Chitradurga news|nammajana.com|28-7-2024
ನಮ್ಮಜನ.ಕಾಂ, ಚಳ್ಳಕೆರೆ: ಇಲ್ಲಿನ ಗಾಂಧಿನಗರದ ಎಲೆಕ್ಟೀಷನ್ ಪೃಥ್ವಿರಾಜ್(೨೫) ಇತ್ತೀಚೆಗೆ ಚಳ್ಳಕೆರೆಯಿಂದ ದೆಹಲಿಗೆ (Challakere DRDO) ತೆರಳಿದ್ದು, ಬರಲು ವಿಳಂಬವಾದ ಹಿನ್ನೆಲೆಯಲ್ಲಿ ಗಾಬರಿಗೊಂಡ ತಾಯಿ ಇಲ್ಲಿನ ಪೊಲೀಸ್ ಠಾಣೆಗೆ ಮಗನ ನಾಪತ್ತೆ ಬಗ್ಗೆ ದೂರು ನೀಡಲು ಹೋದಾಗ ಪೊಲೀಸರು ನಿರಾಕರಿಸಿದ್ದರು.
ಯುವಕ ಕೋಪಗೊಳ್ಳಲು ಕಾರಣ
ಆದರೆ, ಪೃಥ್ವಿರಾಜ್ ಚಳ್ಳಕೆರೆಗೆ ಆಗಮಿಸಿ ತನ್ನ ತಾಯಿಯನ್ನು ಭೇಟಿ ಮಾಡಿದಾಗ ನೀನು ಕಾಣದೆ ಇದ್ಧಾಗ ಗಾಬರಿಗೊಂಡ (Challakere DRDO) ನಾನು ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಲು ಹೋಗಿದ್ದೆ. ಆದರೆ, ಪೊಲೀಸರು ದೂರು ಪಡೆಯಲು ನಿರಾಕರಿಸಿದ್ದರು ಎಂದು ತಿಳಿಸಿದ್ದು, ಪೃಥ್ವಿರಾಜ್ಗೆ ಕೋಪಗೊಳ್ಳಲು ಕಾರಣವಾಗಿತ್ತು.
ಕೂಡಲೇ ಪೊಲೀಸ್ ಠಾಣೆಗೆ ತೆರಳಿದ ಆತ ದೂರನ್ನು ಯಾಕೆ ಸ್ವೀಕರಿಸಿಲ್ಲವೆಂದು ಪೊಲೀಸರೊಂದಿಗೆ ವಾಗ್ವಾದ ಮಾಡಿದಲ್ಲದೆ, ತಾನು ಪ್ರಶ್ನೆ ಮಾಡುವ ಘಟನೆಯನ್ನು ಮೊಬೈಲ್ನಲ್ಲಿ (Challakere DRDO) ಚಿತ್ರೀಕರಿಸಿದನು. ಪೊಲೀಸರು ಪ್ರತಿರೋಧದ ನಡುವೆಯೂ ಮೊಬೈಲ್ ಚಿತ್ರೀಕರಣ ಮುಂದುವರೆದಾಗ ಪೊಲೀಸರು ಮೊಬೈಲ್ ಕಸಿದುಕೊಂಡು ಬುದ್ದಿವಾದ ಹೇಳಿದರು..
ಮೆಟ್ರೋ, DRDO ,IIS ಬ್ಲಾಸ್ಟ್ ಬೆದರಿಕೆ ವಿಡಿಯೋ
ಇದು ಪೃಥ್ವಿರಾಜ್ನನ್ನು ಮತ್ತಷ್ಟು ಕೆರಳಿಸಿತು. ನಮ್ಮ ತಾಯಿಯ ಎದುರಲ್ಲೇ ನನ್ನ ಮೇಲೆ ಹಲ್ಲೆ ನಡೆಸಿದ್ದೀರೆಂದು ಆರೋಪಿಸಿಲ್ಲದೆ ನಾನು ಮನಸು ಮಾಡಿದರೆ ಮೆಟ್ರೋ, ಡಿಆರ್ಡಿಒ, ಐಐಎಸ್, ಇವುಗಳನ್ನು ಬ್ಲಾಸ್ಟ್ ಮಾಡುವುದಾಗಿ ಸಾಮಾಜಿಕ (Challakere DRDO) ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟ. ನನಗೆ ನ್ಯಾಯದೊರಕದೇ ಇದ್ದರೆ ಭಯೋತ್ಪಾದಕನಾಗಲು ಹಿಂಜರಿಯುವುದಿಲ್ಲ.
