Chitradurga news|Nammajana.com|7-8-2025
ನಮ್ಮಜನ.ಕಾಂ, ಚಳ್ಳಕೆರೆ: ನಗರದ ಚಿತ್ರಯ್ಯನಹಟ್ಟಿ (Challakere) ಹೊರವಲಯದ ರಸ್ತೆಯಲ್ಲಿ ಆಹಾರವನ್ನು ಅರಿಸಿಬಂದ ಹೆಣ್ಣು ನವಿಲು ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿದ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಜಮೀನಿನಲ್ಲಿ ಮರಣೋತ್ತರ ಪರೀಕ್ಷೆ
ಸುತ್ತಮುತ್ತಲ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಅವರ ಸಹಕಾರದೊಂದಿಗೆ ನವಿಲನ್ನು ಜಮೀನಿನಲ್ಲೇ (Challakere) ಮರಣೋತ್ತರ ಪರೀಕ್ಷೆ ನಂತರ ಅಂತ್ಯಕ್ರಿಯೆ ನಡೆಸಿದ್ಧಾರೆ. ವಿದ್ಯುತ್ ತಂತಿತಗುಲಿ ನವಿಲು ಮೃತಪಟ್ಟ ಮಾಹಿತಿ ಪಡೆದ ಇಲ್ಲಿನ ಹಲವಾರು ಜನರು ನೋವನ್ನು ವ್ಯಕ್ತಪಡಿಸಿದ್ಧಾರೆ.
ಅರಣ್ಯ ಇಲಾಖೆ ಸಿಬ್ಬಂದಿಯಾದ ರಾಜೇಶ್, ದರ್ಶನ್ ಸ್ಥಳಕ್ಕೆ (Challakere) ಭೇಟಿ ನೀಡಿದ್ದರು.
