Chitradurga news|nammajana.com|5-10-2024
ನಮ್ಮಜನ.ಕಾಂ, ಚಳ್ಳಕೆರೆ: ಪ್ರಸ್ತುತ ವರ್ಷದ ಹಸ್ತಮಳೆ ಶುಕ್ರವಾರ ತಡರಾತ್ರಿ ತಾಲ್ಲೂಕಿನಾದ್ಯಂತ ಭಾರಿ ಬಿರಿಸಿನಮಳೆ ಸುರಿದ ಪರಿಣಾಮ ಮನೆಗಳು ಬಿದ್ದು, ಜಮೀನಿನ ಬೆಳೆಯಲ್ಲಿ (Challakere rain report) ನೀರು ನಿಂತಿದೆ. ಅಪಾರ ಹಾನಿಯೂ ಉಂಟಾಗಿದೆ. ಇನ್ನೂ ಕೆಲವು ಕಡೆ ಮಳೆಯಿಂದ ಅಪಾರವಾದ ಹಾನಿಯೂ ಉಂಟಾಗಿದೆ.
ತಾಲ್ಲೂಕಿನಾದ್ಯಂತ ಈ ಬಾರಿ ಪ್ರಸ್ತುತ ವರ್ಷದ ಅತಿಹೆಚ್ಚು ಮಳೆ ಶುಕ್ರವಾರ ರಾತ್ರಿ ಸುರಿದಿದ್ದು ನಾಯಕನಹಟ್ಟಿ -೧೨೯.೦೬, ಚಳ್ಳಕೆರೆ-೧೨೩.೦೦, ತಳಕು-೯೩.೦೪, (Challakere rain report) ದೇವರಮರಿಕುಂಟೆ-೪೨.೦೪, ಪರಶುರಾಮಪುರ-೩೯.೦೬ ಒಟ್ಟು ೪೨೬.೧೮ ಎಂ.ಎಂ ಮಳೆ ಒಂದೇ ರಾತ್ರಿ ಸುರಿದು ಇದು ಇತ್ತೀಚಿನ ವರ್ಷ ದಾಖಲೆ ಮಳೆ ಎನ್ನಬಹುದು.
ಚಳ್ಳಕೆರೆ ನಗರದ ಪಾವಗಡ ರಸ್ತೆಯ ಹಳ್ಳ ತುಂಬಿ ಹರಿದು ಕೆಲವು ಗಂಟೆಗಳ ಕಾಲ ವಾಹನಗಳ ಸಂಚಾರವನ್ನು (Challakere rain report) ತಡೆಯಲಾಗಿತ್ತು. ನಗರದ ತ್ಯಾಗರಾಜ ನಗರ, ಅಂಬೇಡ್ಕರ್ ನಗರ, ರಹೀಂನಗರ, ಕಾಟಪ್ಪನಹಟ್ಟಿ ಮುಂತಾದ ಕಡೆಗಳಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿ ಅವಾಂತರ ಉಂಟು ಮಾಡಿತ್ತು.
ರಾತ್ರಿ ೯.೩೦ಕ್ಕೆ ಆರಂಭವಾದ ಮಳೆ ಬೆಳಗಿನ ಜಾವ ೪ವರೆಗೂ ಸುರಿದಿದೆ. ಸುತ್ತಮುತ್ತಲೂ ಎಲ್ಲಾ ಕೆರೆಗಳಲ್ಲೂ ನೀರಿನ ಪ್ರಮಾಣ ಹೆಚ್ಚಿದೆ. ತ್ಯಾಗರಾಜ ನಗರ ಹಳೇ ಮಯೂರ ಬೇಕರಿ ಬಳಿಯ ಪಗಡಲಬಂಡೆ ನಾಗೇಂದ್ರಪ್ಪ, ಶೋಭಾ, ಚಿರಂಜೀವಿ, ಶಿವಕುಮಾರ್, ನಾಗವೇಣಿ, ನೇತ್ರಮ್ಮ, ಪ್ರವೀಣ, (Challakere rain report) ಶಾಂತಕುಮಾರ್ ಮನೆಗಳಿಗೆ ನೀರು ನುಗ್ಗಿ ಇಡೀ ರಾತ್ರಿ ಜನರ ನಿದ್ದೆ ಗೆಡಿಸಿತು.
