Chitradurga news |nammajana.com |26-5-2024
ನಮ್ಮಜನ.ಕಾಂ, ಚಳ್ಳಕೆರೆ: ಇತ್ತೀಚಿನ ದಿನಗಳಲ್ಲಿ ಚಳ್ಳಕೆರೆ ನಗರ ವ್ಯಾಪ್ತಿಯ ಬ್ಯಾಂಕ್ ಖಾತೆಗಳಲ್ಲಿ ಇರುವ ಹಣವನ್ನು ಚಾಣಾಕ್ಷತನದಿಂದ ದೋಚುವ (challakere doctor) ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಬ್ಯಾಂಕ್‌ನಲ್ಲಿದ್ದ ಹಣ ಕಳೆದುಕೊಂಡ ಹಲವಾರು ಜನರು ಗಾಬರಿಗೆ ಒಳಗಾಗಿದ್ದಾರೆ.
ಕಳೆದ ತಿಂಗಳಷ್ಟೇ ಇಲ್ಲಿನ ಖ್ಯಾತ ವಕೀಲರೊಬ್ಬರ ಖಾತೆಗೆ ಕನ್ನಹಾಕಿದ ಕಳ್ಳರು 1.35 ಲಕ್ಷ ಹಣವನ್ನು ಲಪಟಾಯಿಸಿದ್ದರು. ಇದರ ಬೆನ್ನ ಹಿಂದೆಯೇ ಮತ್ತೊಮ್ಮೆ ತ್ಯಾಗರಾಜ ನಗರದ ನಿವಾಸಿ, ಮಕ್ಕಳ ತಜ್ಞ ಡಾ.ಟಿ.ಎಂ.ನಟರಾಜ್ (challakere doctor) ಎಂಬುವವರ ಕೆನರಾ ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಸಿಮ್ ಕಾರ್ಡ್ ಬ್ಲಾಕಾಗಿದ್ದು ಅದನ್ನು ಅಪ್ಡೇಟ್ ಮಾಡಬೇಕೆಂದು ಏ.20 ಸಂಜೆ ಇವರಿಗೆ ತಿಳಿಸಿದ ಕಳ್ಳರು ಏ.21 ರಂದು ತಮ್ಮ ಬ್ಯಾಂಕ್ ಖಾತೆಯಿಂದ ಸುಮಾರು 2.40 ಲಕ್ಷ, ಏ.22ರಂದು 5 ಲಕ್ಷ ಒಟ್ಟು 7.40 ಲಕ್ಷ ಹಣವನ್ನು ದೋಚಿದ್ಧಾರೆ.

ಇದನ್ನೂ ಓದಿ: Today Dina Bhavishya: ಇಂದಿನ ದಿನ ಭವಿಷ್ಯ 26-5-2024
ತಮ್ಮ ಬ್ಯಾಂಕ್ ಖಾತೆಯಿಂದ ಚಾಣಾಕ್ಷತದಿಂದ ಹಣ ದೋಚಿದ ಕಳ್ಳರನ್ನು ಪತ್ತೆಹಚ್ಚಿಕೊಡುವಂತೆ ಡಾ.ನಟರಾಜ್ (challakere doctor) ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ತನಿಖೆ ಮುಂದುವರೆಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252