Chitradurga news|nammajana.com|26-9-2024
ನಮ್ಮಜನ.ಕಾಂ, ಚಳ್ಳಕೆರೆ: ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಶ್ರೀರಂಗಪಟ್ಟಣ-ಬೀದರ್ ರಾಷ್ಟ್ರೀಯ ಹೆದ್ದಾರಿ(೧೫೦ಎ) ನಿರ್ಮಾಣವನ್ನು ಪೂರೈಸಿ ಕಳೆದ ೨೩ ಸೋಮವಾರ (Challakere Road) ಹಿರಿಯೂರು ಮೂಲಕ ಬಳ್ಳಾರಿಗೆ ಹೋಗುವ ವಾಹನಗಳಿಗೆ ಸಿದ್ದಾಪುರ ಗೇಟ್‌ಗಳಿ ಬೈಪಾಸ್ ರಸ್ತೆ ಮೂಲಕ ವಾಹನ ಓಡಾಟಕ್ಕೆ ಅನುವು ಮಾಡಿಕೊಟ್ಟಿತ್ತು.
ಈ ಬಗ್ಗೆ ಮಾಹಿತಿ ಪಡೆದ ಸುತ್ತಮುತ್ತಲ ಗ್ರಾಮಸ್ಧರು ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಗ್ರಾಮಗಳಿಗೆ ಹೈವೆಯಿಂದ ಸಂರ್ಪಕ ರಸ್ತೆ ನಿರ್ಮಿಸದೆ ಸಾರ್ವಜನಿಕರು ಹಾಗೂ ವಾಹನಗಳ ಓಡಾಟಕ್ಕೆ ತೊಂದರೆ ಉಂಟು ಮಾಡಿಲ್ಲದೆ, ರಾಷ್ಟೀಯ ಹೆದ್ಧಾರಿ ಹಾದು (Challakere Road) ಹೋಗಿರುವ ಮಾರ್ಗದೂದ್ದಕ್ಕೂ ಯಾವುದೇ ಅಪಾಯ ಸೂಚಿಸುವ ನಾಮಫಲಕಗಳನ್ನು ಅಳವಡಿಸಿದೆ ನಿರ್ಲಕ್ಷ್ಯ ತೋರಿದ್ದಾರೆ.
ಗ್ರಾಮೀಣ ಭಾಗದಿಂದ ಬರುವ ಜನರು ಹೆದ್ದಾರಿಗೆ ಕಾಲಿಡುತ್ತಲೆ ಪ್ರಾಣಕ್ಕೆ ಸಂಚಕಾರ ಗ್ಯಾರಂಟಿ ಎಂದು ಆರೋಪಿಸಿ ಪ್ರಾಧಿಕಾರದ ವಿರುದ್ದ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಹಿರಿಯೂರಿನಿಂದ ಬರುವ ವಾಹನಗಳು ಸಿದ್ದಾಪುರ ಬಳಿ ಬೈಪಾಸ್ ರಸ್ತೆಯನ್ನು ಬಳಸಲು ಅವಕಾಶ ಮಾಡಿದೆ, ಆದರೆ ಈ ಗ್ರಾಮದ ಸಂಪರ್ಕ ರಸ್ತೆ ನಿರ್ಮಿಸದೆ ನಿರ್ಲಕ್ಷ್ಯ ತೋರಿದೆ. ಈ ಬಗ್ಗೆ ಆಕ್ರೋಶಗೊಂಡ ಗ್ರಾಮಸ್ಥರು ಹೆದ್ದಾರಿಯಲ್ಲೇ ಕುಳಿತು (Challakere Road) ಪ್ರತಿಭಟನೆ ನಡೆಸಿದರು.
ನರಹರಿ ನಗರದ ಹಿಂಭಾಗದ ರೈಲ್ವೆ ಮಾರ್ಗಕ್ಕೆ ಯಾವುದೇ ಸೂಕ್ತ ರಸ್ತೆಯನ್ನು ಮಾಡದೆ ಇರುವುದು ಅಲ್ಲಿನ ಗ್ರಾಮಸ್ಥರಿಗೆ ತೊಂದರೆಯಾಗಿದೆ.
