Chitradurga news |nammajana.com|25-03-2025
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಗಾರದೇವರಹಟ್ಟಿಯಲ್ಲಿ ಪುರಾತನ ಬುಡಕಟ್ಟು ಸಮುದಾಯದ ಆರಾಧ್ಯ ದೈವವಾದ (Challakere) ಶ್ರೀಬಂಗಾರದೇವರ ದೇವಸ್ಥಾನ ಪುನರ್ ನಿರ್ಮಾಣ ಸಂದರ್ಭದಲ್ಲಿ ಜೆಸಿಬಿ ಯಂತ್ರದಿಂದ ಬೂನಾದಿ ತೆಗೆಯಲು ಆರಂಭಿಸಿದಾಗ ದೇವರ ಆಭರಣವಿರುವ 70 ವರ್ಷದ ಹಿಂದಿನ ತಿಜೋರಿ ದೊರಕಿದ್ದು ಭಕ್ತರು ದೇವರ ಆಭರಣ ಮತ್ತೆ ದೊರೆತ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ಧಾರೆ.
ಕಳೆದ ಹಲವಾರು ವರ್ಷಗಳಿಂದ ಬುಡಕಟ್ಟು ಸಮುದಾಯ ಪಶುಸಂಗೋಪನೆಯನ್ನೇ ಪ್ರಧಾನವಾಗಿಟ್ಟಯಕೊಂಡು ಜೀವನ ನಡೆಸುತ್ತಿದ್ದು, ಕಾಮ್ಸಿ ಹುಲ್ಲಿನಿಂದ ನಿರ್ಮಿಸಿದ ಗುಡಿಯಲ್ಲಿ ಶ್ರೀಬಂಗಾರದೇವರನಿಟ್ಟು ಪೂಜಿಸುತ್ತಿದ್ದರು. ಆದರೆ, ಕಳೆದ (Challakere) ಕೆಲವು ವರ್ಷಗಳ ಹಿಂದೆ ಎಲ್ಲಾ ಭಕ್ತರು ದೇವರ ಗುಡಿಯನ್ನು ಪುನರ್‌ನಿರ್ಮಾಣ ಮಾಡುವ ನಿರ್ಧಾರದಂತೆ ಕಾಮಗಾರಿ ಆರಂಭಿಸಿದ ಸಂದರ್ಭದಲ್ಲೇ ಕಳೆದು ಹೋದ ದೇವರ ಆಭರಣಗಳು ಮತ್ತೆ ದೊರಕಿರುವುದು ಭಕ್ತರಲ್ಲಿ ಸಂತಸವನ್ನುಂಟು ಮಾಡಿದೆ.

ಇದನ್ನೂ ಓದಿ: Adike rate Hike | ಇಂದಿನ ಚನ್ನಗಿರಿ, ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಕೆ ಬೆಲೆ ಏರಿಕೆ
ಕೂಡಲೇ ಭಕ್ತರು ಎಲ್ಲರೂ ಸೇರಿ ಕಬ್ಬಿಣದ ತೀಜೋರಿಯನ್ನು ತೆರೆದಾಗ ದೇವರ ಬಂಗಾರದ ಆಭರಣ ಕಪ್ಪಾಗಿದ್ದು ಇವುಗಳಿಗೆ ಪಾಲಿಶ್ ಮಾಡಿಸುವ ನಿರ್ಧಾರವನ್ನು ಭಕ್ತರವೃಂದ ಮಾಡಿದೆ. ತೀಜೋರಿಲ್ಲಿ ನಾಗರಹೆಡೆ, ದೇವರದೀಪ, ವಿಗ್ರಹ, ನಾಣ್ಯ, ಕಾಣಿಕೆಯ ಹಣ, ಕೆಲವೊಂದು ದೇವರ ಬಂಗಾರದ (Challakere) ಆಭರಣಗಳು ತೀಜೋರಿಯಲ್ಲಿದೊರಕಿದ್ದು ಭಕ್ತರು ಇವುಗಳಿಗೆ ಪಾಲಿಶ್ ನೀಡಿ ಮತ್ತೆ ದೇವರಿಗೆ ಅರ್ಪಿಸಿ ಪೂಜಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಬಹಳ ವರ್ಷಗಳ ನಂತರ ದೇವರ ಆಭರಣದ ತೀಜೋರಿ ಸಿಕ್ಕಿದ್ದು ಭಕ್ತರಲ್ಲಿ ಆಚ್ಚರಿ ಉಂಟು ಮಾಡಿದೆ.
ಇದನ್ನೂ ಓದಿ: DCC Bank | ಡಿಸಿಸಿ ಬ್ಯಾಂಕ್ ಉದ್ಯೋಗಿ ಲೋಕಾಯುಕ್ತ ಬಲೆಗೆ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252