Chitradurga News | Nammajana.com | 7-5-2024
ನಮ್ಮಜನ.ಕಾಂ.ಚಿತ್ರದುರ್ಗ:ಕೋಟೆ ನಾಡು ಚಿತ್ರದುರ್ಗದ ನಗರದ ದೊಡ್ಡಪೇಟೆಯಲ್ಲಿ ಅಕ್ಕ-ತಂಗಿ ಭೇಟಿ ಉತ್ಸವಕ್ಕೆ ಭರ್ಜರಿ ಸಿದ್ದತೆ ನಡೆದಿದ್ದು ಕ್ಷಣಗಣನೆ ಆರಂಭವಾಗಿದೆ.
ದೇವರಿಗೆ ವಿಶೇಷ ಅಲಂಕಾರ, ಮೆರವಣಿಗೆಗೆ ಸಿದ್ದತೆ ಹೂ ಪುಷ್ಪಗಳ ಅಲಂಕಾರ, ಹೊಸಬಟ್ಟೆ ತೊಟ್ಟು ಸಂಭ್ರಮಿಸುವ ಭಕ್ತರು, ಉಘ-ಉಘ ಎಂದು ಮೊಳಗುವ ಘೋಷಣೆಗೆ ಮುಗಿಲು ಮುಟ್ಟುವ ಭಕ್ತಿಯ ಪರಕಾಷ್ಠೆ, ಅಕ್ಕ ತಂಗಿಯರ ಸಂಗಮ ನೋಡಲು ಭಕ್ತರ ನೂಕುನುಗ್ಗಲು, ವಿಶೇಷ ಪೂಜೆ ಪುನಸ್ಕಾರ, ಪ್ರೀತಿ, ಪ್ರೇಮ ಗೆಳೆತನದ ಹಂಚಿಕೆ ಈ ಬೇಟಿಯಲ್ಲಿ ನಡೆಯುತ್ತದೆ.
ಹೌದು ಐತಿಹಾಸಿಕ ಚಿತ್ರದುರ್ಗ ನಗರದಲ್ಲಿ ಮಂಗಳವಾರ ನಡೆಯಲಿರುವ ಅಕ್ಕತಂಗಿಯರ ಭೇಟಿ ಉತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ರಂಗಯ್ಯನ ಮುಂಭಾಗದಲ್ಲಿ ಬಿರುಸಿನಿಂದ ತಯಾರಿಯಾಗಿದೆ. ಬಿಸಿಲಿನಾರ್ಭಟದಲ್ಲೂ ಭರ್ಜರಿಯಾಗಿ ಜನ ಸೇರುವ ನಿರೀಕ್ಷೆ ಇದೆ. ದೊಡ್ಡಪೇಟೆ ತುಂಬೆಲ್ಲ ಎಲ್ಲಿ ನೋಡಿದರೂ ಹಬ್ಬದ ವಾತಾವರಣ ಕಾಣುತ್ತಿದೆ.
ಚಿತ್ರದುರ್ಗ ನಗರದ ದೇವತೆಗಳಾದ ಬರಗೇರಮ್ಮ ಹಾಗೂ ತಿಪ್ಪಿನಘಟ್ಟಮ್ಮ ದೊಡ್ಡಪೇಟೆ ರಾಜಬೀದಿಯಲ್ಲಿ ಭೇಟಿ ಉತ್ಸವದ ಸಿದ್ಧತೆ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅಕ್ಕ ತಂಗಿ ಭೇಟಿಯ ಲೈವ್ ವಿಡಿಯೋ ನೋಡಿ :
ದೊಡ್ಟಪೇಟೆ ರಾಜ ಬೀದಿಯಲ್ಲಿ ಹಸಿರು ತೋರಣ, ಕಲರ್ ಲೈಟಿಂಗ್ , ಪೆಂಡಲ್, ಬ್ಯಾರಿಕೇಡ್ ನಿರ್ಮಾಣ, ಹೂವಿನ ಅಲಂಕಾರ ಸೇರಿ ಎಲ್ಲಾ ಸಿದ್ದತೆ ಮುಗಿದಿದ್ದು ಅಂತಿಮ ಹಂತಕ್ಕೆ ಎಲ್ಲಾ ಪರಿಶೀಲನೆ ನಡೆಯುತ್ತಿದೆ.
ಇದನ್ನೂ ಓದಿ: 4 ಲಕ್ಷ ಹಣ ಪಡೆಯುವಾಗ ಲೋಕಯುಕ್ತ ಬಲೆಗೆ ಬಿದ್ದ ಬಸವರಾಜಪ್ಪ
ವರ್ಷಕ್ಕೊಮ್ಮೆ ಮುಖಾಮುಖಿಯಾಗಿ ದೇವತೆಯರ ಭೇಟಿ ಉತ್ಸವದ ನೋಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ.