
Chitradurga news|nammajana.com|16-6-2024
ನಮ್ಮಜನ.ಕಾಂ, ಚಳ್ಳಕೆರೆ: ನಗರದ ಛೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಶನಿವಾರ ನಡೆದ ನೂತನ ಸಂಸದ ಗೋವಿಂದ ಎಂ.ಕಾರಜೋಳ (Challakere) ಅಭಿನಂದನೆ ಸ್ವೀಕರಿಸಿ ಮಾತನಾಡುವ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಿಗೆ ಮೂರು (Challakere) ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿ ರಾಜ್ಯದಲ್ಲಿ ತಮ್ಮ ಸರ್ಕಾರ ಆಡಳಿತದಲ್ಲಿದ್ದು, ಸಾರ್ವಜನಿಕ ಹಿತದೃಷ್ಠಿಯಿಂದ ಬೇಡಿಕೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಬೇಕೆಂದು ಬಯಸುತ್ತೇನೆ.
ಪ್ರಮುಖವಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹ್ಯಾಟ್ರಿಕ್ ಸಾಧನೆಗೈದ ಜಿಲ್ಲೆಯ ಏಕೈಕ ಕಾಂಗ್ರೆಸ್ ಪಕ್ಷದ ಶಾಸಕರು ತಾವಾಗಿದ್ದೀರಿ, ತಾವು ಈ ಹಿಂದೆ ೨೦೧೩-೧೮ರ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದಲ್ಲೇ ಪರಶುರಾಮಪುರ ಆಡಳಿತವನ್ನು ತಾಲ್ಲೂಕು ಕೇಂದ್ರವಾಗಿ ಮಾಡುವ ಭರವಸೆ ನೀಡಿದ್ದೀರಿ, ಅಂದು ಸರ್ಕಾರವಿದ್ದರೂ ಮಾಡಲು ಸಾಧ್ಯವಾಗಿಲ್ಲ. ಆದರೆ, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತದಲ್ಲಿದ್ದು, ಈ ಬೇಡಿಕೆಯನ್ನು ಈಡೇರಿಸಬೇಕು ಎಂದರು.

ಈ ಹಿಂದೆ ಈ ಕ್ಷೇತ್ರದ ಸಚಿವರಾಗಿದ್ದ ತಿಪ್ಪೇಸ್ವಾಮಿ ಅವಧಿಯಲ್ಲಿ ಅಂದಿನ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿವಿ ಸಾಗರದಿಂದ ಚಳ್ಳಕೆರೆಗೆ ಕುಡಿಯುವ ನೀರು ಯೋಜನೆಗೆ ೩೦ ಕೋಟಿ ಹಣ ಬಿಡುಗಡೆಗೊಳಿಸಿದ್ದರು. ಕ್ಷೇತ್ರದ ಅಭಿವೃದ್ದಿಗಾಗಿ ಮಾಜಿ ಸಚಿವ ತಿಪ್ಪೇಸ್ವಾಮಿಯವರ ಕೊಡುಗೆಯ ಬಗ್ಗೆ ಹೆಚ್ಚು ಗಮನಹರಿಸಬೇಕು.
ಇದನ್ನೂ ಓದಿ: Dina Bhavishya kannada: ಇಂದಿನ ದಿನ ಭವಿಷ್ಯ16-6-2024
ಅಂದು ತಿಪ್ಪೇಸ್ವಾಮಿಯವರು ಈ ಕ್ಷೇತ್ರದಲ್ಲಿ ಐದು ಸಾವಿರ ನಿವೇಶನ ನೀಡುವ ಭರವಸೆ ನೀಡಿದ್ದು, ತಾವು ಸಹ ನಿವೇಶನ ಜೊತೆಗೆ ಮನೆ ನಿರ್ಮಿಸುವ ಇಚ್ಚಾಶಕ್ತಿಯನ್ನು ಹೊಂದಿ ಕಾರ್ಯಗತಗೊಳಿಸಬೇಕು ಎಂದರು.
