Chitradurga news|nammajana.com|05-04-2025
ನಮ್ಮಜನ.ಕಾಂ, ಚಳ್ಳಕೆರೆ: ಗ್ರಾಮೀಣ ಭಾಗಗಳ ಖಾಸಗಿ ಅಂಗಡಿಗಳಲ್ಲಿ ಅಕ್ರಮಮದ್ಯ ಮಾರಾಟವನ್ನು ತಡೆಯುವ ಹಿನ್ನೆಲೆಯಲ್ಲಿ ಗೋಪನಹಳ್ಳಿ, ಕಾಟಪ್ಪನಹಟ್ಟಿ ದೊಡ್ಡ ಉಳ್ಳಾರ್ತಿ ಮತ್ತು ಜಾಜೂರು ಗ್ರಾಮಗಳಿಗೆ ಜಿಲ್ಲಾ ವಿಚಕ್ಷಣದಳ, (Challakere crime) ಹಿರಿಯೂರು ಉಪವಿಭಾಗ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ವಲಯ ಅಧಿಕಾರಿಗಳು ದಿಡೀರ್‌ದಾಳಿ ನಡೆಸಿ ಅಕ್ರಮ ಮದ್ಯಮಾರಾಟಗಾರರ ವಿರುದ್ದ ಪ್ರಕರಣ ದಾಖಲಿಸಿದ್ಧಾರೆ.
ಅಬಕಾರಿ ನಿರೀಕ್ಷಕ ಸಿ.ನಾಗರಾಜು, ಹಿರಿಯೂರು ಅಬಕಾರಿ ಅಧಿಕಾರಿ ಕಿರಣ್ ಅಪ್ಪಸಾಬ್ ನೇತೃತ್ವದಲ್ಲಿ ಅಬಕಾರಿ ಉಪನಿರೀಕ್ಷಕರಾದ ಟಿ.ರಂಗಸ್ವಾಮಿ, ಡಿ.ಟಿ.ತಿಪ್ಪಯ್ಯ, ದಾದಾಪೀರ್, ಅಬಕಾರಿ ಪೇದೆಗಳಾದ ಮಂಜುಳಮ್ಮ, ಬಿ.ನಾಗರಾಜ, ರಮೇಶ್‌ನಾಯ್ಕ, ಬಸವರಾಜು, (Challakere crime) ಸಿ.ದರ್ಶನ್‌ಕುಮಾರ್ ಮುಂತಾದವರು ದಿಡೀರ್ ದಾಳಿನಡೆಸಿ ಅಕ್ರಮ ಮದ್ಯಮಾರಾಟವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ಧಾರೆ.

ಇದನ್ನೂ ಓದಿ: Dina Bhavishya | ದಿನ ಭವಿಷ್ಯ, ಯಾವ್ಯಾವ ರಾಶಿಗೆ ಹೇಗಿದೆ ದಿನ?
ಇದೇ ಸಂದರ್ಭದಲ್ಲಿ ವಾಹನಗಳ ಮೂಲಕ ಅಕ್ರಮ ಮದ್ಯಸಾಗಾಟ ಮಾಡುತ್ತಿದ್ದು, ಎರಡು ಘೋರ, ೫ ಅಕ್ರಮ ಮದ್ಯಮಾರಾಟ ಪ್ರಕರಣ ದಾಖಲಿಸಿ ೧೦ ಲೀಟರ್ ಮದ್ಯ, ಇಬ್ಬರು ಆರೋಪಿಗಳು ಹಾಗೂ ಒಂದು ವಾಹನ (Challakere crime) ವಶಪಡಿಸಿಕೊಂಡಿದ್ಧಾರೆ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252