Chitradurga News | Nammajana.com | 14-08-2025
ನಮ್ಮಜನ.ಕಾಂ, ಚಳ್ಳಕೆರೆ: ಚಳ್ಳಕೆರೆ (Dogs) ನಗರ ವ್ಯಾಪ್ತಿಯಲ್ಲಿ ಕಳೆದ ಹಲವಾರು ತಿಂಗಳಿನಿಂದ ಬೀದಿನಾಯಿಗಳ ಕಾಟ ಮಿತಿಮೀರಿದ್ದು, ಎಲ್ಲೆಡೆ ಸಾರ್ವಜನಿಕರನ್ನು ಹಿಂಬಾಲಿಸಿ ಕಚ್ಚಿಗಾಯಗೊಳಿಸಿದ ಅನೇಕ ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಈಗಾಗಲೇ ಸಾರ್ವಜನಿಕರು ಬೀದಿನಾಯಿಗಳ ಕಾಟವನ್ನು ನಿಯಂತ್ರಿಸುವಂತೆ ಮನವಿ ಮಾಡಿದ್ಧಾರೆ. ನಗರಸಭೆ ಆಡಳಿತ ಈ ಬಗ್ಗೆ ಜಾಗೃತಗೊಂಡು ಪ್ರಸ್ತುತ ನಗರದಲ್ಲಿ 1480 ಸಾವಿರ ಬೀದಿನಾಯಿಗಳಿದ್ದು ಆಪೈಕಿ 1180 ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಶಿಲ್ಪಮುರುಳಿ ತಿಳಿಸಿದರು.
ಇದನ್ನೂ ಓದಿ: ವಾಣಿ ವಿಲಾಸ ಸಾಗರ ಒಳ ಹರಿವು 600 ಕ್ಯೂಸೆಕ್ಸ್ ಹೆಚ್ಚಳ

ಅವರು, ನಗರಸಭೆಯ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬೀದಿನಾಯಿಗಳ ತೊಂದರೆ ನಿವಾರಣೆ ಕುರಿತು ಮಾಹಿತಿ ನೀಡಿದಲ್ಲದೆ, ಬೀದಿನಾಯಿಗಳನ್ನು ನಿಯಂತ್ರಿಸಲು ಸ್ವಲ್ಪ ವಿಳಂಬವಾಗುವ ಹಿನ್ನೆಲೆಯಲ್ಲಿ ಅವುಗಳಿಗೆ ಶಸ್ತ್ರಚಿಕಿತ್ಸೆ ಮೂಲಕ ನಿಯಂತ್ರಣ ಮಾಡಲಾಗಿದೆ. ಈಗಾಗಲೇ ರಾಜ್ಯದ ಹಲವೆಡೆ ನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ನಂತರ ಅವುಗಳನ್ನು ಅದೇ ಸ್ಥಳಕ್ಕೆ ಬಿಡಲಾಗುತ್ತದೆ. ಇದೇ ಪ್ರಯೋಗವನ್ನು ಚಳ್ಳಕೆರೆಯಲ್ಲೂ ಕೈಗೊಳ್ಳಲಾಗುತ್ತದೆ ಎಂದರು.
ಉಪಾಧ್ಯಕ್ಷೆ ಸಿ.ಕವಿತಾಬೋರಯ್ಯ ಮಾತನಾಡಿ, ಬೀದಿನಾಯಿಗಳ ಕಾಟದ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲೂ ಸಹ ನಮ್ಮ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.
ಪ್ರತಿನಿತ್ಯ ಸಾರ್ವಜನಿಕ ಆಸ್ಪತ್ರೆಗೆ ನಗರ(Dogs) ಪ್ರದೇಶದಲ್ಲೇ ಸುಮಾರು ಜನರು ನಾಯಿಗಳ ಬಾಯಿಗೆ ತುತ್ತಾಗುತ್ತಿದ್ಧಾರೆ. ಇದನ್ನು ಕೂಡಲೇ ನಿಯಂತ್ರಿಸಬೇಕಿದೆ. ನಗರದ ವಿವಿಧಡೆ ಇರುವ ಮಾಂಸದಂಗಡಿ ಇನ್ನಿತರೆ ಕಡೆಗಳಲ್ಲಿ ಆಹಾರವನ್ನು ಎಸೆಯುವುದರಿಂದ ನಾಯಿಗಳ ಉಪಟಳ ಹೆಚ್ಚಾಗಿದೆ. ಮಾಂಸದಂಗಡಿಯವರು ಕೂಡಿಟ್ಟು ದೂರ ಪ್ರದೇಶಕ್ಕೆ ಎಸೆಯುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ಇದನ್ನೂ ಓದಿ: RTI ಮಾಹಿತಿ ನಿರಾಕರಣೆ | ಚಿತ್ರದುರ್ಗ ನಿರ್ಮಿತಿ ಕೇಂದ್ರಕ್ಕೆ 50 ಸಾವಿರ ದಂಡ
ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್, ಬಿ.ಟಿ.ರಮೇಶ್‌ಗೌಡ, ಕೆ.ವೀರಭದ್ರಪ್ಪ, ಎಂ.ಜೆ.ರಾಘವೇಂದ್ರ, ಮುಖಂಡ ಬೋರಯ್ಯ, ಕೃಷ್ಣ, ಪರಿಸರ ಇಂಜಿನಿಯರ್ ನರೇಂದ್ರಬಾಬು ಮುಂತಾದವರು ಉಪಸ್ಥಿತರಿದ್ದರು.
