Chitradurga news|nammajana.com|24-04-2025
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ರೆಡ್ಡಿಹಳ್ಳಿ ಗ್ರಾಮದಲ್ಲಿರುವ ಮಾರಮ್ಮದೇವಿಗೆ ಪ್ರತಿಮಂಗಳವಾರ ಭಕ್ತರು ಸಿಹಿ ಹೋಳಿಗೆ ಸಿದ್ದಪಡಿಸಿ ದೇವರಿಗೆ ಅರ್ಪಿಸಿ ಭಕ್ತರಿಗೆ (Challakere) ಹೋಳಿಗೆ ಊಟವನ್ನು ಊಣಬಡಿಸುವುದು ವಾಡಿಕೆಯಾಗಿದೆ.
ಕಳೆದ ಹಲವಾರು ವರ್ಷಗಳಿಂದ ಈ ಪದ್ದತಿ ನಡೆದುಬಂದಿದ್ದು, ದೇವಿಗೆ ಹರಿಕೆ ಹೊತ್ತವರು ಹೋಳಿಗೆ ಊಟವನ್ನು ಭಕ್ತರಿಗೆ ನೀಡುತ್ತಾರೆ.

ಅದರಂತೆ ಏ.22ರ ಮಂಗಳವಾರ ಮಧ್ಯಾಹ್ನ ಪೂಜೆ ನಂತರ ಅಲ್ಲಿದ್ದ ಭಕ್ತರಿಗೆ ಹೋಳಿಗೆ ಊಟ ನೀಡಲಾಗಿದೆ. ಊಟ ಸೇವಿಸಿದ ಮೇಲೆ ಯಾವುದೇ ಪರಿಣಾಮ ಆಗದಿದ್ದರೂ ಸಂಜೆ ಮಾತ್ರ ಕೆಲವರಿಗೆ ವಾಂತಿ, ಭೇದಿ ಆರಂಭವಾಗಿದೆ. ಬುಧವಾರ ಬೆಳಗ್ಗೆ ಇನ್ನೂ ಹೆಚ್ಚು ಜನ ವಾಂತಿ, ಬೇದಿ ಆರಂಭವಾದಾಗ ಗೋಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ಧಾರೆ. ಸುಮಾರು 20 ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿ ಕಳಿಸಲಾಗಿದೆ. ಬುಧವಾರ ಮಧ್ಯಾಹ್ನ 4 ರ ಸಮಯದಲ್ಲಿ ಹೋಳಿಗೆ ಊಟ ಮಾಡಿದವರಿಗೆ ಮತ್ತೆ ವಾಂತಿ, ಬೇಧಿ (Challakere) ಆರಂಭವಾಗಿದೆ ಸುಮಾರು ೪೦ಕ್ಕೂ ಹೆಚ್ಚು ಜನರಿಗೆ ವಾಂತಿ, ಬೇದಿಯಾಗಿದ್ದು ಗಾಬರಿಗೊಂಡ ಭಕ್ತರು ಕೂಡಲೇ ಸಾರ್ವಜನಿಕ ಆಸ್ಪತ್ರೆ ದಾಖಲಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಯೋವೃದ್ದರು, ಮಹಿಳೆಯರು, ಪುರುಷರು, ಮಕ್ಕಳಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ಧಾರೆ.
ಸುದ್ದಿ ತಿಳಿದ ತಹಶೀಲ್ಧಾರ್ ರೇಹಾನ್‌ಪಾಷ ಆಸ್ಪತ್ರೆಗೆ ದಾಖಲಿಸಿ ರೋಗಿಗಳ ಯೋಗಕ್ಷೇಮ ವಿಚಾರಿಸಿದ್ಧಾರೆ. ಈ ಸಂದರ್ಭದಲ್ಲಿ ವಾಂತಿ, ಬೇದಿಯಿಂದ ಆಸ್ಪತ್ರೆಗೆ ದಾಖಲಾದ ಹಲವಾರು ರೋಗಿಗಳು ಯಾವ ಕಾರಣದಿಂದ ವಾಂತಿಯಾಗಿದೆ. (Challakere) ಎಂಬುವುದು ತಿಳಿಯುತ್ತಿಲ್ಲ, ಗ್ರಾಮದಲ್ಲಿ ನೀರು ಕಾಣರವೇ ಅಥವಾ ಬೇರೆಯಾವುದು ಸಮಸ್ಯೆ ಎಂಬ ಬಗ್ಗೆ ಗ್ರಾಮಸ್ಥರು ಯಾವುದೇ ನೀಡುತ್ತಿಲ್ಲ. ಒಟ್ಟಿನಲ್ಲಿ ಗಾಬರಿಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ಧಾರೆ.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ | 24-04-2025
ಕರ್ತವ್ಯ ನಿರತ ವೈದ್ಯ ಡಾ.ಡಿ.ಆರ್.ಮಂಜಪ್ಪ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಿ ಯಾವ ಕಾರಣದಿಂದ ವಾಂತಿ, ಬೇದಿಯಾಗುತ್ತಿದೆ ಎಂಬ ಬಗ್ಗೆ ಇನ್ನು ತಿಳಿದಿಲ್ಲ. ಆಸ್ಪತ್ರೆಗೆ ದಾಖಲಾದ ಎಲ್ಲಾ ರೋಗಿಗಳಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಆಗಮಿಸಿ ಮಾಹಿತಿ ಪಡೆದಿದ್ಧಾರೆ. ಪ್ರಸ್ತುತ ಬಹುತೇಕ ಎಲ್ಲಾ ರೋಗಿಗಳು ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ಧಾರೆ. ಯಾವುದೇ ಪ್ರಾಣಾಪಾಯವಿಲ್ಲವೆಂದು ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252