ಮಳೆಯ ನೀರನ್ನು ಪ್ರಯಾಸದಿಂದಲೇ ಹೊರಹಾಕಿದರು. ಪೌರಾಯುಕ್ತ ಜಗರೆಡ್ಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ಧಾರೆ.
ತಾಲ್ಲೂಕಿನ ತಳಕು ಹೋಬಳಿಯ ಗಿಡ್ಡಾಪುರ ಗ್ರಾಮದಲ್ಲಿ ಲಕ್ಷö್ಮಮ್ಮ ಎಂಬುವವರ ವಾಸದ ಮನೆ ಮೇಲೆ ಮಳೆಯಿಂದ ಮರಬಿದ್ದು ಯಾವುದೇ ಪ್ರಾಣಾಹಾನಿಯಾಗಿಲ್ಲವಾದರೂ ಮನೆಯ ಮೇಲ್ಭಾಗದ ಶೀಟುಗಳು ಒಡೆದು ಸುಮಾರು ೨೦ ಸಾವಿರ ನಷ್ಟ ಸಂಭವಿಸಿದೆ.
ಗೌಡಗೆರೆ ಗ್ರಾಮದ ರತ್ನಮ್ಮ ಎಂಬುವವರ ಮನೆ ಕುಸಿದು ೩೦ ಸಾವಿರ ನಷ್ಟ ಸಂಭವಿಸಿದೆ. ರೇಖಲಗೆರೆಯ ಜೋಗಿಬೋರಯ್ಯ ಎಂಬುವವರ ವಾಸದ ಮನೆ ಮಳೆಗೆ ಬಿದ್ದು ಸುಮಾರು ೩೦ (Challakere rain report) ಸಾವಿರ ನಷ್ಟ ಸಂಭವಿಸಿದೆ.
ಭೀಮಗೊಂಡನಹಳ್ಳಿಯ ಪಂಪಾಚಾರಿ ಮನೆಯ ಗೋಡೆ ಬಿದ್ದು ಸುಮಾರು ೪೦ ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ. ತಿಪ್ಫಾರೆಡ್ಡಿಹಳ್ಳಿ ಗ್ರಾಮಯ ಯಲ್ಲಕ್ಕ ಎಂಬುವವರ ಮನೆ ಮೇಲ್ಚಾವಣಿ ಬಿದ್ದು ೩೦ ಸಾವಿರ, ರತ್ನಮ್ಮ ಎಂಬುವವರ ವಾಸದ ಮನೆ ಬಿದ್ದು ೫೦ (Challakere rain report) ಸಾವಿರ ನಷ್ಟವಾಗಿದೆ.
ಇದನ್ನೂ ಓದಿ: ಮಳೆ ವರದಿ: ಚಿತ್ರದುರ್ಗ ಜಿಲ್ಲೆಯಲ್ಲಿ 29 ಮಿ.ಮೀ ಮಳೆ |ಎಲ್ಲೆಲ್ಲಿ ಎಷ್ಟಾಗಿದೆ ಮಳೆ | Rain report
ಒಟ್ಟು ಎರಡು ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ. ತಾಲ್ಲೂಕಿನ ಗಂಜಿಗುಂಟೆ, ಎನ್.ದೇವರಹಳ್ಳಿ, ಸಿದ್ದಾಪುರ, ಚಿಕ್ಕಮಧರೆ ಗ್ರಾಮಗಳಲ್ಲಿನ ಜಮೀನು, ಮನೆಗಳಿಗೆ ನೀರು ನುಗ್ಗಿ ಅಪಾರವಾದ ನಷ್ಟ ಸಂಭವಿಸಿದೆ.