Chitradurga news|Nammajana.com|09-08-2025
ನಮ್ಮಜನ.ಕಾಂ, ಮೊಳಕಾಲ್ಮುರು: ರಾಜ್ಯದಲ್ಲಿ ಬಾಲ್ಯವಿವಾಹ ಹೆಚ್ಚಳವಾಗುತ್ತಿವೆ. ಮಕ್ಕಳನ್ನು ಬಲವಂತವಾಗಿ ಮದುವೆ (child marriage Molakalmur) ಮಾಡುತ್ತಿರುವ ಘಟನೆ ಹೆಚ್ಚುತ್ತಿರುವ ನಡುವೆಯೇ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಪೋಷಕರು ವಿವಾಹಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಇದನ್ನು ತಪ್ಪಿಸಿ ಎಂದು ಸ್ವತಃ ಖುದ್ದಾಗಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡುವ ಮೂಲಕ ದಿಟ್ಟತನವನ್ನು ಬಾಲಕಿ ಪ್ರದರ್ಶಿಸಿರುವ ಘಟನೆ ಜರುಗಿದೆ.
ಪೋಲಿಸ್ ಠಾಣೆಗೆ ತೆರಳಿರುವ ಮಹಿಳೆ ನೇರವಾಗಿ ಪೋಲಿಸ್ ಅವರ ಬಳಿ ಸರ್ ”ನನಗೆ ವಯಸ್ಸು ಹದಿನಾರು, 8ನೇ (child marriage Molakalmur) ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದೇನೆ.
ಪೋಲಿಸ್ ಅವರು ಕೊಟ್ಟ ಬಾಲ್ಯ ವಿವಾಹ ಜಾಗೃತಿಯಿಂದ ಬಾಲಕಿ ಜಾಗೃತಿ
ಪೊಲೀಸ್ ಸಿಬ್ಬಂದಿ ಶಾಲೆಗೆ ಆಗಮಿಸಿ ಬಾಲ್ಯ
ಅನುಭವಿಸಬೇಕಾದ ತೊಂದರೆ, ಮಾನಸಿಕ, ದೈಹಿಕ ಆಸಮಾತೋಲನದಿಂದ ಆಗುವ ಅನಾನುಕೂಲ, ಮುಂಬರುವ ದಿನಗಳಲ್ಲಿ ಬಂದೊದಗಬಹುದಾದ ತೊಂದರೆ ಕುರಿತಯ ಜಾಗೃತಿ ಮೂಡಿಸಿದ್ದರು. ಅಂದು ಶಾಲೆಯಲ್ಲಿ ಕೇಳಿದ್ದ (child marriage) ಪೊಲೀಸರು ಬಾಲ್ಯವಿವಾಹ ಕುರಿತು ಮಾಡಿದ ಜಾಗೃತಿಯ ಮಾತುಗಳು ನೆನಪಾಗಿ ನೇರವಾಗಿ ಪೊಲೀಸ್ ಠಾಣೆಗೆ ಬಂದೆ” ಎಂದು ಬಾಲಕಿಯು ಪಿಎಸ್‌ಐ ಮಹೇಶ್ ಲಕ್ಷಣ್ ಹೊಸಪೇಟ ಸಮ್ಮುಖದಲ್ಲಿ ಪತ್ರಿಕೆಗೆ ವಿವರಿಸಿದಳು.
“ನನ್ನ ಹೆಸರು ಆರ್ಚನ(ಹೆಸರು ಬದಲಾಯಿಸಲಾಗಿದೆ) ನಾನೀಗ ಶಾಲೆ ಬಿಟ್ಟು ಮನೆಯಲ್ಲಿದ್ದೇನೆ. ನಮ್ಮ ಅಪ್ಪ ಅಮ್ಮ ಹಾಗೂ ಅಣ್ಣ ನನಗೆ ಮದುವೆ ಮಾಡಲು ಮುಂದಾಗಿದ್ದಾರೆ.
ಇತ್ತೀಚಿಗೆ ಹೆಂಡತಿ ಸಾವನ್ನಪ್ಪಿರುವ ವ್ಯಕ್ತಿಯೊಬ್ಬನಿಗೆ ಎರಡನೇ ಮದುವೆ ಮಾಡಲು ಈ ಭಾನುವಾರದ ನಂತರ ಬರುವ ಭಾನುವಾರ ಮದುವೆ ದಿನಾಂಕ ನಿಗದಿ ಮಾಡಿದ್ದಾರೆ. ನನಗೆ ಮದುವೆಯಾಗಲು ಈಗಲೇ ಇಷ್ಟವಿಲ್ಲ. ಆದರೂ ನನ್ನ ಪೋಷಕರು ಬಲವಂತ ಮಾಡುತ್ತಿದ್ದಾರೆ ” ಎಂದು ಬಾಲಕಿ ಮಾಹಿತಿ ನೀಡಿದ್ದಾಳೆ.
