
Chitradurga news|nammajana.com|12-6-2024
ನಮ್ಮಜನ.ಕಾಂ, ಚಳ್ಳಕೆರೆ: ನಗರದ ಕೇಂದ್ರಭಾಗದಲ್ಲಿರುವ ಶೈಕ್ಷಣಿಕ ಪ್ರಗತಿಗೆ ಆಧಾರವಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ (Challakere BEO Office) ಕಚೇರಿಯಲ್ಲಿ ಸೋಮವಾರ ತಡರಾತ್ರಿ ನಡೆದ ಶಾರ್ಟ್ಸಕ್ಯೂಟ್ಗೆ ಕಚೇರಿಯಲ್ಲಿದ್ದ ಎಲ್ಲಾ ಕಂಪ್ಯೂಟರ್, ಟೇಬಲ್ ಹಾಗೂ ಎಲೆಕ್ಟಾçನಿಕ್ ವಸ್ತುಗಳು ಸುಟ್ಟು ಹೋಗಿ ಸುಮಾರು ೮ ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾಹಿತಿ ನೀಡಿದ್ಧಾರೆ.
ಪೋಲಿಸರಿಗೆ ನೀಡಿದ ದೂರಿನಲ್ಲಿ ಏನೆಲ್ಲ ಹಾನಿಯಾಗಿದೆ ಎಂಬ ಮಾಹಿತಿ ವಿವರ
ಕಚೇರಿಯ ಅಧೀಕ್ಷಕ ಪುರುಷೋತ್ತಮ ಪೊಲೀಸರಿಗೆ ನೀಡಿದ ದೂರಿನಲ್ಲಿ ಸೋಮವಾರ ರಾತ್ರಿ ವಿದ್ಯುತ್ ಶಾರ್ಟ್ಸಕ್ಯೂಟ್ಗೆ (Challakere BEO Office) ಕಚೇರಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಳು ಕಂಪ್ಯೂಟರ್ಗಳು, ಫ್ಯಾನ್ ಹಾಗೂ ಟೇಬಲ್, ಕುರ್ಚಿಗಳು ಸಂಪೂರ್ಣ ಸುಟ್ಟಿವೆ. ಸೋಮವಾರ ಸಂಜೆ ಕೆಲಸ ಮುಗಿದ ನಂತರ ಕಚೇರಿಗೆ ಬೀಗ ಹಾಕಲಾಗಿತ್ತು.

ಇಂದಿನ ದಿನ ಭವಿಷ್ಯ: Dina Bhavishya: ಇಂದಿನ ದಿನ ಭವಿಷ್ಯ 12-6-2024
ರಾತ್ರಿ ಯಾವುದೋ ಸಮಯದಲ್ಲಿ ವಿದ್ಯುತ್ ಶಾರ್ಟ್ಸಕ್ಯೂಟ್ನಿಂದ (Challakere BEO Office) ಈ ಅವಘಡ ಸಂಭವಿಸಿದೆ. ಶಿಕ್ಷಣ ಇಲಾಖೆಯ ಎಲ್ಲಾ ದಾಖಲಾತಿಗಳನ್ನು ಕಂಪ್ಯೂಟರ್ ಸಿಪಿಯುನಲ್ಲಿ ದಾಖಲಿಸಲಾಗಿತ್ತು. ಆದರೆ, ಈಗ ಕೆಲವು ಬೆಂಕಿಯಲ್ಲಿ ಸುಟ್ಟಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಚಳ್ಳಕೆರೆ ಪೊಲೀಸರು ದೂರು ಸ್ವೀಕರಿಸಿ ತನಿಖೆ ಮುಂದುವರೆಸಿದ್ಧಾರೆ.