
Chitradurga news|nammajana.com|12-03-2025
ನಮ್ಮಜನ.ಕಾಂ, ಚಳ್ಳಕೆರೆ: ಪ್ರತಿವರ್ಷದಂತೆ ಈ ವರ್ಷವೂ ನಗರಸಭೆಯ ೨೦೨೫-೨೬ನೇ ಸಾಲಿನ ದಿನವಹಿ ಮಾರುಕಟ್ಟೆ, ವಾರದ ಸಂತೆ, ಬಸ್ ನಿಲ್ದಾಣ ಮತ್ತು ಖಾಸಗಿ ದ್ವಿಚಕ್ರವಾಹನ (Challakere) ನಿಲುಗಡೆ ವಾರ್ಷಿಕ ಹರಾಜನ್ನು ನಗರಸಭೆ ಕಾರ್ಯಾಲಯದಲ್ಲಿ ಮಾ.೧೨ರ ಬುಧವಾರ ಬೆಳಗ್ಗೆ ೧೧ಗಂಟೆ ಬಹಿರಂಗ ಹರಾಜು ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಎಚ್.ಜಿ.ಜಗರೆಡ್ಡಿ ತಿಳಿಸಿದ್ಧಾರೆ.
ಅವರು, ಈ ಬಗ್ಗೆ ಮಾಹಿತಿ ನೀಡಿ, ಹರಾಜಿನಲ್ಲಿ ಭಾಗವಹಿಸುವವರು ದಿನವಹಿ ಮಾರುಕಟ್ಟೆಗೆ ಒಂದು ಲಕ್ಷ, ವಾರದಸಂತೆಗೆ ೫೦ ಸಾವಿರ, ಖಾಸಗಿ ಬಸ್ ನಿಲ್ದಾಣಕ್ಕೆ ೫೦ ಸಾವಿರ ಹಾಗೂ ದ್ವಿಚಕ್ರವಾಹನ ೧೦ ಸಾವಿರ ಮುಂಗಡ ಠೇವಣಿಯನ್ನು ಪಾವತಿಸಿ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ.

ಇದನ್ನೂ ಓದಿ: Dina Bhavishya | ದಿನ ಭವಿಷ್ಯ | ಉದ್ಯಮದಲ್ಲಿ ಲಾಭ, ಆರೋಗ್ಯ ಸುಧಾರಣೆ
ಹರಾಜಿನ ಬಿಡನ್ನು ಅಂಗೀಕರಿಸುವ, ನಿರಾಕರಿಸುವ ಎಲ್ಲಾ ಜವಾಬ್ದಾರಿ ಪೌರಾಯುಕ್ತರಾಗಿರುತ್ತದೆ. ಉಳಿದ ನಿಬಂಧನೆಗಳ ಬಗ್ಗೆ ಕಚೇರಿಯಲ್ಲಿ ಮಾಹಿತಿ ಪಡೆಯುವಂತೆ ಮನವಿ ಮಾಡಿದ್ಧಾರೆ.
