Chitradurga News | Nammajana.com | 27-08-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಚಿತ್ರದುರ್ಗ(Challakere) ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ಮಂಗಳವಾರ ರಾತ್ರಿ ನಡೆದ ಘಟನೆಯೊಂದು ಸಂಪೂರ್ಣ ಸಿನಿಮಾ ಶೈಲಿಯಲ್ಲಿ ಕಂಡು ಬಂದಿತು. ಬಾಡಿಗೆ ಕಾರು ಚಾಲಕನು ಕಾರಿನಲ್ಲಿದ್ದ 97 ಲಕ್ಷ ರೂಪಾಯಿ ನಗದಿನ ಜೊತೆ ಪರಾರಿಯಾಗಲು ಯತ್ನಿಸಿದ ಪ್ರಕರಣದಲ್ಲಿ ಚಳ್ಳಕೆರೆ ಪೊಲೀಸರು ಎಚ್ಚರಿಕೆ ನಡೆ ಕಾರ್ಯನಿಷ್ಠೆಯಿಂದ ಆರೋಪಿ ಚಾಲಕನನ್ನು ಬಂಧಿಸುವಲ್ಲಿ ಸಕ್ಸಸ್ ಆಗಿದ್ದಾರೆ.

ಇದನ್ನೂ ಓದಿ: ಭಾಗ್ಯಲಕ್ಷ್ಮೀ ಬಾಂಡ್ ಪರಿಪಕ್ವ ಮೊತ್ತ ಪಾವತಿ: ನೊಂದಣಿಗೆ ಸೂಚನೆ
ನಿವೃತ್ತ ಎಸ್ಪಿ ಗುರುಪ್ರಸಾದ್ ವಂಚನೆಗೆ ಯತ್ನ ಬೆಂಗಳೂರು ಮೂಲದ ನಿವೃತ್ತ ಸಿಬಿಐ ಎಸ್ಪಿ ಗುರುಪ್ರಸಾದ್ ತಮ್ಮ ಪತ್ನಿ ಲಲಿತಾ ಜೊತೆ ಬಳ್ಳಾರಿಗೆ ತೆರಳಿದ್ದರು. ಅಲ್ಲಿ ಕುಟುಂಬದ ಜಮೀನು ಮಾರಾಟ ಮಾಡಿಕೊಂಡು ಸುಮಾರು ₹97 ಲಕ್ಷ ರೂಪಾಯಿ ನಗದು ಪಡೆದು, ಬೆಂಗಳೂರಿಗೆ ಹಿಂತಿರುಗುವ ಸಲುವಾಗಿ ಬಾಡಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಆಂಧ್ರದ ಹಿಂದೂಪುರ ಮೂಲದ ರಮೇಶ್ ಎಂಬುವರಿಗೆ ಸೇರಿದ್ದಾಗಿದೆ.
ಊಟಕ್ಕೆ ಕುಳಿತ ಕ್ಷಣ ಮಾತ್ರದಲ್ಲಿ ಚಾಲಕನ ಪರಾರಿ
ಚಳ್ಳಕೆರೆ ನಗರದ ಬಳಿ ದಂಪತಿ ಹೋಟೆಲ್‌ನಲ್ಲಿ ಊಟ ಮಾಡಲು ಕಾರು ನಿಲ್ಲಿಸಿದರು. ಆದರೆ ಊಟ ಮುಗಿಸಿ ಹೊರಬಂದಾಗ, ಚಾಲಕ ರಮೇಶ್ ಕಾರಿನಲ್ಲಿದ್ದ ಹಣ ಸಮೇತ ಸ್ಥಳದಿಂದ ಎಸ್ಕೇಪ್ ಆಗಿದ್ದ. ತಕ್ಷಣವೇ ಗುರುಪ್ರಸಾದ್ ಅವರು ಪೊಲೀಸರಿಗೆ ದೂರು ನೀಡಿದರು.
ಸಿನಿಮಾ ರೀತಿ ಪ್ರಕರಣಕ್ಕೆ ಅಂತ್ಯ
ಮಾಹಿತಿ ತಿಳಿದ ಕೂಡಲೇ ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಮತ್ತು ಸಿಪಿಐ ಕುಮಾರ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. ಕಾರನ್ನು ಹಿಂಬಾಲಿಸಿದ ಪೊಲೀಸರು ರಮೇಶ್ ಆಂಧ್ರದತ್ತ ಕಾರನ್ನು ಚಲಾಯಿಸುತ್ತಿರುವುದು ಪತ್ತೆಹಚ್ಚಿದರು. ಆದರೆ, ಪೊಲೀಸರ ಬೆನ್ನಟ್ಟುವಿಕೆ ಅರಿತ ಆರೋಪಿಯು ವೇಗವಾಗಿ ಕಾರು ಚಲಾಯಿಸಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದನು.
ಇದನ್ನೂ ಓದಿ: ಗಣೇಶ ಹಬ್ಬದ ಪ್ರಯುಕ್ತ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ
ಆರೋಪಿಯ ಬಂಧನ ಮತ್ತು ಹಣ ವಶ
ಈ ಘಟನೆಯ ನಂತರ,(Challakere) ಪೊಲೀಸರು ಆರೋಪಿ ರಮೇಶ್‌ನ್ನು ಬಂಧಿಸಿ, ಕಾರಿನಲ್ಲಿ ಇದ್ದ ₹97 ಲಕ್ಷ ರೂಪಾಯಿ ನಗದು ಮತ್ತು ವಾಹನವನ್ನು ವಶಕ್ಕೆ ಪಡೆದರು. ಆರೋಪಿಯ ವಿರುದ್ಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
