Chitradurga news |nammajana.com|13-8-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಚನ್ನಮ್ಮನಾಗತಿಹಳ್ಳಿ ವ್ಯಾಪ್ತಿಯ ಕರಿಯಣ್ಣನ ಮರಡಿ ಅರಣ್ಯ ಪ್ರದೇಶದಲ್ಲಿ ನಾಗಪ್ಪನ ಪುರಾತನ ಕಾಲದ (Channamnagathihalli)ದೇವಸ್ಥಾನದಲ್ಲಿ ನಾಗಪಂಚಮಿ ಹಿನ್ನೆಲೆಯಲ್ಲಿ ಕಾಡುಗೊಲ್ಲ ಸಮುದಾಯದ ಕೆಲ ವಂಶದವರು ಅಲ್ಲಿರುವ ಕಲ್ಲಿನ ನಾಗರಕ್ಕೆ ಪೂಜೆ ಸಲ್ಲಿಸುತ್ತಾ ಬಂದಿರುತ್ತಾರೆ.
ಕಳೆದ ವಾರವಷ್ಟೇ ಅಮವಾಸ್ಯೆ ಹಿನ್ನೆಲೆಯಲ್ಲಿ ನಿಧಿ ಆಸೆಯಿಂದ ಕೆಲವು ವ್ಯಕ್ತಿಗಳು ನಾಗಪ್ಪನ ದೇವರ ಚಿತ್ರವನ್ನು ಭಗ್ನಗೊಳಿಸಿದ್ದಲ್ಲದೆ, ಸುತ್ತಮುತ್ತಲ ಮರ‍್ನಾಲ್ಕು ಕಡೆ ಗುಂಡಿ ತೋಡುವ ಮೂಲಕ ನಿಧಿಯನ್ನು ಹುಡುಕುವ ಪ್ರಯತ್ನ ಮಾಡಿದ್ಧಾರೆ.
ಇತ್ತೀಚಿಗಷ್ಟೇ ಸಮುದಾಯದ ಕೆಲ ಮುಖಂಡರು ಅಲ್ಲಿಗೆ ತೆರಳಿದಾಗ ನಿಧಿಗಳ್ಳರು ನಿಧಿಯ ಆಸೆಗಾಗಿ ಅಲ್ಲಿ ಗುಂಡಿ (Channamnagathihalli) ತೆಗೆದಿದ್ದಲ್ಲದೆ, ನಾಗಪ್ಪ ದೇವರ ವಿಗ್ರಹವನ್ನು ಭಗ್ನಗೊಳಿಸಿದ್ಧಾರೆ. ಸುದ್ದಿ ಗ್ರಾಮದಲ್ಲಿ ಹರಡಿ ಗ್ರಾಮದಿಂದ ಹಲವಾರು ಜನರು ಬಂದು ನಿಧಿಗಳ್ಳರ ಕೃತ್ಯವನ್ನು ಖಂಡಿಸಿದ್ದಾರೆ.
ನಿಧಿಗಳ್ಳರ ಕಣ್ಣು ಈ ಪ್ರದೇಶದ ಮೇಲೆ ಬಿದ್ದಿರುವುದಕ್ಕೆ ಈ ಭಾಗದ ಜನರು ಭಯಭಿತರಾಗಿದ್ಧಾರೆ. ಕಾರಣ, ಯಾದವ (Channamnagathihalli) ಸಮುದಾಯದವರು ಕಳೆದ ಹಲವಾರು ವರ್ಷಗಳಿಂದ ಇಲ್ಲಿರುವ ನಾಗಪ್ಪ ದೇವರನ್ನು ಪೂಜಿಸುತ್ತಾ ಬಂದಿದ್ಧಾರೆ.
ಇದನ್ನೂ ಓದಿ: ಜಿಟಿಟಿಸಿ ಪ್ರವೇಶಾತಿ: ಅವಧಿ ವಿಸ್ತರಣೆ | GTTC Chitradurga
ಹಳೇಕಾಲದ ಕಲ್ಲಿನ ಕಟ್ಟಡದಲ್ಲಿ ನಾಗರಮೂರ್ತಿಗಳಿದ್ದು (Channamnagathihalli) ಅವುಗಳ ರಕ್ಷಣೆಯ ಬಗ್ಗೆ ಸಮುದಾಯದ ಮುಖಂಡರು ಚಿಂತನೆಯಲ್ಲಿ ತೊಡಗಿದ್ಧಾರೆ.