ರಾಜ್ಯದಲ್ಲಿ ಎಸ್ಸಿ, ಎಸ್ಟಿ ನಿಗಮದ ನೂರಾರು ಕೋಟಿ ಹಣ (Challakere) ಅವ್ಯವಹಾರವಾದ ಬಗ್ಗೆ ಸರ್ಕಾರ ತನಿಖೆ ನಡೆಸುತ್ತಿದೆ, ಆದರೆ ಪರಿಶಿಷ್ಟ ವರ್ಗದ ಕ್ಷೇತ್ರದಿಂದ ಆಯ್ಕೆಯಾದ ತಾವು ಈ ಬಗ್ಗೆ ಧ್ವನಿ ಎತ್ತಬೇಕಿದೆ. ರಾಜ್ಯದಲ್ಲಿ ಒಟ್ಟು ಎಸ್ಟಿ, ಎಸ್ಸಿ ಮೀಸಲಾತಿ ೨೪ ಸಾವಿರ ಕೋಟಿ ಹಣವನ್ನು ಪ್ರಸ್ತುತ ಸರ್ಕಾರ ದುರುಪಯೋಗ ಪಡಿಸಿಕೊಂಡ ಬಗ್ಗೆ ತಾವು ಧ್ವನಿ ಎತ್ತಬೇಕು. ಹೋರಾಟಕ್ಕೆ ಇಳಿದರೆ ನಾನು ಕೈಜೋಡಿಸುವೆ ಎಂದಿದ್ಧಾರೆ.
ಇದನ್ನೂ ಓದಿ: Chitradurga: ರೇಣುಕಾಸ್ವಾಮಿ ಕುಟುಂಬಕ್ಕೆ 60 ಸಾವಿರ ನೆರವು ನೀಡಿದ ಬಿಜೆಪಿ ಅಧ್ಯಕ್ಷ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಸಂಸದ ಗೋವಿಂದ ಎಂ.ಕಾರಜೋಳ ಕ್ಷೇತ್ರದ ಹಿತದೃಷ್ಠಿಯಿಂದ ಉತ್ತಮ ಬೇಡಿಕೆಗಳನ್ನು ಮಂಡಿಸಿದ್ದಾರೆ ಎಂದರು.
ಸಂಸದ ಗೋವಿಂದಕಾರಜೋಳ ದೊಡ್ಡೇರಿಯ ಶ್ರೀಕನ್ನೇಶ್ವರಮಲ್ಲಿಕಾರ್ಜುನಸ್ವಾಮಿ ಆಶ್ರಮಕ್ಕೆ ಭೇಟಿ ನೀಡಿ ಮಲ್ಲಪ್ಪಸ್ವಾಮಿಯವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರು ತಮ್ಮ ಅಧಿಕಾರದಲ್ಲಿ ಜಿಲ್ಲೆಯ ಅಭಿವೃದ್ದಿಯ ಕನಸು ನನಸಾಗಲಿ ಎಂದರು.
ಪಾವಗಡ ರಸ್ತೆಯ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ, ಕಾರ್ಯದರ್ಶಿ ರವಿಪ್ರಸಾದ್, ಟ್ರಸ್ಟ್ ನಿರ್ದೇಶಕರಾದ ಕೆ.ನಾಗೇಶ್, ಬಿ.ವಿ.ಚಿದಾನಂದಮೂರ್ತಿ, ವೆಂಕಟೇಶ್, ಜಗದೀಶ್ ಮುಂತಾದವರು ಸಂಸದರನ್ನು ಸನ್ಮಾನಿಸಿದರು.
ಪೂಜೆ ನೆರವೇರಿಸಿ ಮಾತನಾಡಿದ ಸಂಸದ ಗೋವಿಂದಕಾರಜೋಳ ಬಯಲುಸೀಮೆಯ ಬರದ ನಾಡಿನಲ್ಲಿ ಶ್ರೀಸಾಯಿಬಾಬಾ ಭದ್ರವಾಗಿ ನೆಲೆಸಿ ನಮ್ಮೆಲ್ಲರ ಬದುಕಿಗೆ ಹೊಸ ಆತ್ಮವಿಶ್ವಾಸ ತುಂಬಿದ್ಧಾರೆ ಎಂದರು.
