Chitradurga News | Nammajana.com |20-09-2025
ನಮ್ಮಜನ ನ್ಯೂಸ್ ಕಾಂ,ಚಳ್ಳಕೆರೆ: ತಾಲೂಕಿನಾದ್ಯಂತ ರೈತರು (Challakere) ಬೆಳೆದ ಈರುಳ್ಳಿ, ಟೊಮೆಟೊ ಬೆಳೆಗಳಿಗೆ ಮಾರುಕಟ್ಟೆಯಲ್ಲಿಸೂಕ್ತ ಬೆಲೆಸಿಗದಕಾರಣಟೊಮೆಟೊ, ಈರುಳ್ಳಿ ಬೆಳೆಗಾರರು ಲಕ್ಷಾಂತರ ರೂ.ನಷ್ಟ ಅನುಭವಿಸಿದ್ದಾರೆ.

ಇದನ್ನೂ ಓದಿ: Valmiki Jayanti: ನೂತನ ವಾಲ್ಮೀಕಿ ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ | ಪೂರ್ವಭಾವಿ ಸಭೆಯಲ್ಲಿ ತೀರ್ಮಾನ
ಸರ್ಕಾರ ಕೂಡಲೇ ಅವರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಅಂಬೇಡ್ಕರ್ ವೃತ್ತದಲ್ಲಿ (Challakere) ಟೊಮೆಟೊ, ಈರುಳ್ಳಿ, ಶೇಂಗಾವನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಬೆಳೆದ ಈರುಳ್ಳಿ ಹಾಗೂ ಟೊಮೆಟೊ ಬೆಳೆಗಳಿಗೆ ಸೂಕ್ತ ಬೆಲೆ ಸಿಗಲಿಲ್ಲ. ಪ್ರತಿ ಎಕರೆಗೆ ಸುಮಾರು 30 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿ ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದ ರೈತರು ನಾಲ್ಕು ಲಕ್ಷ ನಷ್ಟ ಸಂಭವಿಸಿ ಚಿಂತೆಗೀಡಾಗಿದ್ದಾನೆ.
ಈರುಳ್ಳಿ, ಟೊಮೆಟೊ ಬೆಲೆ ಕುಸಿತ
ರೈತರಿಗೆ ಯಾವುದೇ ಇಲಾಖೆಗಳು ನೆರವಿಗೆ ಬಂದಿಲ್ಲ. ಅಧಿಕಾರಿ ವರ್ಗವೂ ಈ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ರೈತರ ಬದುಕು ಬೀದಿ ಪಾಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಎಸ್.ರಾಜಣ್ಣ ಮಾತನಾಡಿ, ಯಾವುದೇ ಬೆಳೆ ಬೆಳೆದರು ರೈತನಿಗೆ ಮಾರು ಕಟ್ಟೆಯಲ್ಲಿ ಅವರು ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ, ಇಡೀ ವರ್ಷ ಕಷ್ಟಪಟ್ಟು ಬೇಸಾಯ ಮಾಡಿದ ರೈತ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾನೆ. ಇದುವರೆಗೂ ಯಾವುದೇ ಅಧಿಕಾರಿಗಳು ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿರುವುದು ನೋವಿನ ಸಂಗತಿ ಎಂದರು.
ಇದನ್ನೂ ಓದಿ: Chitradurga today Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಜಂಟಿಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ, ತಹಸೀಲ್ದಾರ್‌ರೇಹಾನ್ ಪಾಷ,(Challakere) ರೈತರೊಂದಿಗೆ ಸಮಾಲೋಚನೆ ನಡೆಸಿದರು.
ಇಒ ಎಚ್.ಶಶಿಧರ, ಕೃಷಿ ಅಧಿಕಾರಿ ಜೆ.ಅಶೋಕ್, ರೈತ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್, ತಿಪ್ಪೇಸ್ವಾಮಿ, ಪ್ರಶಾಂತ್ ರೆಡ್ಡಿ, ರಾಜಣ್ಣ, ರಾಮಾಂಜನೇಯ, ಆರ್.ರುದ್ರಮುನಿ, ಮಾರಣ್ಣ ಇದ್ದರು.
