Chitradurga news |nammajana.com|23-5-2025
ನಮ್ಮಜನ.ಕಾಂ, ಚಳ್ಳಕೆರೆ: ಕಳೆದ ಸುಮಾರು 5 ದಶಕಗಳಿಂದ ತಾಲ್ಲೂಕಿನ ತಳಕು ಹೋಬಳಿಯ ಕಾಲುವೇಹಳ್ಳಿ ಗ್ರಾಮದಲ್ಲಿ ನೆಲೆಸಿದ ಗ್ರಾಮೀಣ ಭಾಗದ ಗರ್ಭಿಣಿ ಮಹಿಳೆಯರ ಹೆರಿಗೆಯ ಜವಾಬ್ದಾರಿಯನ್ನು ಹೊತ್ತು ಸಾವಿರಾರು ಹೆರಿಗೆಗಳನ್ನು ಗ್ರಾಮದ ಮನೆಯಲ್ಲೇ ಮಾಡಿಸುವ ಮೂಲಕ ಮಹಿಳೆಯರ ಪಾಲಿನ (Challakere) ಆಪ್ತಬಾದ್ಭವೆಯಾದ ಸೂಲಗಿತ್ತಿ ತಳಕಿನ ತಿಮ್ಮಕ್ಕಳನ್ನು ಕ್ಷೇತ್ರದ ಶಾಸಕ ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಅಭಿನಂದಿಸಿ, ಅವರ ಸೇವೆಯನ್ನು ಸನ್ಮಾನಿಸಿ, ಸರ್ಕಾರದಿಂದ ನಿವೇಶನ ಕೊಡಿಸುವ ಭರವಸೆ ನೀಡಿದ ಘಟನೆ ಸಾಯಿಬಾಬಾಮಂದಿರದಲ್ಲಿ ಗುರುವಾರ ಮಧ್ಯಾಹ್ನ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಯಿ ಬಾಬಾದರ್ಶನ ಪಡೆದು ಪೂಜೆ ಸಲ್ಲಿಸಿದ ತೆರಳುವ ಸಂದರ್ಭದಲ್ಲಿ ಕುರ್ಚಿ ಮೇಲೆ ಕುಳಿತಿದ್ದ ಸೂಲಗಿತ್ತಿ ತಳಕಿನ ತಿಮ್ಮಕ್ಕಳನ್ನು ಶಾಸಕ (Challakere) ಟಿ.ರಘುಮೂರ್ತಿ ಆತ್ಮೀಯವಾಗಿ ಮಾತನಾಡಿಸಿ ನಿಮ್ಮ ಉತ್ತಮ ಕೆಲಸದ ಬಗ್ಗೆ ಸಮಾಜಕ್ಕೆ ಹೆಮ್ಮೆ ಇದೆ.

ಕಷ್ಟಕಾಲದಲ್ಲಿ ನೆರವಾದ ನಿಮ್ಮ ಸೇವೆಯನ್ನು ಸಮಾಜ ಎಂದಿಗೂ ಮರೆಯುವುದಿಲ್ಲ, ಗ್ರಾಮದಲ್ಲಿ ನಿವೇಶನವಿಲ್ಲವೆಂಬ ಸುದ್ದಿ ಪತ್ರಿಕೆ ಮೂಲಕ ತಿಳಿದಿದೆ.
ಸರ್ಕಾರದ ವತಿಯಿಂದ ನಿವೇಶನ ಕೊಡಿಸುವುದಲ್ಲದೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಶಶಿಧರವರಿಗೆ ದೂರವಾಣಿ ಮೂಲಕ ಮಾತನಾಡಿ ಕೂಡಲೇ ಕಾಲುವೇಹಳ್ಳಿಯ ತಳಕುತಿಮ್ಮಕ್ಕಗೆ ಗ್ರಾಮದಲ್ಲಿ (Challakere) ನಿವೇಶನ ನೀಡಿ ಮನೆ ಕಟ್ಟಿಸಿಕೊಡುವಂತೆ ಸೂಚನೆ ನೀಡದರು.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ಈ ಸಂದರ್ಭದಲ್ಲಿ ಬಿ.ಸಿ.ವೆಂಕಟೇಶ್‌ಮೂರ್ತಿ, ಕೆ.ಎಂ.ಜಗದೀಶ್, ಕೆ.ನಾಗೇಶ್, ರವಿಪ್ರಸಾದ್, ಬಿ.ವಿ.ಚಿದಾನಂದಮೂರ್ತಿ, ಮಹದೇವಿತಿಪ್ಪೇಸ್ವಾಮಿ, ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್‌ಗೌಡ, ಎಂ.ಜೆ.ರಾಘವೇಂದ್ರ, ಹೂವಿನತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252