Chitradurga news|nammajana.com|23-6-2024
ನಮ್ಮಜನ.ಕಾಂ, ಚಳ್ಳಕೆರೆ: ಚಳ್ಳಕೆರೆ ನಗರದ ಹೊರವಲಯದ ಸಣ್ಣಲಿಂಗಪ್ಪ ಬಡಾವಣೆಯ ಶಿಕ್ಷಕನ ಮನೆಗೆ ದರೋಡೆಕೋರರು ನುಗ್ಗಿ ಗಂಡ, ಹೆಂಡತಿಯನ್ನು ಬೆದರಿಸಿ ಬೆಳ್ಳಿ, ಬಂಗಾರ, ಹಣದೊಂದಿಗೆ (Challakere Letest crime) ಪರಾರಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.
ಶಿಕ್ಷಕ ಈರಣ್ಣನವರ ಮನೆಗೆ ಹಿಂಭಾಗಿಲಿನಿಂದಶಿಕ್ಷಕ ಈರಣ್ಣ ಮತ್ತು ರಾಧ ಇಬ್ಬರೂ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈರಣ್ಣನ ಎಡಬುಜ ಬೆನ್ನಿಗೆ ಕೋಲಿನಿಂದ ಬಲಾಗಿ ಹೊಡೆದಿದ್ದು, ಹೆಂಡತಿ ರಾಧ ಎಡಗಾಲಿಗೆ ಕೋಲಿನಿಂದ (Challakere Letest crime) ಹೊಡೆದು ಗಾಯಗೊಳ್ಳಿಸಿದ್ಧಾರೆ.
ಇದನ್ನೂ ಓದಿ: Chikkajajur accident: ಬೈಕ್-ಮೈನ್ಸ್ ಲಾರಿ ಅಪಘಾತ | ಬೈಕ್ ಸವಾರನ ತಲೆ ಮೇಲೆ ಲಾರಿ ಟೈರ್ ಹತ್ತಿ ಸಾವು
ಹಿಂಭಾಗಿಲಿನ ಬೀಗ ಮುರಿದು ಒಳ ನುಗ್ಗಿದ ದರೋಡೆಕೋರರು ಮನೆಯಲ್ಲಿನ ಲೈಟ್ ಆಫ್ ಮಾಡಿ ಈರಣ್ಣ ಮತ್ತು ರಾಧರ ಮುಖಕ್ಕೆ ಮೊಬೈಲ್ ಬೆಳಕು ಬಿಟ್ಟು ಅವರ ಮೂಲಕ ಬೆಳ್ಳಿ, ಬಂಗಾರ ಹಣವನ್ನು ದೋಚಿದ್ಧಾರೆ. ದರೋಡೆ ನಡೆಯುವ (Challakere Letest crime) ಮುನ್ನವೇ ಕಾರೊಂದು ಇವರ ಮನೆಯ ಮುಂದೆ ಹಾದುಹೋಗಿದೆ. ಈ ಬಗ್ಗೆ ಈರಣ್ಣ ಮಾಹಿತಿ ನೀಡಿದ್ದು, ಬಹುಷ ದರೋಡೆ ಮಾಡಿದ ಎಲ್ಲರೂ ೩೦-೩೫ ವಯಸ್ಸಿನವರು.
ಕನ್ನಡದಲ್ಲೇ ಮಾತನಾಡುತ್ತಿದ್ದರು. ಕೇವಲ ೧೫-೨೦ ನಿಮಿಷ ಅವಧಿಯಲ್ಲಿ ಎಲ್ಲವನ್ನೂ ದೋಚಿ ಕತ್ತಲಲ್ಲಿ ಪರಾರಿಯಾಗಿದ್ಧಾರೆ. ಸ್ವಲ್ಪ ಸಮಯದ ನಂತರ ನಾವು ಸಹಾಯಕ್ಕಾಗಿ ಕೂಗಿಕೊಂಡಾಗ ನೆರೆಹೊರೆಯವರು ದಾವಿಸಿ ಆಸ್ಪತ್ರೆಗೆ ದಾಖಲಿಸಿದ್ಧಾರೆ.
ಇದನ್ನೂ ಓದಿ: Kadugolla Association: ಕಾಡುಗೊಲ್ಲರ ಸಂಘದಿಂದ ಜೂ 30ಕ್ಕೆ ಪ್ರತಿಭಾ ಪುರಸ್ಕಾರ
ಜಿಲ್ಲಾ ರಕ್ಷಣಾಧಿಕಾರಿ ಭೇಟಿ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರಕುಮಾರ್‌ಮೀನಾ, ಡಿವೈಎಸ್ಪಿ ರಾಜಣ್ಣ, ಸಿಪಿಐ ರಾಜಫಕೃದ್ದೀನ್ ದೇಸಾಯಿ, ರಾಜಶೇಖರಯ್ಯ ಮತ್ತು ಸಿಬ್ಬಂದಿ ವರ್ಗ ಶೋಧ ನಡೆಸಿದರು. ರಾತ್ರಿವೇಳೆಯ (Challakere Letest crime) ಪಹರೆಯನ್ನು ಇನ್ನಷ್ಟು ಬೀಗಿಗೊಳಿಸುವಂತೆ ಸೂಚನೆ ನೀಡಿದ್ಧಾರೆ.
ವಿಶೇಷವಾಗಿ ನಗರದ ಹೊರವಲಯದ ಹೋಟೆಲ್, ಡಾಬಾ, ಅಂಗಡಿಗಳ ಸುತ್ತಮುತ್ತಲ ಪರಿಶೀಲನೆ ನಡೆಸಲು ತಿಳಿಸಿದ್ಧಾರೆ. ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ.