
Chitradurga news| nammajana.com|08-03-2025
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 30 ಕ್ಕೂ ಹೆಚ್ಚು (Challakere) ಹಟ್ಟಿಗಳಿದ್ದು, ಬುಡಕಟ್ಟು ಸಂಸ್ಕೃತಿಯ ನಾಯಕ ಸಮುದಾಯ ಈ ಭಾಗದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿದೆ. ಕೆಲವು ಸಂದರ್ಭಗಳಲ್ಲಿ ತಮ್ಮ ಸಮುದಾಯಕ್ಕೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮವಾದರೆ ಅದನ್ನು ವಿರೋಧಿಸುವ ಶಕ್ತಿಗಳೇ ಹೆಚ್ಚು.
ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡೆಹಟ್ಟಿ ಗ್ರಾಮದ ಚಂದ್ರಪ್ಪ ಎಂಬುವವರ ಪುತ್ರಿ ಶ್ರಾವಣಿ(21), ನನ್ನಿವಾಳ ಗ್ರಾಮದ ತಿಪ್ಪೇಸ್ವಾಮಿ ಎಂಬುವವರ ಪುತ್ರ ಪೃಥ್ವಿರಾಜ್(22) ಇಬ್ಬರು ಸಹಪಾಠಿಗಳಾಗಿದ್ದು, ಕಳೆದ ಕೆಲವು ವರ್ಷಗಳಿಂದ ಇಬ್ಬರಲ್ಲೂ ಪ್ರೀತಿ ಉಂಟಾಗಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು.

ಶ್ರಾವಣಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಪೃಥ್ವಿರಾಜ್ ಪರಿಶಿಷ್ಟ ಜಾತಿಯನಾಗಿದ್ದು ಇವರ ಅಂತರ್ಜಾತಿ ವಿವಾಹಕ್ಕೆ ಮನೆಯವರ ವಿರೋಧವಿದ್ದು, ಎರಡ್ಮೂರು ಬಾರಿ ಗ್ರಾಮ ಹಾಗೂ ಪೊಲೀಸ್ ಠಾಣೆಯಲ್ಲಿ ಸಂದಾನ ಸಭೆ ನಡೆದಿತ್ತು. ಇವರಿಬ್ಬರ ವಿವಾಹಕ್ಕೆ (Challakere) ಯಾವುದೇ ಸಕರಾತ್ಮಕ ನಿಲುವು ತಾಳಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಶ್ರಾವಣಿ ಮತ್ತು ಪೃಥ್ವಿರಾಜ್ ವಿವಾಹವಾಗಿ ವಿವಾಹದ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು.
ಈ ಬಗ್ಗೆ ಮಾಹಿತಿ ಪಡೆದ ಚಂದ್ರಪ್ಪನ ಬಂಧುಗಳು ಮಾ.7 ರ ಶುಕ್ರವಾರ ರಾತ್ರಿ ಗುಂಪುಗಟ್ಟಿಕೊಂಡು ನನ್ನಿವಾಳ ಗ್ರಾಮಕ್ಕೆ ಆಗಮಿಸಿ ತಿಪ್ಪೇಸ್ವಾಮಿಯನ್ನು ಅವಾಚ್ಯ ಶಬ್ದಗಳಿಂದ ಬೈದು ನಿನ್ನ ಕುಮ್ಮಕ್ಕಿನಿಂದಲೇ ಈ ರೀತಿಯಾಗಿದೆ ಎಂದು ಗಲಾಟೆ ಮಾಡಿ (Challakere) ಮನೆಯ ಬಾಗಿಲನ್ನು ಒಡೆದು, ತಿಪ್ಪೇಸ್ವಾಮಿಯ ಬೈಕ್ ಮೇಲೆ ಕಲ್ಲು ಎತ್ತಿಹಾಕಿದ್ದಾರೆ. ಚಂದ್ರಪ್ಪ ಮನೆ ಪಕ್ಕದಲ್ಲಿದ್ದ ಶಿವರಾಜ್ ಎಂಬುವವರ ಬೈಕ್, ಸೋಮಶೇಖರ್‌ರವರ ಟಾಟಾಮ್ಯಾಜೀಕ್ ಮೇಲೆ ಕಲ್ಲು ಎತ್ತಿಹಾಕಿ ಗಲಭೆ ಎಬ್ಬಿಸಿದ್ಧಾರೆ.
ಇದನ್ನೂ ಓದಿ: Doctor Jairam | ಹಣವಿಲ್ಲದೇ ಬಂದ ಬಡವರ ಸಂಜೀವಿನಿ ಡಾಕ್ಟರ್ ಜೈರಾಮ್ ಇನ್ನಿಲ್ಲ
ಸುದ್ದಿ ತಿಳಿದ ಡಿವೈಎಸ್ಪಿ ರಾಜಣ್ಣ, ಪಿಎಸ್‌ಐ ಜೆ.ಶಿವರಾಜ್ ಮತ್ತು ತಂಡ ಗ್ರಾಮಕ್ಕೆ ತೆರಳಿ ಹಲ್ಲೆ ನಡೆಸಿದವರನ್ನು ವಶಕ್ಕೆ ಪಡೆದಿದ್ಧಾರೆ. ತಿಪ್ಫೇಸ್ವಾಮಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಬಂಡೆಹಟ್ಟಿಯ ಬೋರಯ್ಯ, ಸುನೀಲ್, ಸುರೇಶ್, ಪಾಪಯ್ಯ, ಕಾಟಯ್ಯ, ಜಯಣ್ಣ ಎಂಬುವವರ ಮೇಲೆ ಪ್ರಕರಣ ದಾಖಲಿಸಿದ್ಧಾರೆ. ಗ್ರಾಮದಲ್ಲಿ ಬಿಗುವಿನ ವಾತಾವಣವಿದ್ದು, ಪೊಲೀಸರ ಬಂದೋಬಸ್ತ್ ಮುಂದುವರೆದಿದೆ.
