
Chitradurga news|nammajana.com|23-6-2024
ನಮ್ಮಜನ.ಕಾಂ, ಚಳ್ಳಕೆರೆ: ಆರು ತಿಂಗಳ ತುಂಬು ಗರ್ಭಿಣಿಯೊಬ್ಬಳು ದಿಢೀರನೇ ಅನಾರೋಗ್ಯಕ್ಕೆ ತುತ್ತಾಗಿ (Challakere Crime news) ಸಾನವಪ್ಪಿದ ಘಟನೆ ಗೋಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಿ.ಆರ್.ಹರ್ಷಿತ(೩೦) ಮೃತಪಟ್ಟ ದುದೈರ್ವಿಯಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದಳು. ಈಕೆಯನ್ನು ಪರೀಕ್ಷಿಸಿದ ವೈದ್ಯರು ಹೊಟ್ಟೆಯಲ್ಲಿ ಅವಳಿ ಮಕ್ಕಳಿರುವುದನ್ನು ದೃಢಪಡಿಸಿದ್ದರು.

ಇದನ್ನೂ ಓದಿ: Engineering College Challakere: ಪ್ರಯೋಗಾಲಯಕ್ಕೆ ₹10 ಲಕ್ಷ: ಶಾಸಕ ಟಿ.ರಘಮೂರ್ತಿ
ವೈದ್ಯರ ಸಲಹೆಯಂತೆ ಆಕೆ ಪ್ರತಿನಿತ್ಯ ಹೆಚ್ಚು ಓಡಾಡದೆ ಎಚ್ಚರಿಕೆ ಇದ್ದ ಇದ್ದರು ಎನ್ನಲಾಗಿದೆ. ಆದರೆ, ದಿಢೀರನೇ ಆರೋಗ್ಯದಲ್ಲಿ (Challakere Crime news) ಏರುಪೇರಾದಾಗ ಗಾಂಬರಿಗೊಂಡ ಮನೆಯವರು ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆರೋಗ್ಯ ಕೈಕೊಟ್ಟ ಹಿನ್ನೆಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿರುತ್ತಾಳೆ. ವಿಶೇಷವೆಂದರೆ ಈಕೆಯ ಆರೋಗ್ಯ ತಪಾಸಣೆ ನಡೆಸಿ ವೈದ್ಯರು ಅವಳಿ ಮಕ್ಕಳಿರುವುದಾಗಿಯೂ ತಿಳಿಸಿದ್ದರು ಎನ್ನಲಾಗಿದೆ.
