Chitradurga news|nammajana.com|31-03-2025
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಕ್ಯಾದಿಗುಂಟೆ ಗ್ರಾಮದ ಶಿವಣ್ಣ ಎಂಬುವವರ ಅಡಿಕೆ ತೋಟದಲ್ಲಿ ಸೋಮವಾರ ದಿಢೀರ್ ಬೆಂಕಿ (Challakere) ಕಾಣಿಸಿಕೊಂಡು ಕೆಲವೇ ನಿಮಿಷದಲ್ಲಿ ಬೆಂಕಿ ವ್ಯಾಪಿಸಿ ಸುಮಾರು ಸಾವಿರಕ್ಕೂ ಹೆಚ್ಚು ಅಡಿಕೆ, ತೆಂಗಿನ ಗಿಡಗಳು ಬೆಂಕಿಯಲ್ಲಿ ಸುಟ್ಟು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಅಖಂಡ ಕರ್ನಾಟಕ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎ.ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಪೊಲೀಸ್ ಹಾಗೂ ಅಗ್ನಿಶಾಮಕ ಪಡೆಗೆ ಮಾಹಿತಿ ನೀಡಿದರು.
ಇದನ್ನೂ ಓದಿ: Bullock cart race | ಎತ್ತಿನ ಗಾಡಿ ಓಟ ನೋಡಿ ಶಾಸಕ ಟಿ.ರಘುಮೂರ್ತಿ ದಿಲ್ ಖುಷ್
ಸ್ಥಳ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ಧಾರೆ. ಸುಮಾರು ೧೦ಲಕ್ಷಕ್ಕೂ ಹೆಚ್ಚು ನಷ್ಟ (Challakere) ಸಂಭವಿಸಿದೆ ಎಂದು ಶಿವಣ್ಣ ಮಾಹಿತಿ ನೀಡಿದ್ಧಾರೆ. ಸ್ಥಳಕ್ಕೆ ಗ್ರಾಮ ಲೆಕ್ಕಿಗ ಜಯಂತ್ ಭೇಟಿ ನೀಡಿದ್ದರು.