ಒಂದು ಪಕ್ಷ ನನ್ನನ್ನು ಬಂಧಿಸಿದರೆ ಡಿ.ಬಾಸ್ ಪಕ್ಕದ ಸೆಲ್ಗೆ ನನ್ನನ್ನು ಹಾಕಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದ.
ಈ ವಿಡಿಯೋ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗ ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಕೂಡಲೇ ಡಿವೈಎಸ್ಪಿ ಟಿ.ಬಿ.ರಾಜಣ್ಣನವರಿಗೆ ಸೂಚನೆ ನೀಡಿ ಪೃಥ್ವಿರಾಜ್ ಮೇಲೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.(Challakere DRDO)
ಗಾಂಧಿನಗರದಲ್ಲಿದ್ದ ಪೃಥ್ವಿರಾಜ್ನನ್ನು ಅವರ ತಾಯಿ ಸಹಿತ ಡಿವೈಎಸ್ಪಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಾಯಿತು. ಡಿವೈಎಸ್ಪಿ ಸಂಪೂರ್ಣ ಘಟನೆಯ ಬಗ್ಗೆ ಪೃಥ್ವಿರಾಜ್ಗೆ (Challakere DRDO) ಮನದಟ್ಟು ಮಾಡಿಕೊಟ್ಟಾಗ ತನ್ನ ತಪ್ಪಿನ ಅರಿವಾಗಿ ಆತುರ ಮತ್ತು ಪೊಲೀಸರ ಮೇಲಿನ ಅಸಹನೆಯಿಂದ ಹೀಗೆ ಮಾಡಿದ್ದೇನೆ.ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸರಿಯಾಗಿ ಇರುತ್ತೇನೆಂದು ಭರವಸೆ ನೀಡಿದ್ಧಾನೆ.
ಇದನ್ನೂ ಓದಿ: Bhadra water: ಚಿತ್ರದುರ್ಗ ಕ್ಷೇತ್ರದ ಹೆಚ್ಚುವರಿ ಎಂಟು ಕೆರೆಗಳಿಗೆ ಭದ್ರಾ ನೀರು: DCM ಡಿ.ಕೆ.ಶಿವಕುಮಾರ್ ಭರವಸೆ
ಪ್ರಕರಣ ದಾಖಲಿಸಲು ಸಿದ್ದತೆ
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಡಿವೈಎಸ್ಪಿ ಟಿ.ಬಿ.ರಾಜಣ್ಣ, ಪೃಥ್ವಿರಾಜ್ನನ್ನು ಕರೆಸಿ ವಿಚಾರಣೆ ನಡೆಸಲಾಗಿದೆ. ಅವನ (Challakere DRDO) ಬೆದರಿಕೆಯ ಹಿನ್ನೆಲೆಯನ್ನು ಪರಿಶೀಲನೆ ಮಾಡಲಾಗಿದೆ. ಕೂಡಲೇ ಪೊಲೀಸ್ ಇಲಾಖೆ ಅಧಿಕಾರಿಗಳು ಮನೆಗೆ ಭೇಟಿ ನೀಡಿ ತಲಾಶ್ ನಡೆಸಿದ್ಧಾರೆ. ಕಾನೂನು ರೀತಿಯ ಆತನ ಮೇಲೆ ೧೦೭ರ ಸೆಕ್ಷನ್ ಅಡಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.