Chitradurga news|nammajana.com|11-8-2024
ನಮ್ಮಜನ.ಕಾಂ, ಚಳ್ಳಕೆರೆ: ಕಳೆದ ಜುಲೈ ತಿಂಗಳ ೩೦ರ ಮಂಗಳವಾರ ರಾತ್ರಿ ಕೇರಳದ ವಯನಾಡು ಪ್ರದೇಶದಲ್ಲಿ ಗುಡ್ಡ ಕುಸಿತದಿಂದ ನೂರಾರು ಜನರು ಪ್ರಾಣಕಳೆದುಕೊಂಡು (Challakere Youth Team) ಸುಮಾರು ೩೦೦ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೀಡಾಗಿದ್ದು, ವಯನಾಡು ಜಿಲ್ಲಾ ಕೇಂದ್ರ ಸ್ಥಾಪಿಸಿರುವ ನಿರಾಶ್ರಿತರ ಕೇಂದ್ರದಲ್ಲಿ ರಕ್ಷಣೆ ಪಡೆಯುತ್ತಿದ್ಧಾರೆ.
ಪ್ರಧಾನಮಂತ್ರಿ ನರೇಂದ್ರಮೋದಿ ಗುಡ್ಡಕುಸಿತ ಘಟನೆಯನ್ನು ಕಣ್ಣಾರೆಕಂಡು ರಾಷ್ಟೀಯ ವಿಪತ್ತು ಎಂದು ಈಗಾಗಲೇ ಘೋಷಿಸಿದ್ಧಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂಪುಟ ಸಚಿವರು ಹಾಗೂ ವಯನಾಡು ಜಿಲ್ಲೆಯ ಜಿಲ್ಲಾಧಿಕಾರಿ, ಕನ್ನಡತಿ ದೊಡ್ಡೇರಿಯ ಆರ್.ಮೇಘಶ್ರೀ ಈಗಾಗಲೇ ನಿರಾಶ್ರಿತರ ಕೇಂದ್ರದ ಸಾವಿರಾರು ಜನರಿಗೆ (Challakere Youth Team) ಆಶ್ರಯದ ಜೊತೆಗೆ ಹಲವಾರು ಸೌಲಭ್ಯವನ್ನು ನೀಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ಧಾರೆ.
ಕರ್ನಾಟಕವೂ ಸೇರಿದಂತೆ ದೇಶದ ಇತರೆ ಕಡೆಗಳಿಂದ ಆಹಾರ ಸಾಮಾಗ್ರಿ, ಬಟ್ಟೆ, ಔಷಧ, ಚಪ್ಪಲಿ, ಬಕೆಟ್, ತಂಬಿಗೆ, ಬೆಡ್ಶೀಟ್ ಮುಂತಾದ ವಸ್ತುಗಳನ್ನು ಸಂಗ್ರಹಿಸಿ ವಯನಾಡಿನ ನಿರಾಶ್ರಿತ (Challakere Youth Team) ಕೇಂದ್ರಕ್ಕೆ ತಲುಪಿಸುವ ಕಾರ್ಯ ಭರದಿಂದ ಸಾಗುತ್ತಿದೆ.ಇದನ್ನೂ
ಈ ಮದ್ಯೆ ವಯನಾಡಿನ ನಿರಾಶ್ರಿತ ಕೇಂದ್ರಕ್ಕೆ ಚಳ್ಳಕೆರೆ ನಗರಸಭಾ ಸದಸ್ಯರಾದ ಟಿ.ಮಲ್ಲಿಕಾರ್ಜುನ್, (Challakere Youth Team) ಎಚ್.ಪ್ರಶಾಂತ್ಕುಮಾರ್(ಪಚ್ಚಿ), ಕೆಡಿಪಿ ನಾಮಿನಿ ಸದಸ್ಯ ಸುರೇಶ್ಕುಮಾರ್, ಯುವ ಮುಖಂಡ ಎಸ್.ಎಂ.ನಭಿ, ಬೇಕರಿವಿಜಯ್, ರಂಜಿತ್ಕುಂಚಂ, ವಾಸಿಂ, ಪೈಜಾನ್ ಮುಂತಾದವರು ಸುಮಾರು ಎರಡು ಲಕ್ಷ ಮೌಲ್ಯದ ಬಟ್ಟೆ, ಬರೆ, ಔಷಧ, ಆಹಾರ ಸಾಮಾಗ್ರಿಗಳನ್ನು ನಿರಾಶ್ರಿತ ಕೇಂದ್ರಕ್ಕೆ ಟಾಟಾ ಎಸಿ ವಾಹನದ ಮೂಲಕ ನೇರವಾಗಿ ಅಲ್ಲಿನ ನಿರಾಶ್ರಿತರ ಕೇಂದ್ರಕ್ಕೆ ನೀಡಿದ್ಧಾರೆ.
ಇದನ್ನೂ ಓದಿ: VV Sagara water level Today: ವಿ.ವಿ.ಸಾಗರದ ಇಂದಿನ ನೀರಿನ ಮಟ್ಟ |11-8-2023
ಇದೇ ಸಂದರ್ಭದಲ್ಲಿ ವಯನಾಡಿನ ದುರಂತಕ್ಕೆ ಉದಾರವಾಗಿ ವಸ್ತುಗಳನ್ನು ನೀಡಿದ ಎಲ್ಲರಿಗೂ ಚಳ್ಳಕೆರೆ ಬಾಯ್ಸ್ ತಂಡ ಅಭಿನಂದನೆ ಸಲ್ಲಿಸಿದೆ.