
Chitradurga news|nammajana.com|15-7-2024
ನಮ್ಮಜನ.ಕಾಂ, ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ತಳುಕು ಸಮೀಪದಲ್ಲಿ ರಸ್ತೆ ಪಕ್ಕ ಸೇತುವೆಗೆ ಇನ್ನೋವಾ ಕಾರು ಡಿಕ್ಕಿಯಾಗಿ (Challakere car accident) ಇಬ್ಬರು ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಗಿನ ಜಾವ ಜರುಗಿದೆ.
ಗಂಡ ಹೆಂಡತಿ ಸಾವು
ಬಳ್ಳಾರಿ ಮೂಲದ ಗೋಪಿನಾಥ್(55), ಲಲಿತಮ್ಮ(45) ಸಾವನ್ನಪ್ಪಿದ ದುರ್ದೈವಿಗಳು ಬೆಂಗಳೂರಿನಿಂದ ಬಳ್ಳಾರಿ ಕಡೆಗೆ (Challakere car accident) ತೆರಳುವ ಸಂದರ್ಭದಲ್ಲಿ ತಳಕು ಸಮೀಪ KEB ಮುಂಭಾಗದ ರಾಷ್ಟ್ರೀಯ ಹೆದ್ದಾರಿಯ ಸೇತುವೆ ತಡೆಗೋಡೆಗೆ ಇನೋವಾ ಕಾರು ಡಿಕ್ಕಿಯಾದ ಹಿನ್ನಲೆ ದಂಪತಿಗಳು ಇಬ್ಬರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Speed gambling: ಇಸ್ಪೀಟ್ ಅಡ್ಡೆ ಮೇಲೆ ದಾಳಿ ಐವರು ವಶ
ಈ ಘಟನಾ ಸ್ಥಳಕ್ಕೆ ಡಿವೈಎಸ್ ಪಿ.ರಾಜಣ್ಣ ಭೇಟಿ ನೀಡಿ ಪರಿಶೀಲನೆ (Challakere car accident) ನಡೆಸಿದ್ದು ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
