
Chitradurga news|nammajana.com|17-05-2025

ನಮ್ಮಜನ.ಕಾಂ, ಚಳ್ಳಕೆರೆ: ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನೇಯಾದ ಮೈಲಿಗಲ್ಲನ್ನು ಗುರುತಿಸಿಕೊಂಡಿದ್ದ ಚಳ್ಳಕೆರೆ ತಾಲ್ಲೂಕು ಶೈಕ್ಷಣಿಕ ಪರ್ವದಲ್ಲೂ ಸಹ ಉತ್ತಮ ಹೆಸರು ಪಡೆದಿದೆ. ಈ ಭಾಗದ ಬಡ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಪಡೆಯಲು ದೂರದ ಊರಿಗೆ ಲಕ್ಷಾಂತರ ಖರ್ಚು (Challakere) ಮಾಡಿ ಹೋಗಬೇಕಿತ್ತು. ಸ್ಥಳೀಯವಾಗಿ ಪದವಿ ಪಡೆಯುವಂತಾಗಿದೆ ಎಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಹೇಳಿದರು.
ಅವರು, ಶನಿವಾರ ಬಳ್ಳಾರಿ ರಸ್ತೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲ್ಲೂಕು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಕಾಲೇಜಿಗೆ ಸೇರ್ಪಡೆಯಾಗಿ ತಮ್ಮ ಪದವಿ ಮುಗಿಸಿದ್ದಾರೆ. ಇಂದು ಹೊರಹೊಮ್ಮುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಗುಣಾತ್ಮಕ ಬದುಕು ರೂಪಿಸಿಕೊಳ್ಳಲಿ ಎಂದು ಶುಭಹಾರೈಸುವುದಾಗಿ ತಿಳಿಸಿದರು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಬದುಕು ಕಟ್ಟಿಕೊಳ್ಳಲು ನೆರವಾದ ಕಾಲೇಜು ಪ್ರಾಂಶುಪಾಲ ಹಾಗೂ ಸಿಬ್ಬಂದಿ ವರ್ಗಕ್ಕೆ ಅಭಿನಂದನೆ (Challakere) ಸಲ್ಲಿಸಿದರು.
ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ.ಮಹಾಗುಂಡಪ್ಪ ಎಂ.ಬೆನಾಳ ಮಾತನಾಡಿ, ಇಂಜಿನಿಯರಿಂಗ್ ಕಾಲೇಜು ಆರಂಭವಾಗಿ ಐದು ವರ್ಷ ಸಂದಿವೆ, ಮೊದಲನೇ ಹಂತದಲ್ಲಿ ತಮ್ಮ ಶಿಕ್ಷಣ ಮುಗಿಸಿ 60 ವಿದ್ಯಾರ್ಥಿಗಳು ಇಂದು ಪರಿಪೂರ್ಣತೆಯಿಂದ ಹೊರಹೊಮ್ಮುತ್ತಿದ್ದಾರೆ.
ಎಲ್ಲರೂ ತಮ್ಮ ಬದುಕು ರೂಪಿಸಿಕೊಳ್ಳುವ ಆಸೆಹೊಂದಿದ್ಧಾರೆ. ಕ್ಷೇತ್ರದ ಶಾಸಕರು ಹೆಚ್ಚು ಗಮನಹರಿಸಿ ಈ ಭಾಗದಲ್ಲಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸುವ ಮೂಲಕ (Challakere) ಮಧ್ಯಕರ್ನಾಟಕದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ನೆರವಾಗಿದ್ಧಾರೆಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ, ಉಪಾಧ್ಯಕ್ಷೆ ಕವಿತಾ, ಸ್ಥಾಯಿಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್, ಸದಸ್ಯರಾದ ಬಿ.ಟಿ.ರಮೇಶ್‌ಗೌಡ, ಎಂ.ಜೆ.ರಾಘವೇAದ್ರ, ಸುಮಭರಮಯ್ಯ, ಎಚ್‌ಒಡಿ ಡಾ.ಎಂ.ಲಕ್ಷಿö್ಮದೇವಿ, ಮಲ್ಲಿಕಾರ್ಜುನ್, ಎಸ್.ನಾಗಾರ್ಜುನ, ಪೂಜಾ, ಸಹನಾ, ಭವ್ಯ, ಸೌಮ್ಯ, ಮಂಜುನಾಥ, ತಿಪ್ಪೇಸ್ವಾಮಿ, ಶಿವಮೂರ್ತಿ ಮುಂತಾದವರು ಉಪಸ್ಥಿತರಿದ್ದ
ಇದನ್ನೂ ಓದಿ: Grihalakshmi | ಬದುಕಿಗೆ ಆಧಾರವಾದ ಗೃಹಲಕ್ಷ್ಮಿ | ಕೋಟೆ ನಾಡಿನಲ್ಲಿ 1246 ಕೋಟಿ ಹಣ ಪಾವತಿ
ವಿದ್ಯಾರ್ಥಿ ಮಾತು
ಐದು ವರ್ಷಗಳ ಕಾಲ ನಮಗೆ ಇಂಜಿನಿಯರಿಂಗ್ ಪದವಿ ಪಡೆಯಲು ಉತ್ತಮ ಶಿಕ್ಷಣ ಪಡೆಯಲು ಅವಕಾಶ ದೊರಕಿದ್ದು ಸಂತಸ ತಂದಿದೆ. ಇಂಜಿನಿಯರಿಂಗ್ ಕಾಲೇಜು ಪಡೆಯುವಷ್ಟ ಶಕ್ತಿ ನಮ್ಮಲ್ಲಿ ಇರಲಿಲ್ಲ. ಇದ್ದ ಊರಲ್ಲೇ ಪದವಿ ಪಡೆಯಲು ಸಂತಸವಾಗಿದೆ.
ಎಂ.ರಕ್ಷಾ ಪದವಿಪೂರೈಸಿದ ವಿದ್ಯಾರ್ಥಿನಿ.
