Chitradurga news |nammajana.com|12-9-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ತಳಕು ಹೋಬಳಿಯ ಘಟಪರ್ತಿ ಶ್ರೀಮತಿಗೌರಮ್ಮ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಬಾಲಕಿಯರ ಖೋ-ಖೋ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಗೆಲುವು ಸಾಧಿಸಿ ರಾಜ್ಯಮಟ್ಟಕ್ಕೆ (Challakere) ಆಯ್ಕೆಯಾಗಿದ್ದು, ಪ್ರಾಂಶುಪಾಲ ತಿಪ್ಪೇಸ್ವಾಮಿ ವಿದ್ಯಾರ್ಥಿಗಳು ಹಾಗೂ ತರಬೇತಿದಾರ ಕೆ.ಟಿ.ವೇಲೂರುರವರನ್ನು ಅಭಿನಂದಿಸಿದರು.
ಈ ಬಗ್ಗೆ ಪತ್ರಿಕೆಯೊಂದಿಗೆ ತಮ್ಮ ಸಂತಸ ಹಂಚಿಕೊAಡ ಪ್ರಾಂಶುಪಾಲ ತಿಪ್ಫೇಸ್ವಾಮಿ, ಗ್ರಾಮೀಣ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಹಾಗೂ ಉತ್ತೇಜನ ದೊರೆತಲ್ಲಿ ರಾಜ್ಯ ಹಾಗೂ (Challakere) ರಾಷ್ಟçಮಟ್ಟದಲ್ಲಿ ತಮ್ಮ ಸಾಧನೆಯನ್ನು ಪ್ರದರ್ಶಿಸುವರು.
ಗ್ರಾಮೀಣ ಭಾಗದ ಘಟಪರ್ತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಲ್ಲಿ ಹೆಚ್ಚು ಸ್ಪರ್ಧಿ ನೀಡಿ ಆರ್ಹ ಗೆಲುವು ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, (Challakere) ರಾಜ್ಯಮಟ್ಟದಲ್ಲೂ ಸಹ ಗೆಲುವು ದಾಖಲಿಸಿ ಚಳ್ಳಕೆರೆ ತಾಲ್ಲೂಕು ಹಾಗೂ ಜಿಲ್ಲೆಗೆ ಕೀರ್ತಿತರಲಿ ಎಂದು ಶುಭಹಾರೈಸುವುದಾಗಿ ತಿಳಿಸಿದರು.
ಇದನ್ನೂ ಓದಿ: Dina Bhavishya: ಇಂದು ಯಾವ ರಾಶಿಗೆ ಮದುವೆ, ಉದ್ಯೋಗ ಯೋಗವಿದೆ ನೋಡಿ?
ತಂಡದಲ್ಲಿ ಮೋನಿಕಾ, ಕೆ.ಸುಶ್ಮಿತಾ, ವೈಷ್ಣವಿ, ಆರ್.ಸುಶ್ಮಿತಾ, ಸಿಂಧು, ಮಂತಮ್ಮ, ಸಿ.ಎಂ.ಪಲ್ಲವಿ, ಡಿ.ಭಾರತಿ, ಪವಿತ್ರ, ಪ್ರಿಯಾ ಉತ್ತಮ ಖೋ-ಖೋ ಆಟ ಪ್ರದರ್ಶಿಸಿದರು. ಉಪನ್ಯಾಸಕ ಎಸ್.ಅಕ್ಷಯರೆಡ್ಡಿ, ಪ್ರಭು, ಗುರು, ಶ್ರೀರಾಮನಾಯಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ಧಾರೆ.