಂದ್ರ ಸರಕಾರವು 8ನೇ ಆಯೋಗ ರಚಿಸುತ್ತದೆ ಎಂದೇ ಹೇಳಲಾಗಿತ್ತು.
ಇದನ್ನೂ ಓದಿ: Car price increase | ಕಾರುಗಳ ಮೇಲಿನ ಬೆಲೆ 2 ರಿಂದ 4% ಹೆಚ್ಚಳ ಸಾಧ್ಯತೆ
“ಈ ಪ್ರಸ್ತಾಪವೇ ಇಲ್ಲ,” ಎಂದು ಸರಕಾರ ತಿಳಿಸಿರುವುದು (Central Government) ನೌಕರರಿಗೆ ತುಸು ನಿರಾಸೆ ತಂದಿದೆ. 2016ರಲ್ಲಿ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲಾಗಿತ್ತು.