Chitradurga news|nammajana.com|15-8-2024
ನಮ್ಮಜನ.ಕಾ, ಚಿತ್ರದುರ್ಗ: ತನ್ನ ತಾಯಿ ನೀಡಿದ ದೂರನ್ನು ಸ್ವೀಕರಿಸದೆ ಉಡಾಫೆ ತೋರಿದರು ಎಂದು ಆರೋಪಿಸಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಠಾಣೆ ಪೊಲೀಸರ ವಿರುದ್ಧ (Challakere) ಬೆಂಗಳೂರು ವಿಧಾನಸೌಧದ ಮುಂದೆ ಪ್ರತಿಭಟನಾರ್ಥವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿ ಇಟ್ಟು ಯುವಕನೊಬ್ಬ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆಯಿತು.
ಚಳ್ಳಕೆರೆ ನಿವಾಸಿ ಪೃಥ್ವಿರಾಜ್ ಪ್ರತಿಭಟನೆ ನಡೆಸಿದ್ದು, ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಆತನನ್ನು ವಿಧಾನಸೌಧ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದ ಕೆಲ ಹೊತ್ತು ವಿಧಾನಸೌಧ ವ್ಯಾಪ್ತಿ ಆತಂಕ ಮನೆ ಮಾಡತ್ತು.

ಘಟನೆ ಕಾರಣ: (Challakere)
ಡಿಪ್ಲೊಮಾ ಪದವೀಧರ ಪೃಥ್ವಿರಾಜ್, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಚಿಕ್ಕಮಗಳೂರು ಜಿಲ್ಲೆ (Challakere) ಶೃಂಗೇರಿ ಸಮೀಪ ಬೆಟ್ಟಕ್ಕೆ ಬೆಂಗಳೂರಿನಿಂದ ಜೂ.1ರಂದು ಆತ ಚಾರಣಕ್ಕೆ ತೆರಳಿದ್ದ. ಆ ವೇಳೆ ಆತನ ಮೊಬೈಲ್ ಸ್ವಿಚ್ ಆಫ್ ಆಗಿ ತನ್ನ ಕುಟುಂಬದ ಜತೆ ಸಂಪರ್ಕ ಕಡಿತವಾಗಿತ್ತು. ಇದರಿಂದ ಆತಂಕಗೊಂಡ ಆತನತಾಯಿ, ಮರುದಿನಚಳ್ಳಕೆರೆಠಾಣೆಗೆ ದೂರು ಕೊಡಲು ತೆರಳಿದ್ದರು.
ಆ ವೇಳೆ ದೂರು ಪೊಲೀಸರು ಸ್ಪಂದಿಸಿದರು. ಅಷ್ಟರಲ್ಲಿ ಜೂ.10ರಂದು ತನ್ನ ತಾಯಿಯನ್ನು ಪೃಥ್ವಿ ಸಂಪರ್ಕಿಸಿದ್ದಾನೆ.
ಜೂ.21ರಂದು ಯಶವಂತಪುರ ಠಾಣೆಗೆ ತಾಯಿ ಜತೆ ತೆರಳಿ ಪೃಥ್ವಿ ಹೇಳಿಕೆ ನೀಡಿ ದೂರನ್ನು ಇತ್ಯರ್ಥಗೊಳಿಸಿದ್ದಾನೆ. ಇದಾದ ಬಳಿಕ ಜೂ.23ರಂದು ಚಳ್ಳಕೆರೆ ಠಾಣೆಗೆ ಹೋಗಿ ತನ್ನ ತಾಯಿ ದೂರು ಯಾಕೆ ಸ್ವೀಕರಿಸಿಲ್ಲ ಎಂದು ಪೃಥ್ವಿ ಪ್ರಶ್ನಿಸಿದ್ದಾನೆ. ಆ ವೇಳೆ ಆತನ ಜತೆ ಪೊಲೀಸರು ದರ್ಪ ತೋರಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಚಳ್ಳಕೆರೆ ಡಿವೈಎಸ್ಪಿ ಹಾಗೂ ಚಿತ್ರದುರ್ಗ ಜಿಲ್ಲೆ ಎಸ್ಪಿ ಅವರನ್ನು ಕೂಡ ಭೇಟಿಯಾಗಿ ಚಳ್ಳಕೆರೆ ಪೊಲೀಸರ ವಿರುದ್ದ ಆತ ದೂರು ಸಲ್ಲಿಸಿದ್ದಾನೆ. ಆದರೆ ತನ್ನ ದೂರಿಗೆ ಚಿತ್ರದುರ್ಗ ಹಾಗೂ ಚಳ್ಳಕೆರೆ ಪೊಲೀಸರು ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಪೃಥ್ವಿ (Challakere) ಆರೋಪಿಸಿದ್ದಾನೆ.
ಇದನ್ನೂ ಓದಿ: ಚಳ್ಳಕೆರೆ ನಗರಸಭೆ ಚುನಾವಣೆಗೆ ದಿನಾಂಕ ನಿಗದಿ | Nagarasabhe election
ಈ ಹಿನ್ನೆಲೆಯಲ್ಲಿ ಆಡಳಿತ ವರ್ಗದ ಗಮನ ಸೆಳೆಯುವ ಸಲುವಾಗಿ ವಿಧಾನಸೌಧ ಮುಂದೆ ತನ್ನ ಎಲೆಕ್ಟ್ರಿಕ್ ಬೈಕ್‌ಗೆ ಬೆಂಕಿ ಹಚ್ಚಿ ಆತ ಪ್ರತಿಭಟನೆ ವ್ಯಕ್ತಪಡಿಸಿದ್ದಾನೆ. ಈ ವೇಳೆ ಆತನ್ನು ಪೊಲೀಸರು ವಶಕ್ಕೆ ಪಡೆಯಲು ತೆರಳಿದ್ದಾಗ ಚಳ್ಳಕೆರೆ (Challakere) ಪೊಲೀಸರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಪೊಲೀಸರು ತಮ್ಮ ವಶಕ್ಕೆ ಪಡೆದು ವಿಧಾನಸೌಧ ಠಾಣೆಗೆ ಕರೆದೊಯ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252