Chitradurga news|Nammajana.com|29-8-2025
ನಮ್ಮಜನ.ಕಾಂ, ಚಳ್ಳಕೆರೆ: ಕರ್ನಾಟಕ ರಾಜ್ಯದಲ್ಲಿ ಅನೇಕ (Road widening) ನಗರಗಳು ಸದ್ದಿಲ್ಲವೆ ವ್ಯಾಪಿಸುತ್ತಿವೆ, ಚಳ್ಳಕೆರೆ ನಗರವೂ ಸಹ ಇತ್ತೀಚಿನ ವರ್ಷಗಳಲ್ಲಿ ತನ್ನ ವಿಸ್ತರಣೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಪ್ರತಿನಿತ್ಯವೂ ನಗರದಲ್ಲಿ ಓಡಾಡುವ ಸಾರ್ವಜನಿಕ ಹಾಗೂ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ ರಸ್ತೆ ವಿಸ್ತರಣೆ ಅನಿವಾರ್ಯವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಅವರು, ಶುಕ್ರವಾರ ಸಂಜೆ ಕಳೆದ ಕೆಲವು ದಿನಗಳಿಂದ ಬಳ್ಳಾರಿ ರಸ್ತೆಯ ಎರಡೂ ಬದಿಯಲ್ಲಿ ವಿಸ್ತರಣಾ ಕಾರ್ಯಕ್ಕೆ ಸಿದ್ದತೆ ನಡೆಸಿದ್ದು ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು
ಈ ಭಾಗದ ಜನರ ಆಶಯದಂತೆ ಸಾರ್ವಜನಿಕರ ಹಿತದೃಷ್ಠಿಯಿಂದ ಪಾವಗಡ ಮತ್ತು ಬಳ್ಳಾರಿ ರಸ್ತೆಗಳ ವಿಸ್ತರಣಾ ಕಾರ್ಯಕೈಗೊಂಡಿದ್ದು, ಸಾರ್ವಜನಿಕರು ಸಂತೋಷದಿಂದ ಇದನ್ನು ಸ್ವಾಗತಿಸಿ ಸಹಕಾರ ನೀಡಬೇಕೆಂದು ಎಂದು ಮನವಿ (Road widening) ಮಾಡಿದರು.
ಇದೇ ಸಂದರ್ಭದಲ್ಲಿ ಎರಡೂ ಬದಿಯ ಅಂಗಡಿ ಮಾಲೀಕರು ರಸ್ತೆ ವಿಸ್ತರಣೆಯಿಂದ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ, ನಮ್ಮೆಲ್ಲರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಎಂಬ ಆತಂಕವನ್ನು ಶಾಸಕರಲ್ಲಿ ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಟಿ.ರಘುಮೂರ್ತಿ ರಸ್ತೆ ವಿಸ್ತರಣೆ ಕಾರ್ಯ ಈಗ ಸರ್ವೆಸಾಮಾನ್ಯ. ನಗರ ಹಾಗೂ ಜನಸಂಖ್ಯೆ ಬೆಳೆದಂತೆ ಸೌಲಭ್ಯವನ್ನು ನೀಡಬೇಕಾಗುತ್ತದೆ.
ವಿಶೇಷವಾಗಿ ಚಳ್ಳಕೆರೆ ನಗರದಲ್ಲಿ ಪಾವಗಡ ಮತ್ತು ಬಳ್ಳಾರಿ ರಸ್ತೆ ವಿಸ್ತರಣೆಗೆ ಕಳೆದ ೨೦ ವರ್ಷಗಳಿಂದ ಸಾರ್ವಜನಿಕರು ಒತ್ತಾಯ ಮಾಡುತ್ತಲೇ ಬಂದಿದ್ಧಾರೆ. ರಸ್ತೆ ವಿಸ್ತರಣೆಯಲ್ಲಿ ಜನರ ರಕ್ಷಣೆ (Road widening) ಜೊತೆಗೆ ಸೌಖ್ಯ ಅಡಗಿದೆ ಎಂದರು.
ಪಾವಗಡ ರಸ್ತೆಗೆ ಭೇಟಿ ನೀಡಿದ ಶಾಸಕರು ಅಲ್ಲಿನ ಕೆಲವು ಅಂಗಡಿ ಮಾಲೀಕರು ರಸ್ತೆ ವಿಸ್ತರಣೆ ಕಾರ್ಯಕ್ಕೆ ತಡೆಕೋರಿ ಹೈಕೋರ್ಟ್ ಮೊರೆಹೋಗಿದ್ದು ಅವರೊಂದಿಗೆ ಮಾತನಾಡಿದ ಅವರು, ನಗರದ ಅಭಿವೃದ್ದಿ ದೃಷ್ಠಿಯಿಂದ ನೀವು ಈ ಕಾರ್ಯಕ್ಕೆ ಕೈಜೋಡಿಸಬೇಕು, ನಿಮ್ಮ ಸಹಕಾರ ಅಗತ್ಯ, ರಸ್ತೆ ವಿಸ್ತರಣೆಯಾದರೆ ನೀವು ಸೇರಿದಂತೆ ಇಡೀ ಊರಿಗೆ ಅನುಕೂಲವೆಂದರು. ಈ ವಿಚಾರದಲ್ಲಿ ಎಲ್ಲರೂ ಸರ್ಕಾರದೊಂದಿಗೆ ಕೈಜೋಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದರು.
ಇದನ್ನೂ ಓದಿ: CHITRADURGA ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ
ನಗರಸಭೆ ಅದ್ಯಕ್ಷೆ ಶಿಲ್ಪಮುರುಳಿ, ಸದಸ್ಯರಾದ ಕೆ.ವೀರಭದ್ರಪ್ಪ, ಎಂ.ಜೆ.ರಾಘವೇಂದ್ರ, ಬಿ.ಟಿ.ರಮೇಶ್‌ಗೌಡ, ತಹಶೀಲ್ಧಾರ್ ರೇಹಾನ್‌ಪಾಷ, ಪೌರಾಯುಕ್ತ ಎಚ್.ಜಿ.ಜಗರೆಡ್ಡಿ, ಎಇಇ ಕೆ.ವಿನಯ್, ಸಹಾಯಕ ಇಂಜಿನಿಯರ್ ಲೋಕೇಶ್, ಶಶಿಧರ, ಸ್ಥಳೀಯರಾದ ಸಿ.ಬಿ.ಆದಿಭಾಸ್ಕರಶೆಟ್ಟಿ, ಹೂವಿನಜಗದೀಶ್, ಬಾಲಾಜಿವೆಂಕಟೇಶ್, ತಿಪ್ಪೇರುದ್ರಪ್ಪ,ಕಂದಾಯಾಧಿಕಾರಿ ತಿಪ್ಫೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
