Chitradurga news | nammajana.com | 22-07-2025
ನಮ್ಮಜನ.ಕಾಂ,ಚಿತ್ರದುರ್ಗ: ಪಠ್ಯೇತರ ಚಟುವಟಿಕೆಗಳು ಮಕ್ಕಳ ಕಲಿಕೆಗೆ ಆಸಕ್ತಿ ನೀಡುವಂತೆ ಮಾಡುತ್ತವೆ ಎಂದು ಮೊಳಕಾಲ್ಮರು ತಾಲ್ಲೂಕು ಬಾಲಭವನ ಸಮಿತಿ ಕಾರ್ಯದರ್ಶಿ ಹಾಗೂ ಸಿಡಿಪಿಒ(CDPO) ನವೀನ್ ಕುಮಾರ್ ಹೇಳಿದರು.

ಇದನ್ನೂ ಓದಿ: ಜಿಲ್ಲಾ ಪಂಚಾಯತ್ ಸಿಇಒಗಳಿಗೆ PDO ನಿಯೋಜನೆ ಅಧಿಕಾರ
ಮೊಳಕಾಲ್ಮುರು ತಾಲ್ಲೂಕಿನ ಸೂಲೇನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೋಮವಾರ ರಾಜ್ಯ ಬಾಲ ಭವನ ಸೊಸೈಟಿ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ, ತಾಲೂಕು ಬಾಲ ಭವನ ಸಮಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಮ್ಮಿಕೊಂಡಿದ್ದ “ಮಕ್ಕಳ ಕಲಾ ಪ್ರತಿಭೆ” ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಸಂಗೀತ, ಬರವಣಿಗೆ, ಚಿತ್ರಕಲೆ, ವಿಜ್ಞಾನ ಅವಿಕ್ಷರಗಳು ಕಲಿಯುವುದರ ಮೂಲಕ ಅನುಕೂಲವಾಗುತ್ತದೆ. ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಬರವಣಿಗೆ ಚಿತ್ರಕಲೆಯ ಸ್ಪರ್ಧೆಗಳನ್ನು ಹಮ್ಮಿಕೊಂಡು ಅವರಲ್ಲಿರುವ ಪ್ರತಿಭೆ ಗುರುತಿಸಿ ಬಹುಮಾನ ನೀಡಲಾಗುತ್ತಿದೆ. ರಾಜ್ಯ ಬಾಲ ಭವನದ ಅಧ್ಯಕ್ಷ ಬಿ.ಆರ್ ನಾಯ್ಡು ಅವರ ಯೋಜನೆ ಗಡಿ ಪ್ರದೇಶಗಳ ಮಕ್ಕಳಿಗೆ ಸಹ ತಲುಪುತ್ತಿದೆ ಎಂದರು.
ಮಕ್ಕಳಿಗೆ ಯಾವುದೇ(CDPO) ತೊಂದರೆ ಇದ್ದಲ್ಲಿ ಅಥವಾ ಬಾಲ್ಯ ವಿವಾಹ ಕಂಡು ಬಂದಲ್ಲಿ 1098 ನಂಬರಿಗೆ ಉಚಿತವಾಗಿ ಕರೆ ಮಾಡಿ ತಿಳಿಸಬೇಕು. ಬಾಲ್ಯ ವಿವಾಹ ತಡೆಗಟ್ಟಬಹುದು ಎಂದರು.
ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
ಜಿಲ್ಲಾ ಬಾಲ ಭವನ ಕಾರ್ಯಕ್ರಮ ಸಂಯೋಜಕ ಡಿ.ಶ್ರೀಕುಮಾರ್, ಪ್ರಾಂಶುಪಾಲ ರಮೇಶ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಮಹಿಳಾ ಮೇಲ್ವಿಚಾರಕಿ ಲೀಲಾಬಾಯಿ, ಸಿರಿ ಸಂಪಿಗೆ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಕೆ.ಪವಿತ್ರ, ಚಿತ್ರಕಲೆ ಶಿಕ್ಷಕರಾದ ಧೂಳಪ್ಪ ರೆಡ್ಡಿ, ಶಿಕ್ಷಕರಾದ ದುರುಗಪ್ಪ, ರಹಿಮುನ್ನಿಸ, ವೆಂಕಟೇಶ್, ಹರೀಶ್, ಕುಮಾರ್, ರಾಮಚಂದ್ರಪ್ಪ, ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.