ವೀರದಿಮ್ಮನಹಳ್ಳಿ ಗ್ರಾಮಕ್ಕೂ ಸಹ ಸಂಪರ್ಕ ರಸ್ತೆಯನ್ನು ನಿರ್ಮಿಸು ಏಕ ರಾಷ್ಟೀಯ ಹೆದ್ಧಾರಿ ನಿರ್ಮಾಣವಾಗಿದ್ದು, ಇದರಿಂದ ಗ್ರಾಮದಿಂದ ಬರುವ ವಾಹನಗಳು, ಸಾರ್ವಜನಿಕರು ರಾಷ್ಟ್ರೀಯ ಹೆದ್ಧಾರಿಯನ್ನು ದಾಟಿಹೋಗಬೇಕಿದೆ. ಆದರೆ, ಇಲ್ಲಿ ಯಾವುದೇ ರಕ್ಷಣಾ ವ್ಯವಸ್ಥೆ ಮಾಡಿಲ್ಲ, ಇದರಿಂದ ಸಾರ್ವಜನಿಕರು ಕೈಯಲ್ಲಿ ಪ್ರಾಣಹಿಡಿದು ರಸ್ತೆ ದಾಟಬೇಕಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ನಡೆಗೆ ಬೇಸರ ವ್ಯಕ್ತಪಡಿಸಿದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸುದ್ದಿ ತಿಳಿದ ಕ್ಷೇತ್ರ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ, ತಾಲ್ಲೂಕು ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ದಾವಿಸಿ ಮುಷ್ಕರ ನಿರತ (Challakere Road) ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಲೋಚನೆ ಇಲ್ಲದೆ ಗ್ರಾಮಗಳಿಗೆ ಸಂಪರ್ಕವನ್ನು ರಸ್ತೆ ನಿರ್ಮಿಸದೇ ಇರುವುದು ಕಂಡು ಬಂದಿತು. ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು, ಸಿದ್ದಾಪುರ,(Challakere Road) ವೀರದಿಮ್ಮನಹಳ್ಳಿ, ಸಾಣಿಕೆರೆ ಮುಂತಾದ ಗ್ರಾಮಗಳ ಸಂಪರ್ಕ ರಸ್ತೆಯನ್ನು ನಿರ್ಮಿಸುವಂತೆ ನಿರ್ದೇಶನ ನೀಡಿದರು. ಶಾಸಕರ ಭರವಸೆ ಮೇರೆಗೆ ಮುಷ್ಕರವನ್ನು ವಾಪಾಸ್ ಪಡೆಯಲಾಯಿತು.
ಇದನ್ನೂ ಓದಿ: JOB NEWS: ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಜಿಲ್ಲಾಧಿಕಾರಿ ಜಿ.ವೆಂಕಟೇಶ್, ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಲೋಕೋಪಯೋಗಿ ಇಲಾಖೆ ಅಧಿಕಾರಿ ವಿಜಯಭಾಸ್ಕರ್, ರಾಷೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಧ ದಿವ್ಯನಾಥ, ಪ್ರವೀನ್, ಜೀಲಾನ್, ತಹಶೀಲ್ಧಾರ್ ರೇಹಾನ್‌ಪಾಷ, ಗ್ರಾಮಸ್ಥರಾದ ಜಗದೀಶ್‌ನಾಯ್ಕ, ಸುನೀಲ್‌ಕುಮಾರ್, ಕುಮಾರ್‌ನಾಯ್ಕ, ಅಶೋಕ್‌ನಾಯ್ಕ, ಸಿದ್ದಾಪುರಮಂಜುನಾಥ, ರುದ್ರೇಶ್, ದರ್ಶನ್ ಮುಂತಾದವರು ಉಪಸ್ಥಿತರಿದ್ದರು