ಯಾರನ್ನೆಲ್ಲ ಪೋಲಿಸರು ವಿಚಾರಣೆಗೆ ಕರೆಸಿದರು.
ಕೆಲ ಸಮಯದ ನಂತರ ಪೊಲೀಸ್ ಅಧಿಕಾರಿ ಹಾಗೂ ಸಿಡಿಪಿಒ ಜತೆಗೂಡಿ ಬಾಲ್ಯ ವಿವಾಹಕ್ಕೆ ಆಣೆಗೊಳಿಸುತ್ತಿದ್ದಾರೆ. ಆರೋಪಿ ತಂದೆ, ತಾಯಿ ಹಾಗೂ ಅಣ್ಣನನ್ನು ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ನಾವು ದುರುವೆ ನಡೆಸಲು ಯಾವುದೇ ಸಿದ್ದತೆ ಮಾಡಿಕೊಂಡಿಲ್ಲ” ಎಂದು ಆರೋಪಿತರು ಹೇಳಲು (child marriage Molakalmur) ಮುಂದಾದರೂ, ತನಿಖೆ ನಡೆಸಿದಾಗ ತೀರ್ಮಾನಿಸಿದ್ದು ನಿಜವೆಂದು ಒಪ್ಪಿಕೊಂಡರು.
ಈಗ ವಿವಾಹ ಇಚ್ಛಿಸದ ಹಾಗೂ ಅಪ್ರಾಪ್ತಿಯಾಗಿರುವ ಬಾಲಕಿ, ಕಡೆಯ ತಂದೆ, ತಾಯಿಯನ್ನು ಸಂಜೆ ಚಿತ್ರದುರ್ಗದ ಮಕ್ಕಳ ಕಲ್ಯಾಣ ಕೇಂದ್ರ (ಸಿಡಬ್ಲ್ಯೂಎಸ್) ಬಾಲಕಿಯರ ಮಂದಿರಕ್ಕೆ ಕರೆದೊಯ್ಯಲಾಯಿತು.
ಡಿ.ರಾಜಣ್ಣ ಡಿವೈಎಸ್ಪಿ, ಚಳ್ಳಕೆರೆ ಇವರು ಹೇಳಿದ್ದಿಷ್ಟು
ಗ್ರಾಮೀಣ ಭಾಗದಲ್ಲಿ ಅಧಿಕಾರಿಗಳನ್ನು ಮರೆಮಾಚಿ
ನಡೆಸಲು ಮುಂದಾಗುತ್ತಿರುವ ಬಾಲ್ಯ ವಿವಾಹ ಪ್ರಕರಣಗಳ ಬಗ್ಗೆ ಜನರಲ್ಲಿ ಇತ್ತೀಚಿಗೆ ಹೆಚ್ಚು ಜಾಗೃತಿ ಮೂಡುತ್ತಿದೆ. ಒಬ್ಬಳೇ ಪೊಲೀಸ್ ಠಾಣೆಗೆ ಧೈರ್ಯವಾಗಿ ಆಗಮಿಸಿದ್ದು ನಿಜಕ್ಕೂ ನಮಗೆ ಹೆಮ್ಮೆ ತಂದಿದೆ. ಇದು ಅನ್ಯರಿಗೂ ಮಾದರಿಯಾಗಲಿದೆ.
ಮೊಳಕಾಲ್ಮುರು ಸಿಡಿಪಿಓ ನವೀನ್ ಹೇಳಿದ್ದಿಷ್ಟು
ಬಾಲಕಿಯ ದೂರಿನಲ್ಲಿ ಸತ್ಯ ಕಂಡಿರುವ ಹಿನ್ನೆಲೆಯಲ್ಲಿ ನಾವು ಅಪ್ರಾಪ್ತ ಬಾಲಕಿ, ಈಕೆಯ ತಂದೆ, ತಾಯಿಯನ್ನು ಚಿತ್ರದುರ್ಗದ ಸಿಡಬ್ಲ್ಯೂಎಸ್ಥೆ ಕರೆದೊಯ್ಯುತ್ತಿದ್ದೇವೆ. ಬಾಲಕಿಯನ್ನು (child marriage Molakalmur) ಬಾಲಮಂದಿರದಲ್ಲಿ ಬಿಡಲಾಗುವುದು.
